ಜೆಡಿಎಸ್ ಮುಖಂಡನ ಹಲಗೆ ವಾದ್ಯಕ್ಕೆ ಕಾಂಗ್ರೆಸ್ ಶಾಸಕ ಫುಲ್ ಫಿದಾ, ಸಖತ್ ಸ್ಟೆಪ್ಸ್….

ಗಣಪತಿ ವಿಸರ್ಜನೆ ವೇಳೆ ಶಾಸಕರ ಮಸ್ತ್ ಡ್ಯಾನ್ಸ್ ಹಾಕಿದ ಘಟನೆ ಚಿಕ್ಕಮಗಳೂರಿನ ಎನ್.ಆರ್.ಪುರ‌ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.

ಜೆಡಿಎಸ್ ಮುಖಂಡನ ಹಲಗೆ ವಾದ್ಯಕ್ಕೆ ಕಾಂಗ್ರೆಸ್ ಶಾಸಕ ಫಿದಾ ಆಗಿ ಮೈ ಚೆಳಿ ಬಿಟ್ಟು ಕುಣಿದಿದ್ದಾರೆ. ಚಿಕ್ಕಮಗಳೂರು ಜಿಲ್ಲೆ  ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರಿಂದ ಮೆರವಣಿಗೆ ಉದ್ದಕ್ಕೂ ಶಾಸಕರ ಟಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದಾರೆ. ಯುವಕರಂತೆ ಸ್ಟೈಲಿಶ್ ಹೆಜ್ಜೆ ಹಾಕಿದ ಎಂ.ಎಲ್.ಎ ನೂರಾರು ಭಕ್ತರ ಜೊತೆ ಕುಣಿದು-ಕುಪ್ಪಳಿಸಿದ್ದಾರೆ. ನಿನ್ನೆ ಗಣಪತಿಯ ವಿಸರ್ಜನಾ ವೇಳೆ ಶಾಸಕರ ಸ್ಟೆಪ್ಸ್ ಹಾಕಿದ್ದು, ಸದ್ಯ ವಿಡಿಯೋ ಸಕತ್ ವೈರಲ್ ಆಗಿದೆ.

ಬಾಳೆಹೊನ್ನೂರಿನ ಮುಖ್ಯ ರಸ್ತೆಯಲ್ಲಿ ರಾಜೇಗೌಡರ ಸ್ಟೆಪ್ಸ್ ನೋಡಿ ಯುವಕರು ಕೂಡ ಜೊತೆ ಕುಣಿದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights