ಖಾಯಂ ನೇಮಕಾತಿ ವಿಚಾರ : ಸಕ್ಕರೆ ಕಾಖಾ೯ನೆ ನಿರ್ಧಾರ ವಿರೋಧಿಸಿ ಕಾಮಿ೯ಕರ ಪ್ರತಿಭಟನೆ

ಬಾಗಲಕೋಟೆ ಜಿಲ್ಲೆಯ ತಿಮ್ಮಾಪೂರ‌ ಬಳಿಯಿರೋ ರನ್ನ ಸಕ್ಕರೆ ಕಾಖಾ೯ನೆ ಸಿಬ್ಬಂದಿ ಖಾಯಂ ನೇಮಕಾತಿ ವಿಚಾರದಲ್ಲಿ ಕಾಖಾ೯ನೆ ಮತ್ತು ಕಾಮಿ೯ಕರ ಮಧ್ಯೆ  ಹಗ್ಗ ಜಗ್ಗಾಟ ಮುಂದುವರೆದಿದೆ.

ವ್ಯಾಜ್ಯ ಕೋಟ೯ ಮೆಟ್ಟಿಲೇರಿರುವಾಗ ಮುಚ್ಚಳಿಕೆ ಪತ್ರ ಬರೆದು ಕೊಡುವಂತೆ ಸೂಚಿಸಿರೋ ಕಾಖಾ೯ನೆ ಆಡಳಿತ ಮಂಡಳಿ ನಿರ್ಧಾರ ವಿರೋಧಿಸಿ ರನ್ನ ಸಹಕಾರಿ ಸಕ್ಕರೆ ಕಾಖಾ೯ನೆ ಎದುರು ಕಾಮಿ೯ಕರ ಪ್ರತಿಭಟನೆ ನಡೆಸಿದ್ದಾರೆ.

ಕಾಖಾ೯ನೆ ನಿಧಾ೯ರ ವಿರೋಧಿಸಿ ಕಳೆದ ಮೂರು ದಿನಗಳಿಂದ ಕಾಖಾ೯ನೆ ಎದುರು ಪ್ರತಿಭಟನೆಗೆ ಕಾಮಿ೯ಕರು ಮುಂದಾಗಿದ್ದಾರೆ. ಮೂರು ಷರತ್ತುಗಳೊಂದಿಗೆ ಮುಚ್ಚಳಿಕೆ ಪತ್ರ ರೆಡಿ ಮಾಡಿರೋ ಕಾಖಾ೯ನೆ ಆಡಳಿತ ಮಂಡಳಿ, ಕಾಖಾ೯ನೆಯ 545 ಕಾಮಿ೯ಕರಿಗೆ ಮುಚ್ಚಳಿಕೆ ಪತ್ರಕ್ಕೆ ಸಹಿ ಮಾಡಿ ಕೊಡುವಂತೆ ಸೂಚಿಸಿದೆ.

ಕಾಖಾ೯ನೆ ಆಡಳಿತ ಮಂಡಳಿ ಮುಚ್ಚಳಿಕೆಯಲ್ಲಿ ಕಾಖಾ೯ನೆಗೆ ನಿಷ್ಠೆ ಸೇರಿದಂತೆ ನ್ಯಾಯ ತೀಮಾ೯ನ ಆಗೋವರೆಗೆ ಪ್ರತಿಭಟನೆ, ಧರಣಿಗಳಿಗೆ ಮುಂದಾಗೋದಿಲ್ಲ ಎಂದು ನಮೂದಿಸಿದೆ. ಇದಕ್ಕೆ ಒಪ್ಪಿಗೆ ಸೂಚಿಸಿ ಸಹಿ ಮಾಡುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಚ್ಚಳಿಕೆ ಪತ್ರಕ್ಕೆ ಕಾಮಿ೯ಕರು ಸಹಿ ನೀಡಲು ವಿರೋಧಿಸುತ್ತಿದ್ದಾರೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights