ಟೈಯರ್ ಸ್ಟೋಟಗೊಂಡು ಕ್ಯಾಂಟರ್ ಪಲ್ಟಿ : ರಸ್ತೆಯಲ್ಲಾ ಹರಡಿದ ಟಮೋಟೊ
ಟೈಯರ್ ಸ್ಟೋಟ ಗೊಂಡು ಕ್ಯಾಂಟರ್ ಪಲ್ಟಿಯಾದ ಘಟನೆ ಕೋಲಾರ್ ಜಿಲ್ಲೆ ನರಸಾಪುರದ ಬೆಳ್ಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ.
ಚೆಳ್ಳಕೆರೆಯಿಂದ ಕೋಲಾರಕ್ಕೆ ಆಗಮಿಸುತ್ತಿದ್ದ ಕ್ಯಾಂಟರ್ ಮಾರ್ಗ ಮಧ್ಯೆ ಟೈರ್ ಸ್ಪೋಟಗೊಂಡಿದೆ. ಈ ವೇಳೆ ಟಮೋಟೊ ಹೊತ್ತು ಕೋಲಾರ ಮಾರುಕಟ್ಟೆಗೆ ಆಗಮಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿದೆ. ಕ್ಯಾಂಟರ್ ನಲ್ಲಿದ್ದ ಟಮೋಟೋ ಮತ್ತು ಕ್ಯಾಂಟರ್ ರಸ್ತೆಯಲ್ಲಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೋಲಿಸರು ವಾಹನಗಳು ಚಲಿಸಲು ಮಾರ್ಗ ಬದಲಿಸಿ ಪ್ರಾಯಣಕ್ಕೆ ದಾರಿ ಮಾಡಿಕೊಟ್ಟರು. ವೇಮಗಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


