ಚಿಕ್ಕಮಗಳೂರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪೆಟ್ರೋಲ್ ಬಾಂಬ್ ಸಿಡಿಸುವ ಸಂಚು..?

ಸಾಕಷ್ಟು ವಿರೋಧದ ನಡುವೆಯೂ ನಿನ್ನೆ ಮತ್ತು ಇಂದು ಶೃಂಗೇರಿಯಲ್ಲಿ ಆಯೋಜನೆಗೊಂಡಿದ್ದ ಸಾಹಿತ್ಯ ಸಮ್ಮೇಳನ ದಿಢೀರನೇ ಮುಂದೂಡಲಾಗಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಎಲ್ಲರಿಗೂ ಯಾಕೆ..? ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಆದರೆ ಇದಕ್ಕೆ ಉತ್ತರ ಮಾತ್ರ ಭಯಾನಕವಾಗಿದೆ.

ಚಿಕ್ಕಮಗಳೂರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಎಸೆಯಲು ಮುಂದಾಗಿದ್ರಾ ವಿರೋಧಿಗಳು? ಎನ್ನುವ ಮಾಹಿತಿ  ಸಮ್ಮೇಳನದ ಆಯೋಜಕರಿಗೆ ನೋಟಿಸ್ ನೀಡಿದ ಪೊಲೀಸರಿಂದ ತಿಳಿದು ಬಂದಿದೆ.

ಹೌದು.. ಇಂದು ನಡೆಯಬೇಕಿದ್ದ ಚಿಕ್ಕಮಗಳೂರು ಕನ್ನಡ ಸಾಹಿತ್ಯ ಸಮ್ಮೇಳನ 2ನೇ ದಿನದ ಮುಂದೂಡುವಂತೆ ಆಯೋಜನರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಾವಿರಾರು ಜನರು ನಿಮ್ಮ ಸಮ್ಮೇಳನಕ್ಕೆ ನುಗ್ಗಿ ತಡೆಯೋ ಸಾಧ್ಯತೆಯಿದೆ. ಹೆಚ್ಚು ಪ್ರಮಾಣದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಡುವ ಬಗ್ಗೆ ನೋಟೀಸ್ ನಲ್ಲಿ ಉಲ್ಲೇಖವಾಗಿದೆ. ನೋಟಿಸ್ ಬೆನ್ನಲ್ಲೇ 2ನೇ ದಿನದ ಸಮ್ಮೇಳನವನ್ನು ಆಯೋಜಕರು ಮುಂದೂಡಿದ್ದಾರೆ.

ಚಿಕ್ಕಮಗಳೂರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲ್ಕುಳಿ ವಿಠಲ್ ಹೆಗ್ಡೆ ಸಮ್ಮೇಳನಾಧ್ಯಕ್ಷ ಆಗಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ಸಚಿವ ಸಿ.ಟಿ ರವಿ ಸೇರಿದಂತೆ ನಕ್ಸಲ್ ವಿರೋಧಿ ಹೋರಾಟ ಸಮಿತಿ, ಎಬಿವಿಪಿ, ವಿಹೆಚ್ಪಿ ಸೇರಿ ಕೆಲ ಸಂಘಟನೆಗಳಿಂದಲೂ ಕೂಡ ವಿಠ್ಠಲ್ ಹೆಗ್ಡೆ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದರು.

ಶೃಂಗೇರಿ ಪೊಲೀಸರು ನಿನ್ನೆ ತಡರಾತ್ರಿ ಆಯೋಜಕರಿಗೆ ನೋಟಿಸ್ ನೀಡಿದ್ದಾರೆ. ಇದರಿಂದ ಭಾರೀ ವಿರೋಧದ ನಡುವೆಯೂ ನಿನ್ನೆ ಯಶಸ್ವಿಯಾಗಿ ನಡೆದಿದ್ದ ಮೊದಲ ದಿನದ ನುಡಿಹಬ್ಬವನ್ನು ಇಂದು ಮುಂದೂಡಲಾಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights