ಜಿಯೋ ಮೇಲೆ 6,598 ಕೋಟಿ ಹೂಡಿಕೆ ಮಾಡಿದ ಅಮೆರಿಕಾದ ಸಂಸ್ಥೆ

ಮುಕೇಶ್​ ಅಂಬಾನಿ ಒಡೆತನದ ರಿಲಾಯನ್ಸ್​ ಜಿಯೋ ಸಂಸ್ಥೆಯ ಮೇಲೆ ವಿದೇಶಿ ಸಂಸ್ಥೆಗಳು ಹೂಡಿಕೆ ಮಾಡಲು ಮುಂದಾಗುತ್ತಲೇ ಇವೆ. ಈಗ ಅಮೆರಿಕ ಮೂಲದ ಜನರಲ್​ ಅಟ್ಲಾಂಟಿಕ್​ 6,598 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಒಂದೇ ತಿಂಗಳಲ್ಲಿ ಇದು ನಾಲ್ಕನೇ ಹೂಡಿಕೆ ಆಗಿದೆ.

ಜಿಯೋ ಸಂಸ್ಥೆ ಶೇ. 1.34 ಪಾಲನ್ನು 6598.38 ಕೋಟಿ ರೂಪಾಯಿಗೆ ಜನರಲ್​ ಅಟ್ಲಾಂಟಿಕ್​ ಸಂಸ್ಥೆಗೆ ಮಾರಾಟ ಮಾಡಿದೆ. ಈ ಮೂಲಕ ಮತ್ತೊಂದು ಬೃಹತ್​ ಹೂಡಿಕೆಯನ್ನು ಸಂಸ್ಥೆ ಪಡೆದಿದೆ.

ಅಮೆರಿಕದ ಟೆಕ್​ ಸಂಸ್ಥೆ ಫೇಸ್​ಬುಕ್ ಜಿಯೋದ ಶೇ.9.99 ಪಾಲನ್ನು ಖರೀದಿಸಿತ್ತು. ಈ ಷೇರಿನ ಮೌಲ್ಯ 43,574 ಕೋಟಿ ರೂಪಾಯಿ ಆಗಿದೆ. ಇನ್ನು, ಖಾಸಗಿ ಹೂಡಿಕೆ ನಿರ್ವಹಣಾ ಸಂಸ್ಥೆಯಾ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1ರಷ್ಟು ಪಾಲನ್ನು ಖರೀದಿಸಿತ್ತು. ಇದರ ಮೌಲ್ಯ ಸುಮಾರು 5,655.75 ಕೋಟಿ ರೂ. ಮೊತ್ತವಾಗುತ್ತದೆ. ಜಿಯೋದ ಶೇ.2.3 ಪಾಲನ್ನು 11,367 ಕೋಟಿ ರೂಪಾಯಿಗೆ ವಿಸ್ತಾ ಸಂಸ್ಥೆ ಪಡೆದುಕೊಂಡಿದೆ.

ಜಿಯೋ ಸಂಸ್ಥೆ ಒಂದು ತಿಂಗಳ ಅವಧಿಯಲ್ಲಿ ಒಟ್ಟು, 67,194.75 ಹೂಡಿಕೆ ಪಡೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights