ಡಿಸೆಂಬರ್ ನಲ್ಲಿ ಅಮೆರಿಕಾಗೆ ಮತ್ತೊಂದು ಕಂಟಕ: : ಗಾಯದ ಮೇಲೆ ಬರೆ ಎಳೆದ ತಜ್ಞರ ಎಚ್ಚರಿಕೆ

ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಅಮೆರಿಕಾ ಎಲ್ಲರಿಗೂ ದೊಡ್ಡಣ್ಣ. ಹಾಗೇ ಕೊರೊನಾ ಸೋಂಕಿತರಲ್ಲೂ ದೊಡ್ಡದಾಗಿ ಬೆಳೆಯುತ್ತಿದೆ. ದಿನೇ ದಿನೇ ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಹೊರತು, ಕಡಿಮೆಯಾಗುವ ಲಕ್ಷಣವೇಢ ಕಾಣುತ್ತಿಲ್ಲ. ಗಾಯದ ಮೇಳೆ ಬರೆ ಎಳದಂತೆ ಡಿಸೆಂಬರ್ ನಲ್ಲಿ ಮತ್ತೊಂದು ಕಂಟಕ ಅಮೆರಿಕಾಕ್ಕೆ ಎದುರಾಗಲಿರುವ ಎಚ್ಚರಿಕೆ ತಜ್ಞರು ನೀಡಿದ್ದಾರೆ.

ಹೌದು… ಡಿಸೆಂಬರ್ ಹೊತ್ತಿಗೆ ಅಮೆರಿಕಾದಲ್ಲಿ ಕೊರೊನಾ 2.2 ದಾಳಿ ಇಡಲಿದೆಯಂತೆ. ಒಂದು ವೇಳೆ 2.2. ದಾಳಿಯನ್ನು ಕೊರೊನಾ ಇಟ್ಟಿದ್ದೇ ಆದರೆ ಅಮೆರಿಕಾ ಮೇಲೇಳುವುದು ಬಾರಿ ಕಷ್ಟವಿದೆ. ಅಷ್ಟಕ್ಕೂ ಕೊರೊನಾ 2.2 ದಾಳಿ ಹೇಗಿರುತ್ತೆ ಗೊತ್ತಾ?

ಇಡಿ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ ಕೊರೊನಾ. ಕೊರೊನಾ ಹೊಡೆತಕ್ಕೆ ದುಸ್ತರವಾಗಿದೆ ಅಮರಿಕಾ ಪರಿಸ್ಥಿತಿ. ಆದರೆ ಕೊರೊನಾ ಮಾತ್ರ ಇನ್ನಷ್ಟು ಬಲಿಯಾಗಿ ನಿಂತಿದೆ. ಹೀಗಾಗಿ ತಜ್ಞರು ಅಮೆರಿಕಾದ ದೊಡ್ಡಣ್ಣನಿಗೆ ವಾರ್ಗಿಂಗ್ ಕೊಟ್ಟಿದ್ದಾರೆ. ಆರೋಗ್ಯ ತಜ್ಞರು ಹೀಗೊಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಿಲ್ಲಿಯವರೆಗೂ ಕೊರೊನಾ ವೈರಸ್ ನಿಂದಾಗಿ ಜ್ವರ ಮನುಷ್ಯನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಇದರೊಂದಿಗೆ ಸಾಮಾನ್ಯ ಜ್ವರವೂ ಕೂಡ ಸೇರಿಸಿಕೊಂಡರೆ ಪರಿಸ್ಥಿತಿ ತುಂಬಾ ಹದಗೆಡಲಿದೆ. ಡಿಸೆಂಬರ್ ತಿಂಗಳಲ್ಲಿ ಅಧಿಕ  ಚಳಿ ಇರುವುದರಿಂದ ಕೊರೊನಾ ಜ್ವರದೊಂದಿಗೆ ಸಾಮಾನ್ಯ ಜ್ವರವೂ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ.

ಹೀಗಾಗ ಡಿಸೆಂಬರ್ ತಿಂಗಳಿನಲ್ಲಿ ಸಾಮಾನ್ಯ ಜ್ವರ ಹಾಗೂ ಸಾಂಕ್ರಾಮಿಕ ರೋಗದ ಲಕ್ಷಣಗಳು ಒಟ್ಟಿಗೆ ಕಾಣಿಸಿಕೊಳ್ಳಲಿವೆ ಎಂದು ಡಾ. ರಾಬರ್ಟ್ ತಿಳಿಸಿದ್ದಾರೆ. ಸದ್ಯ ಮೊದಲ ಸುತ್ತಿನಲ್ಲಿರುವ ಕೊರೊನಾ ಮುಂದಿನ ಚಳಿಗಾಲಕ್ಕೆ ಎರಡನೇ ಸುತ್ತಿನಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಕೊರೊನಾದಿಂದಾಗಿ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಎರಡನೇ ಸುತ್ತನ ಕೊರೊನಾ ಮುಂದೊಂದುದಿನ ಬರುವ ಸಾಧ್ಯತೆಗಳು ಅಧಿಕವಾಗಿದ್ದು ಎಚ್ಚತ್ತುಕೊಳ್ಳುವಂತೆ ತಜ್ಷರು ಸೂಚಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights