ಚುನಾವಣೆಯಲ್ಲಿ ನನಗೆ ಯಾರಾರ್ಯು ಬೆಂಬಲ ಕೊಟ್ಟಿದ್ದಾರೆ ಅವರೆಲ್ಲರ ಪರವಾಗಿ ನಾನಿರ್ತೀನಿ – ಸುಮಲತಾ
ಆ ಕೆಲವರು ನನ್ನನು ಪ್ರಶ್ನೆ ಮಾಡ್ತಿದ್ದಾರೆ ನೀವು ಆ ಪಕ್ಷ ಸೇರ್ತಿರಾ, ಈ ಪಕ್ಷ ಸೇರ್ತಿರಾ? ಅವ್ರಿಗೆ ಬೆಂಬಲ ಕೊಡಲ್ವ? ಇವ್ರಿಗೆ ಕೊಡಲ್ವ ಅಂತಾ ಕೇಳ್ತಾರೆ. ಚುನಾವಣೆಯಲ್ಲಿ ನನಗೆ ಯಾರಾರ್ಯು ಬೆಂಬಲ ಕೊಟ್ಟಿದ್ದಾರೆ ಅವರೆಲ್ಲರ ಪರವಾಗಿ ನಾನಿರ್ತೀನಿ. ನಾನು ಯಾರನ್ನು ಮರೆಯೆಲ್ಲ,ನಾನು ಯಾರನ್ನು ಕೈ ಬಿಡಲ್ಲ ಎಂದು ಮಂಡ್ಯದ ಕೆ.ಆರ್.ಪೇಟೆಯಲ್ಲಿ ಸಂಸದೆ ಸುಮಲತಾ ಹೇಳಿದ್ದಾರೆ.
ನನ್ನ ಗೆಲುವಿಗೆ ಕಾರಣ ಮಂಡ್ಯದ ಜನ. ಆ ಮಂಡ್ಯದ ಜನರ ಒಳ್ಳೆಯದಾಗ್ಲಿಕ್ಕೆ ನಾನು ಏನೇನು ಕ್ರಮ ತಗೋಬೇಕು ಏನೇನು ಹೆಜ್ಜೆ ಇಡಬೇಕು ಅದನ್ನ ಮಾತ್ರ ನಾನು ಮಾಡೇ ಮಾಡ್ತಿನಿ.
ಇದಕ್ಕೆ ನಾನು ಯಾರ ಅಕೌಂಟ್ ಗೂ ಬರಲ್ಲ,ಯಾರಿಗೂ ನಾನು ಆನ್ಸರಬಲ್ ಅಲ್ಲ. ನಿಜವ್ಯಾಕೆ ಅಲ್ಲೋಗ್ತೀರಾ ನೀವ್ಯಾಕೆ ಇಲ್ಲೋಗ್ತಿರಾ, ನೀವ್ಯಾಕೇ ಅವ್ರನ್ನ ಮಾತಾಡಿಸ್ತೀರಾ, ನೀವ್ಯಾಕೆ ಇಲ್ಲಿರ್ತೀರಾ ಅನ್ನೋಕೆ ಯಾರಿಗೂ ಹಕ್ಕಿಲ್ಲ ಈ ವಿಷಯದಲ್ಲಿ. ಯಾಕೇಂದ್ರೆ ನನ್ನ ಉದ್ದೇಶದಲ್ಲಿ ತಪ್ಪಿಲ್ಲ,ದುರುದ್ದೇಶ ಇಲ್ಲ. ನಾನು ಏನೇ ಹೆಜ್ಜೆ ಹಾಕಿದ್ರು ಅದು ನನ್ನ ಈ ಮಂಡ್ಯ ಜನ್ರಿಗಾಗಿ ಹೊರತು ಬೇರೆನು ಇಲ್ಲ. ಇದ್ರಲ್ಲಿ ನನ್ನ ಸ್ವಾರ್ಥ ಏನು ಇಲ್ಲ ಎಲ್ಲವು ನನ್ನ ಮಂಡ್ಯ ಜನರಿಗಾಗಿ ಮಾತ್ರ ಎಂದು ಸುಮಲತಾ ಸ್ಪಷ್ಟಪಡಿಸಿದ್ದಾರೆ.

