ದೇಶದಲ್ಲಿ ಕೊರೊನಾ ಏರಿಳಿಕೆ : 32,937 ಹೊಸ ಕೇಸ್ ಪತ್ತೆ – 417 ಜನ ಬಲಿ!

ದೇಶದಲ್ಲಿ ಕೊರೊನಾ ಏರಿಳಿಕೆಯಾಗುತ್ತಿದ್ದು 24 ಗಂಟೆಗಳಲ್ಲಿ 32,937 ಹೊಸ ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ 417 ಜನ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ಬಿಡುಗಡೆ ಮಾಡಿದೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,22,25,513ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,31,642ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,81,947 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 35,909 ರೋಗಿಗಳು ಚೇತರಿಸಿಕೊಂಡಿದ್ದು, ದೇಶಾದ್ಯಂತ ಒಟ್ಟು 3,14,11,924 ಜನ ಚೇತರಿಸಿಕೊಂಡಿದ್ಧಾರೆ.

32,937 ಹೊಸ ಪ್ರಕರಣಗಳಲ್ಲಿ ಕೇರಳ 18,582 ಪ್ರಕರಣಗಳನ್ನು ದಾಖಲಿಸಿದೆ. ಮಹಾರಾಷ್ಟ್ರದಲ್ಲಿ 4,797 ಪ್ರಕರಣಗಳು, ತಮಿಳುನಾಡು 1,896 ಪ್ರಕರಣಗಳು, ಆಂಧ್ರ ಪ್ರದೇಶದಲ್ಲಿ 1,506 ಪ್ರಕರಣಗಳು ಮತ್ತು ಕರ್ನಾಟಕದಲ್ಲಿ 1,431 ಪ್ರಕರಣಗಳು ದಾಖಲಾಗಿವೆ.

24 ಗಂಟೆಗಳಲ್ಲಿ 417 ಜನ ಬಲಿಯಾಗಿದ್ದು ಮಹಾರಾಷ್ಟ್ರದಲ್ಲಿ 130 ಜನ ಬಲಿಯಾಗಿದ್ದಾರೆ. ಕೇರಳದಲ್ಲಿ 102 ಜನ ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು 17,43,114 ಡೋಸ್‌ಗಳನ್ನು ನೀಡಲಾಗಿದ್ದು ಇದುವರೆಗೆ ಒಟ್ಟು 54,58,57,108 ಡೋಸ್‌ಗಳನ್ನು ನೀಡಲಾಗಿದ. ಕಳೆದ 24 ಗಂಟೆಗಳಲ್ಲಿ ಒಟ್ಟು 11,81,212 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.