1.4 ಲಕ್ಷ ರೈಲ್ವೇ ಹುದ್ದೆಗಳಿಗೆ 2.42 ಕೋಟಿ ಅರ್ಜಿಗಳು: ಡಿಸೆಂಬರ್‌ನಲ್ಲಿ ಪರೀಕ್ಷೆ!

ಭಾರತೀಯ ರೈಲ್ವೆಯು 1.4 ಲಕ್ಷ ಹುದ್ದೆಗಳಿಗೆ ಡಿಸೆಂಬರ್‌ 15ರಂದು ಪರೀಕ್ಷೆ ನಡೆಸಲು ನಿರ್ಧರಿಸಿರುವುದಾಗಿ ಭಾರತೀಯ ರೈಲ್ವೆಯ ಸಿಇಒ ವಿ.ಕೆ. ಯಾದವ್ ಅವರು ತಿಳಿಸಿದ್ದಾರೆ.

ರೈಲ್ವೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 1.4 ಹುದ್ದಗಳ ಭರ್ತಿ 2020ರ ಆರಂಭದಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಸುಮಾರು 2.42 ಕೋಟಿ ಅರ್ಜಿಗಳು ಬಂದಿವೆ. ಕೊರೊನಾ ಸಂಕಷ್ಟದಿಂದಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ದಿನಾಂಕ ನಿಗದಿಯಾಗಿರಲಿಲ್ಲ. ಹಾಗಾಗಿ ಡಿಸೆಂಬರ್‌ 15ರಂದು ಪರೀಕ್ಷೆ ನಡೆಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಎಲ್ಲ ಮೂರು ವಿಭಾಗದ ಹುದ್ದೆಗಳಿಗಾಗಿ ಡಿಸೆಂಬರ್ 15ರಿಂದ ಪರೀಕ್ಷೆ ನಡೆಸಲು ರೈಲ್ವೇ ನಿರ್ಧಾರ ಮಾಡಿದೆ. ಸಂಪೂರ್ಣವಾದ ವೇಳಾಪಟ್ಟಿಯನ್ನು ಸದ್ಯದಲ್ಲಿ ಪ್ರಕಟಿಸಲಾಗುವುದು ಎಂದು ಯಾದವ್ ಅವರು ವರ್ಚುವಲ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ದೇಶದಲ್ಲಿ ಫ್ಯಾಸಿಸ್ಟ್‌ ಸರ್ವಾಧಿಕಾರ ಸ್ಥಾಪಿಸಲು ಮೋದಿ ಸರ್ಕಾರ ಯತ್ನಿಸುತ್ತಿದೆ: ಹೆಚ್‌ಎಸ್‌ ದೊರೆಸ್ವಾಮಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights