ಸಿಎಂ ಮನೆ ಮುಂದೆ ರಾಜಕೀಯ ಹೈಡ್ರಾಮಾ : ಶಂಕರ್​ ಯು-ಟರ್ನ್​- ರಾಣೇಬೆನ್ನೂರು ಟಿಕೇಟ್ ಯಾರಿಗೆ..?

ರಾಣೆಬೆನ್ನೂರಿನಲ್ಲಿ ಯಾರೇ ಬಿಜೆಪಿ ಅಭ್ಯರ್ಥಿಯಾದರೂ ಅವರನ್ನು ನಾನು, ನನ್ನ ಕುಟುಂಬಸ್ಥರು ಹಾಗೂ ನನ್ನ ಬೆಂಬಲಿಗರು ಗೆಲ್ಲಿಸಲು ಕೈ ಜೋಡಿಸುತ್ತೇವೆ ಎಂದು ಸ್ವಯಿಚ್ಚೆಯಿಂದ ಒಪ್ಪಿಕೊಂಡ ರಾಣೇಬೆನ್ನೂರು  ಅನರ್ಹ ಶಾಸಕ ಆರ್​. ಶಂಕರ್, ಈ ಬಾರಿ ತಾವು ಉಪಚುನಾವಣೆಯಿಂದ ಸ್ಪರ್ಧಿಸಿಲು ಹಿಂದೆ ಸರಿದಿದ್ದಾರೆ ಎಂದು ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಬಿಎಸ್​ವೈ ಭೇಟಿಗೂ ಮೊದಲು ಆರ್​ ಶಂಕರ್​ ಕೂಡ ಆಕ್ರೋಶ ಹೊರ ಹಾಕಿದ್ದರು. “ಉಪಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ನಾನಂತೂ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ನನಗೆ ಟಿಕೇಟ್ ಕೊಡಲೇಬೇಕು,” ಎಂದಿದ್ದರು. ಆದರೆ,  ಸಿಎಂ ಬಿಎಸ್​ವೈ ಭೇಟಿ ನಂತರ ಅವರು ಉಲ್ಟಾ ಹೊಡೆದಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ..? ಸಿಎಂ ಭೇಟಿ ಬಳಿಕ ಆಗಿದ್ದೇನು..?

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಶಂಕರ್ ಅವರನ್ನು ಎಂ ಎಲ್ ಸಿ ನಂತರ ಮಂತ್ರಿ ಸ್ಥಾನ ಕೊಡಿಸುವ ಭರವಸೆ ನೀಡಿದ್ದೇನೆ. ನಾನು ಕೊಟ್ಟ ಮಾತು ತಪ್ಪಿ ಖರ್ಚಿಗೆ ಅಂಟಿಕೊಂಡವನಲ್ಲ. ಅವರಿಗೆ ಸಚಿವ ಸ್ಥಾನ ಕೊಡಿಸುವ ಜವಬ್ದಾರಿ ನನ್ನದು ಎಂದು ಭರವಸೆ ನೀಡಿದ್ದಾರೆ. ಹೀಗಾಗಿ ಶಂಕರ್ ಈ ಬಾರಿ ಉಪಚುನಾವಣೆಯಿಂದ ದೂರ ಸರಿಯುವ ನಿರ್ಧಾರ ಮಾಡಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಡಿಸೆಂಬರ್ 5 ರಂದು ನಡೆಯುವ ಉಪಚುನಾವಣೆಯಲ್ಲಿ 15 ಕ್ಷೇತ್ರದಲ್ಲಿ ಗೆಲುವು ಖಚಿತ, 100 ರಷ್ಟು ನಾವು ಗೆಲ್ಲುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅರುಣ್ ಕುಮಾರ್ ಗೆ ರಾಣೆಬೆನ್ನೂರು ಟಿಕೇಟ್ ಪ್ರಾಪ್ತಿಯಾಗಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಆದರೆ ಶಂಕರ್ ಅವರ ಈ ನಿರ್ಧಾರವನ್ನು ರಾನೇಬೆನ್ನೂರು ಶಾಸಕರು ತಿರಸ್ಕಾರ ಮಾಡಿದ್ದಾರೆ. ಶಂಕರ್ ಅವರು ಸ್ಪರ್ಧಿಸಲೇಬೇಕು ಇಲ್ಲವಾದರೆ ನಾವುಗಳು ಯಾರು ನಿಮಗೆ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ.

ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಡಿಸೆಂಬರ್ ನಲ್ಲಿ ಹೊಸ ಬದಲಾವಣೆಯಾಗುವುದಂತು ಖಂಡಿತ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights