ನರೇಂದ್ರ ಗಿರಿ ಸಾವು ಪ್ರಕರಣ ಕೈಗೆತ್ತಿಕೊಂಡ ಸಿಬಿಐ : ಎಫ್ಐಆರ್ ದಾಖಲು..!
ನರೇಂದ್ರ ಗಿರಿ ಸಾವು ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದು ಯುಪಿ ಪೊಲೀಸರಿಂದ ಪ್ರಕರಣದ ದಾಖಲಾತಿಗಳನ್ನು ಪಡೆದಿದು ಎಫ್ಐಆರ್ ದಾಖಲಿದೆ.
ಅಖಿಲ ಭಾರತೀಯ ಅಖಾರ ಪರಿಷತ್ ಮುಖ್ಯಸ್ಥ ಮಹಂತ್ ನರೇಂದ್ರ ಗಿರಿ ಸಾವಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್ಐಆರ್ ದಾಖಲಿಸಿದೆ.
ಮಹಾಂತ್ ನರೇಂದ್ರ ಗಿರಿ ಅವರು ಸೋಮವಾರ(ಸೆ.20) ಬಘಂಬರಿ ಗದ್ದಿ ಮಠದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ಶವಪರೀಕ್ಷೆ ವರದಿಯಲ್ಲಿ ನರೇಂದ್ರ ಗಿರಿ ನೇಣು ಬಿಗಿದ ಕಾರಣ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನರೇಂದ್ರ ಗಿರಿ ಸಾವಿನ ಕುರಿತು ಸಿಬಿಐ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಶಿಫಾರಸು ಮಾಡಿದ್ದು ಎಫ್ಐಆರ್ ದಾಖಲಿಸಲಾಗಿದೆ.
ಯುಪಿ ಪೊಲೀಸರ ತನಿಖೆಯ ಪ್ರಕಾರ, 72ರ ನರೇಂದ್ರ ಗಿರಿ ಅವರು ಸೋಮವಾರ ಊಟದ ನಂತರ ಕೊನೆಯದಾಗಿ ತನ್ನ ಕೋಣೆಗೆ ಪ್ರವೇಶಿಸಿದನು. ಸಂಜೆ, ಆತನ ಶಿಷ್ಯರು ಬಾಗಿಲು ತಟ್ಟಿದಾಗ, ಅದಕ್ಕೆ ಉತ್ತರ ಸಿಗಲಿಲ್ಲ. ಆತನ ಸೆಲ್ ಫೋನಿನಲ್ಲಿ ಪದೇ ಪದೇ ಕರೆ ಮಾಡಿದರೂ ಉತ್ತರಿಸಲಿಲ್ಲ, ನಂತರ ಆತನ ಶಿಷ್ಯರು ಬಾಗಿಲು ಮುರಿದು ಕೋಣೆಗೆ ಪ್ರವೇಶಿಸಿದರು. ಈ ವೇಳೆ ನರೇಂದ್ರ ಗಿರಿ ಅವರ ದೇಹ ಚಾವಣಿಗೆ ನೇತಾಡುತ್ತಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಹಂತ್ ನರೇಂದ್ರ ಗಿರಿ ಸಾವನ್ನಪ್ಪಿದ ಕೋಣೆಯಲ್ಲಿ ಡತ್ ನೋಟ್ ಪತ್ತೆಯಾಗಿದ್ದು ಇದರಲ್ಲಿ ಅವರು ತೊಂದರೆಗೊಳಗಾದ ಹಲವಾರು ಜನರ ಹೆಸರನ್ನು ಬರೆಯಲಾಗಿದೆ ಎನ್ನಲಾಗುತ್ತಿದೆ.
“ನಾನು ಘನತೆಯಿಂದ ಬದುಕಿದ್ದೇನೆ, ಅವಮಾನದಿಂದ ಬದುಕಲು ಸಾಧ್ಯವಾಗುವುದಿಲ್ಲ, ಅದಕ್ಕಾಗಿಯೇ ನಾನು ನನ್ನ ಜೀವವನ್ನು ತೆಗೆಯುತ್ತಿದ್ದೇನೆ” ಎಂದು ಎಂಟು ಪುಟಗಳ ಸುಸೈಡ್ ಲೆಟರ್ ಓದಿದ ಪೊಲೀಸರು ತಿಳಿಸಿದ್ದಾರೆ.
ಜೊತೆಗೆ ಮಹಂತ್ ನರೇಂದ್ರ ಗಿರಿ ಅವರು ತಮ್ಮ ನಿಧನದ ನಂತರ ಮಠದೊಂದಿಗೆ ಏನು ಮಾಡಬೇಕೆಂಬುದರ ಬಗ್ಗೆ ತಮ್ಮ ಆತ್ಮಹತ್ಯೆ ಪತ್ರದಲ್ಲಿ “ವಿಲ್” ಅನ್ನು ಬರೆದಿದ್ದಾರೆ.
ಮಹಂತ್ ನರೇಂದ್ರ ಗಿರಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಸಂದೀಪ್ ತಿವಾರಿ ಮತ್ತು ಇಬ್ಬರು ಶಿಷ್ಯರಾದ ಆನಂದ್ ಗಿರಿ ಮತ್ತು ಆಧ್ಯಾ ಪ್ರಸಾದ್ ಎಂಬ ಮೂವರನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ.