ಗಮನಿಸಿ : ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ 2ನೇ ದಿನದ ಕಾರ್ಯಕ್ರಮ ಮುಂದೂಡಿಕೆ

ಸಮ್ಮೇಳನದ ನಾಳೆಯ ಕಾರ್ಯಕ್ರಮಗಳನ್ನು ಕಾನೂನು ಮತ್ತು ಸುವ್ಯವಸ್ಥೆ ಕಾಯುವ ದೃಷ್ಟಿಯಿಂದ ಮುಂದೂಡಲಾಗಿದೆ.

ಬಿಜೆಪಿ ಮತ್ತು ಅದರ ಕೋಮುವಾದಿ ಗುಂಪುಗಳು ಇಂದು ಸಮ್ಮೇಳನ ಹಾಳುಮಾಡಲು ನಡೆಸಿದ ನಿರಂತರ ಯತ್ನಗಳು ಫಲಕೊಟ್ಟಿಲ್ಲ. ಕನ್ನಡದ ಮನಸ್ಸುಗಳ ಶ್ರಮ ಮತ್ತು ಸಂಯಮದಿಂದ ಇಂದಿನ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡ ಚರಿತ್ರೆ ನಿರ್ಮಿಸಿದೆ. ಒಂದು ಹೊಸ ಪರಂಪರೆಗೆ ನಾಂದಿ ಹಾಡಿದೆ.

ಆದರೆ ಈ ಯಶಸ್ಸಿನಿಂದ ಅವಮಾನಿತವಾಗಿರುವ ವಿರೋಧಿಗಳು “ನಾಳೆ ಸಾವಿರ ಸಂಖ್ಯೆಯಲ್ಲಿ ಪೆಟ್ರೋಲ್ ಬಾಂಬ್ ಮತ್ತಿತರ ಮಾರಕಾಸ್ತ್ರಗಳೊಂದಿಗೆ ಸಮ್ಮೇಳನಕ್ಕೆ ನುಗ್ಗುವ ಸಾಧ್ಯತೆ ಇದೆ. ನಾಳೆ ಏನೇ ಅಹಿತಕರ ಘಟನೆ ನಡೆದರೂ ನಾವು ರಕ್ಷಣೆ ನೀಡಲಾರೆವು. ನಿರ್ಬಂಧ ಉಲ್ಲಂಘಿಸಿ ಸಮ್ಮೇಳನ ಮಾಡಿದ ಆರೋಪದ ಮೇಲೆ ಪ್ರಚೋದನೆ ನೀಡಿದ್ದಾಗಿ ನಿಮ್ಮ ಮೇಲೆಯೇ ಪ್ರಕರಣ ಹೇರುತ್ತೇವೆ” ಎಂದು ಪೊಲೀಸರು ನೋಟೀಸ್ ನೀಡಿದ್ದಾರೆ.

ಆ ಹಿನ್ನೆಲೆಯಲ್ಲಿ ಶಾಂತಿಪ್ರಿಯರಾದ ನಾವು, ಶಾಂತಿ ಮತ್ತು ಸುವ್ಯವಸ್ಥೆಗೆ ಬೆಲೆ ಕೊಟ್ಟು ನಾಳೆಯ ಕಾರ್ಯಕ್ರಮವನ್ನು ಮುಂದೂಡಲು ತೀರ್ಮಾನಿಸಿದ್ದೇವೆ ಎಂದು ಸ್ವಾಗತ ಸಮಿತಿ ತಿಳಿಸಿದೆ.
ದಯವಿಟ್ಟು ಈ ಮಾಹಿತಿ ಎಲ್ಲರಿಗೂ ರವಾನಿಸಿ..  ನಾಳೆ ಸಮ್ಮೇಳನಕ್ಕೆ ಬಂದು ಯಾರೂ ನಿರಾಶರಾಗಿ ವಾಪಸ್ ಹೋಗುವಂತಾಗದಿರಲಿ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights