OTTಯಲ್ಲಿ ರಿಲೀಸ್‌ ಆಗಲಿವೆ ಭರ್ಜರಿ ಸಿನಿಮಾಗಳು; ಕನ್ನಡದ ಯಾವೆಲ್ಲಾ ಹೊಸ ಸಿನಿಮಾಗಳು ಬರಲಿವೆ ನೋಡಿ!

ಕೊರೊನಾ ಲಾಕ್‌ಡೌನ್‌ನಿಂದಾಗಿ ಥಿಯೇಟರ್‌ಗಳು, ಮಾಲ್‌ಗಳು, ಮಲ್ಟಿಫ್ಲೆಕ್ಸ್‌ಗಳು ಬಂದ್‌ ಆಗಿದ್ದು, ಸಿನಿ ಪ್ರೇಮಿಗಳು ತಮ್ಮ ನೆಚ್ಚಿನ ನಟ/ನಟಿಯರ ಸಿನಿಮಾಗಳನ್ನು ಕಣ್ತುಂಬಿಕೊಳ್ಳಲಾಗದೆ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಆ ರೀತಿಯಲ್ಲಿ ಬೇಸರಗೊಳ್ಳುವ ಅಗತ್ಯ ಸದ್ಯಕ್ಕಂತೂ ದೂರಾಗಿದೆ. ಏಕೆಂದರೆ, ಈಗ ಎಲ್ಲೆಲ್ಲಿಯೂ ಓಟಿಟಿ (ಓವರ್‌ ದ ಟಾಪ್‌)ಗಳದ್ದೇ ಕಾರುಬಾರು ಹೆಚ್ಚಾಗಿದೆ. ಮೊದಲೆಲ್ಲಾ ಹೊಸ ಸಿನಿಮಾಗಳನ್ನು ನೋಡಬೇಕೆಂದರೆ ಸಿನಿಮಾ ಥಿಯೇಟರ್‌ಗಳಿಗೂ ಹೋಗಬೇಕಾಗಿತ್ತು. ಈಗ ಹಾಗಿಲ್ಲ, ಎಲ್ಲವೂ ನಮ್ಮ ಮೊಬೈಲ್‌ನಲ್ಲೇ ಸಿಗುತ್ತಿವೆ. ಥಿಯೇಟರ್‌ಗೂ ಬಾರದ ಸಿನಿಮಾಗಳು ಓಟಿಟಿಗಳಲ್ಲಿಯೇ ರಿಲೀಸ್‌ ಆಗುತ್ತಿವೆ.

ಹಾಗಾಗಿ, ಥಿಯೇಟರ್, ಮಾಲ್, ಮಲ್ಟಿಫ್ಲೆಕ್ಸ್‌ಗಳು ಮುಚ್ಚಿವೆ, ಹೊಸ ಸಿನಿಮಾ ನೋಡಲಾಗುತ್ತಿಲ್ಲ ಎಂಬ ಮಾತಿಗೆ ಆಸ್ಪದವೇ ಇಲ್ಲ.

ಕೊರೊನಾ ಲಾಕ್‌ಡೌನ್‌ ನಡುವೆ, ಎಲ್ಲಿ ಯಾವಾಗ ಬೇಕಾದರೂ ನೋಡಲು ಸ್ಯಾಂಡಲ್‌ವುಡ್‌ನ ಕನ್ನಡ ಸಿನಿಮಾಗಳಿಂದ ಹಿಡಿದು ಹಾಲಿವುಡ್‌ನ ಸಿನಿಮಾಗಳೂ ಓಟಿಟಿಯಲ್ಲಿ ರಿಲೀಸ್‌ ಆಗಲು ರೆಡಿಯಾಗಿವೆ.

Global Premiere Of LAW, Along With Exciting Titles On Amazon Prime

ಕನ್ನಡದ ಪುನೀತ್‌ ರಾಜ್‌ಕುಮಾರ್ ಅವರು ಪಿಆರ್‌ಕೆ ಪ್ರೊಡಕ್ಷ್‌ನ “ಲಾ‘ ಸಿನಿಮಾ ಓಟಿಟಿ ಪ್ಲಾಟ್‌ಫಾರ್ಂ ಆದ ಅಮೇಜಾನ್‌ ಪ್ರೈಮ್‌ನಲ್ಲಿ ನಾಳೆ (ಜುಲೈ 17) ರಿಲೀಸ್‌ ಆಗಲಿದೆ. ಕ್ರೈಂ ಥ್ರಿಲ್ಲರ್ ಕಥಾವಸ್ತು ಹೊಂದಿರುವ ಈ ಚಿತ್ರದಲ್ಲಿ, ರಾಗಿಣಿ ಪ್ರಜ್ವಲ್ ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್, ಸುಧಾರಾಣಿ, ಸಿರಿ ಪ್ರಹ್ಲಾದ್ ಮತ್ತಿತ್ತರರು ಪ್ರಮುಖ ಪಾತ್ರದ್ಲಲಿ ಅಭಿನಯಿಸಿದ್ದಾರೆ. ಸಧ್ಯದ ಬಹು ನಿರೀಕ್ಷೆಯ ಸಿನಿಮಾ ಇದಾಗಿದೆ. ಇದರ ಟ್ರೈಲರ್‌ ಕೂಡ ಕಳೆದ ವಾರ ಅಮೆಜಾನ್‌ ಪ್ರೈಂನಲ್ಲೇ ರಿಲೀಸ್‌ ಆಗಿತ್ತು.

ಇದಲ್ಲದೆ, ಪುನೀತ್‌ ಪಿಆರ್‌ಕೆ ನಿರ್ಮಾಣದ್ದೇ ಆದ “ಫ್ರೆಂಚ್‌ ಬಿರಿಯಾನಿ” ಕನ್ನಡ ಸಿನಿಮಾ ಕೂಡ ಜುಲೈ 24 ರಂದು ಪ್ರೈಮ್‌ನಲ್ಲೇ ರಿಲೀಸ್‌ ಆಗಲಿದೆ.

Shakuntala Devi Human-Computer (2020) Movie Download Tamilrockers

ಕನ್ನಡದ ಸಿನಿಮಾಗಳ ಜೊತೆಗೆ, ಖ್ಯಾತ ಬರಹಗಾರ್ತಿ, ಗಣಿತತಜ್ಞೆ ಹಾಗೂ ಹ್ಯುಮನ್‌ ಕಂಪ್ಯೂಟರ್‌ ಎಂಬ ಬಿರುದು ಪಡೆದಿದ್ದ ಶಕುಂತಲಾ ದೇವಿ ಅವರ ಜೀವನಾಧಾರಿತ ಚಿತ್ರ, ವಿದ್ಯಾಬಾಲನ್ ಅಭಿನಯದ  ‘ಶಕುಂತಲಾ ದೇವಿ‘ ಬಾಲಿವುಡ್‌ ಸಿನಿಮಾದ ಟ್ರೈಲರ್‌ ಕೂಡ ರಿಲೀಸ್‌ ಆಗಿದ್ದು, ಜುಲೈ 31ರಂದು ಸಿನಿಮಾ ಪ್ರೈಮ್‌ನಲ್ಲಿ ನೋಡಲು ಸಿಗಲಿದೆ.

ಅಲ್ಲದೆ, ಜಾತಿ, ಧರ್ಮ ಮೀರಿದ ಪ್ರೀತಿ, ಹೆಣ್ಣಿನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನಾದರಿಸಿದ‌  ಎ ಸ್ಯೂಟೇಬಲ್ ಬಾಯ್ ಎಂಬ ವೆಬ್‌ ಸೀರಿಸ್‌ನ ಟ್ರೈಲರ್‌ ಕೂಡ “ನೆಟ್‌ಫ್ಲಿಕ್ಸ್‌”ನಲ್ಲಿ ಬಿಡುಗಡೆಯಾಗಿದ್ದು, ಸಧ್ಯದಲ್ಲಿ ನೆಟ್‌ಫ್ಲಿಕ್ಸ್‌ನಲ್ಲೇ ರಿಲೀಸ್‌ ಆಗಲು ರೆಡಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights