ಜೀವ ಉಳಿಸುವ ಔಷಧಗಳು ಮೊದಲು ಭಾರತೀಯರಿಗೆ ಲಭ್ಯವಾಗಬೇಕು: ರಾಹುಲ್ ಗಾಂಧಿ

ಹೈಡ್ರಾಕ್ಸಿಕ್ಲೋರೋಕ್ವಿನ್ ಸರಬರಾಜು ಮಾಡದಿದ್ದರೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದ ಬೆನ್ನಲ್ಲೇ ಸರ್ಕಾರ ಔಷಧ ರಫ್ತಿನ ನಿಷೇಧವನ್ನು ಭಾಗಶಃ ತೆರವುಗೊಳಿಸಿತ್ತು. ಈ ಕ್ರಮದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಈಗ ಪ್ರತಿಕ್ರಿಯಿಸಿದ್ದು ಜೀವ ಉಳಿಸುವ ಔಷಧಗಳು ಮೊದಲು ಭಾರತೀಯರಿಗೆ ಲಭ್ಯವಾಗಬೇಕು ಎಂದಿದ್ದಾರೆ.

ಟ್ರಂಪ್ ಮಾತುಗಳನ್ನು ತೀವ್ರವಾಗಿ ಖಂಡಿಸಿ ಟ್ವೀಟ್ ಮಾಡಿರುವ ರಾಹುಲ್ “ಗೆಳೆತನ” (ಭಾರತ- ಅಮೇರಿಕಾ ಸಂಭಧದ ಬಗ್ಗೆ) ಪ್ರತೀಕಾರ ತೆಗೆದುಕೊಳ್ಳುವುದರ ಬಗ್ಗೆ ಅಲ್ಲ. ಭಾರತ ಈ ಸಮಯದಲ್ಲಿ ಎಲ್ಲ ದೇಶಗಳಿಗೂ ಸಹಾಯ ಮಾಡಬೇಕು ಆದರೆ ಜೀವ ಉಳಿಸುವ ಔಷಧಗಳು ಮೊದಲು ಭಾರತೀಯರಿಗೆ ಅಗತ್ಯ ಮಟ್ಟದಲ್ಲಿ ಲಭ್ಯವಾಗಬೇಕು” ಎಂದಿದ್ದಾರೆ.

ಮಲೇರಿಯಾ ಚಿಕಿತ್ಸೆಗೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್, ಕೊರೊನ ಸೋಂಕಿನ ಕೆಲವು ಪ್ರಕರಣಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದಾಗಿ ತಿಳಿದುಬಂದಿದೆ. ಕಳೆದ ತಿಂಗಳಷ್ಟೇ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತನ್ನು ಭಾರತ ನಿಷೇಧಿಸಿತ್ತು. ಸೋಂಕು ಹೆಚ್ಚಾದ ಪಕ್ಷದಲ್ಲಿ ಇಲ್ಲಿನ ಆರೋಗ್ಯ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಈ ಕ್ರಮ ತೆಗೆದುಕೊಂಡಿತ್ತು.

ಟ್ರಂಪ್ ಎಚ್ಚರಿಕೆಯ ನಂತರ ನಿರ್ಧಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡುವುದಕ್ಕೆ ಭಾರತ ಒಪ್ಪಿಕೊಂಡಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights