ಟ್ವಿಟರ್ ಖಾತೆಯಲ್ಲಿ ಆಕ್ಟಿವ್ ಆದ ಪದ್ಮಾವತಿ : ನೆಟ್ಟಿಗರು ಫುಲ್ ಖುಷ್…!

ಸುಮಾರು ಒಂದು ವರ್ಷದಿಂದ ಟ್ವಿಟರ್ ಖಾತೆಯಲ್ಲಿ ಕಾಣಿಸಿಕೊಳ್ಳದ ನಂದನವನದ ತಾರೆ ಹಾಗೂ ಮಾಜಿ ಸಂಸದೆ ರಮ್ಯಾ ಸದ್ಯ ಟ್ವಿಟರ್ ನಲ್ಲಿ ಆಕ್ಟಿವ್ ಆಗಿದ್ದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

ಅದೆನೋ ಲಾಕ್ ಡೌನ್ ಪ್ರಭಾವವೋ ಏನೋ ಗೊತ್ತಿಲ್ಲ. ಎಲ್ಲರಂತೆ ರಮ್ಯಾ ಅವರಿಗೂ ಕೂಡ ಮನೆಯಲ್ಲಿ ಬೋರ್ ಆಗುತ್ತಿರಬಹುದೆನೋ? ಹೀಗಾಗಿ ಟ್ವಟರ್ ಖಾತೆಯ ಬಗ್ಗೆ ಮತ್ತೆ ಆಸಕ್ತಿ ತೋರಿದ್ದಾರೆ. ಹೀಗಾಗಿ ಹೆಚ್ಚು ಕಡಿಮೆ ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದ ರಮ್ಯಾ ಅವರ ಟ್ವಿಟರ್ ಖಾತೆ ಆಕ್ಟಿವ್ ಆಗಿದೆ.

ರಮ್ಯಾ ಅವರನ್ನ ರಾಜಕೀಯ ಪ್ರವೇಶಿಸಲು ಕಾರಣರಾದ ಎನ್ನಲಾದ ಅಂಬರೀಷ್ ಅವರ ಸಾವಿನ ದಿನವೂ ರಮ್ಯಾ ಕಾಣಿಸಿಕೊಳ್ಳದೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಜೊತೆಗೆ ಮೋದಿ ಅವರ ಬಗ್ಗೆ ಟೀಕಿಸಿ ಸ್ಯಾಂಡಲ್ ವುಡ್ ನಲ್ಲಿ ಜಗ್ಗೀಶ್, ಬುಲೆಟ್ ಪ್ರಕಾಶ್ ಅವರೊಂದಿಗೆ ಟ್ವಿಟ್ ವಾರ್ ಶುರು ಮಾಡಿದ್ದರು. ಕಳೆದ ವರ್ಷ ಜೂನ್ ಒಂದರಂದು ಕೊನೆಯ ಟ್ವೀಟ್ ಮಾಡಿದ್ದ ರಮ್ಯಾ ಅವರ ಟ್ವಿಟ್ಟರ್ ಖಾತೆ ಹೈಡ್ ಆಗಿತ್ತು. ಇದರಿಂದಾಗಿ ರಮ್ಯಾ ಅವರ ಕುರಿತಾದ ಮಾಹಿತಿ ಇಲ್ಲದೆ ಅಭಿಮಾನಿಗಳು ಕಾಯುವಂತಾಗಿತ್ತು. ಹೆಚ್ಚುಕಡಿಮೆ ಒಂದು ವರ್ಷದ ನಂತರ ರಮ್ಯಾ ಅವರ ಟ್ವಿಟರ್ ಖಾತೆ ಮತ್ತೆ ಆಕ್ಟಿವೇಟ್ ಆಗಿದೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದ ರಮ್ಯಾ ಹಲವರನ್ನು ಟ್ವೀಟ್ ಗಳ ಮೂಲಕ ಟೀಕಿಸಿ ಸುದ್ದಿಯಾಗುತ್ತಿದ್ದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗುತ್ತಿದ್ದಂತೆ ಅವರು ಸಾಮಾಜಿಕ ಜಾಲತಾಣಗಳಿಂದ ದೂರವಾಗಿದ್ದರು. ಈಗ ಅವರ ಟ್ವಿಟರ್ ಖಾತೆ ಆಕ್ಟಿವ್ ಆಗಿರುವುದರಿಂದ ಅಭಿಮಾನಿಗಳು ಸಂತಸಗೊಂಡಿದ್ದು, ಅವರ ಟ್ವೀಟ್ ಗಾಗಿ ಕಾಯತೊಡಗಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಟ್ವಿಟ್ ನಲ್ಲಿ ಸಕ್ರಿಯವಾಗಿದ್ದು ಸದ್ಯ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights