ಗಾಂಧಿ ಕುಟುಂಬವಲ್ಲದವರು ಕಾಂಗ್ರೆಸ್ ಪಕ್ಷದ‌ ಅಧ್ಯಕ್ಷರಾಗಬೇಕು: ಪ್ರಿಯಾಂಕ ಗಾಂಧಿ

ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷಕ್ಕೆ ಗಾಂಧಿ ಕುಟುಂಬದವರನ್ನು ಹೊರತು ಪಡಿಸಿ ಪಕ್ಷದ ಬೇರೆ ಯಾರಾದರೂ ಅಧ್ಯಕ್ಷರಾಗಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದ್ದಾರೆ.

ನಮ್ಮ ಕುಟುಂಬದಲ್ಲಿ ಯಾರು ಕೂಡ ಪಕ್ಷದ ಅಧ್ಯಕ್ಷರಾಗುವುದು ಬೇಡ ಎಂದು ಈ ಹಿಂದೆ ರಾಹುಲ್‌ ಗಾಂಧಿ ಹೇಳಿದ್ದರು.  ಅವರ ಮಾತಿಗೆ ಸಹಮತವೂ ಇದೆ. ಗಾಂಧಿ ಕುಟುಂಬವನ್ನು ಹೊರತು ಪಡಿಸಿಯೂ ಪಕ್ಷವು ತನ್ನದೇ ಹಾದಿಯನ್ನು  ಕಂಡುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಪ್ರಿಯಾಂಕ ಹೇಳಿದ್ದಾರೆ.

ಹೊಸ ಮಾಧ್ಯಮವನ್ನು ಅರ್ಥಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ನಿಧಾನವಾಗಿತ್ತು. ಈ ಬಗೆಗೆ ಪಕ್ಷವು ಅಣಿಯಾಗುವ ಹೊತ್ತಿಗೆ ಪಕ್ಷಕ್ಕೆ ಹಾನಿ ಸಂಭವಿಸಿದೆ. ಹಾಗಾಗಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಹಿನ್ನಡೆ ಅನುಭವಿಸಬೇಕಿಗೆ ಎಂದು ಅವರು ಹೇಳಿದ್ದಾರೆ.

ಯಾರೇ ಪಕ್ಷದ ಅಧ್ಯಕ್ಷರಾದರು ನಾನು ಅವರ ಮಾತನ್ನ ಚಾಚು ತಪ್ಪದೆ ಪಾಲಿಸುತ್ತೇನೆ. ಉತ್ತರ ಪ್ರದೇಶವಲ್ಲ, ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಕೆಲಸ ಮಾಡಲು ಪಕ್ಷ ಸೂಚಿಸಿದರೆ ಅದನ್ನು ಪಾಲಿಸುತ್ತೇವೆ. ಶ್ರದ್ಧೆಯಿಂದ ನಿರ್ವಹಿಸುತ್ತೇನೆ ಎಂದು ತಿಳಿಸಿದ್ದಾರೆ.

ಸದ್ಯ ರಾಹುಲ್‌ ಗಾಂಧಿ ಮತ್ತೆ ಅಧ್ಯಕ್ಷರಾಗಬೇಕು ಎಂದು ಬೆಂಬಲಿಗರು ಹೇಳುತ್ತಿದ್ದು, ಅದಕ್ಕಾಗಿ ಕಾಂಗ್ರೆಸ್‌ನ ಹಿರಿಯರು ಮತ್ತು ಕಿರಿಯರ ನಡುವೆ ಚಟಾಪಟಿ ನಡೆದಿತ್ತು. ಅಧ್ಯಕ್ಷಗಿರಿಯನ್ನು ರಾಹುಲ್‌ಗಾಂಧಿ ಈ ಮೊದಲೇ ತಿರಸ್ಕರಿಸಿದ್ದರು. ಗಾಂಧಿಯೇತರರು ಕಾಂಗ್ರೆಸ್‌ನ ಚುಕ್ಕಾಣಿ ಹಿಡಿಯಬೇಕೆಂದು ಅವರು ಆಗ್ರಹಿಸಿದ್ದರು. ಕಳೆದ ವಾರವೂ ಅಧ್ಯಕ್ಷಸ್ಥಾನದ ಚರ್ಚೆ ಹಾಗೆಯೇ ಉಳಿಸಿದ್ದಿದ್ದು, ಸದ್ಯ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಶೀಘ್ರದಲ್ಲೇ ನೂತನ ಅಧ್ಯಕ್ಷರ ಆಯ್ಕೆಯಾಗಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಸಿರಾ ಉಪಚುನಾವಣೆ ಜೆಡಿಎಸ್‌/ಕಾಂಗ್ರೆಸ್‌ಗೆ ಪ್ರತಿಷ್ಠೆ! ಬಿಜೆಪಿಗೆ ಹೊಸ ಹುರುಪು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights