ಪದವಿ ಶಿಕ್ಷಣವನ್ನು ಮೂರು ವರ್ಷದಿಂದ ನಾಲ್ಕು ವರ್ಷಕ್ಕೆ ಏರಿಸುತ್ತಿರುವುದು ವಿದ್ಯಾರ್ಥಿಗಳಿಗೆ ಆಘಾತ: ಕೆವಿಎಸ್‌

ಇಡೀ ದೇಶವೇ ಕೋವಿಡ್‌ನಿಂದಾಗಿ ತತ್ತರಿಸಿದೆ. ಇಂತಹ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕಾದ ಸರ್ಕಾರ, ತನ್ನ ಕರ್ತವ್ಯಗಳನ್ನು ಮರೆತು ಕುಳಿತಿದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿಯೂ ಪದವಿ ಶಿಕ್ಷಣವನ್ನು ಮೂರು ವರ್ಷದಿಂದ ನಾಲ್ಕು ವರ್ಷಕ್ಕೆ ಏರಿಸಲು ನಿರ್ಧರಿಸಿರುವುದು. ಮತ್ತು ಅದರ ಅನುಷ್ಟಾನಕ್ಕೆ ಸಮಿತಿಗಳನ್ನು ರಚಿಸಿರುವುದು ವಿದ್ಯಾರ್ಥಿಗಳಿಗೆ ದೊಡ್ಡ ಆಘಾತವನ್ನು ಉಂಟುಮಾಡಿದೆ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್‌) ಒತ್ತಾಯಿಸಿದೆ.

ದೇಶದ ಭವಿಷ್ಯವು ತರಗತಿಯ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ ಎಂದು ಪ್ರಸಿದ್ಧ ಭೌತಶಾಸ್ತ್ರಜ್ಞರಾದ ಅಲ್ಬರ್ಟ್ ಐನ್‍ಸ್ಟೈನ್ ರವರು ಹೇಳುತ್ತಾರೆ. ಉನ್ನತ ಶಿಕ್ಷಣವನ್ನು ಮೂರು ವರ್ಷದ ಪದವಿಯಿಂದ ನಾಲ್ಕು ವರ್ಷದ ಪದವಿಗೆ ಏರಿಕೆ ಮಾಡಬೇಕೆಂಬ ಹೊಸ ಶಿಕ್ಷಣ ನೀತಿ (NEP2020) ಯ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲು ಸರ್ಕಾರಗಳು ಹೊರಟಿದೆ. ಅಲ್ಲದೆ ಅದಕ್ಕಾಗಿ ಸಮಿತಿಯೊಂದನ್ನು ರಚಿಸಿ ಕೇವಲ ಹತ್ತು ದಿನದಲ್ಲಿಯೇ ವರದಿ ನೀಡಲೂ ಕೇಳಿದೆ!

ದಶಕಗಳಿಂದ ಸಮಾನ ಶಿಕ್ಷಣಕ್ಕಾಗಿ, ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಸುದೀರ್ಘವಾಗಿ ಹೋರಾಟಗಳು ನಡಿಯುತ್ತಲೇ ಬಂದಿವೆ. ಬೆಳೆಯುವ ಕುಡಿಗಳಲ್ಲಿ ಅಸಮಾನತೆಯನ್ನು ಬಿತ್ತುವ ಶಿಕ್ಷಣ ವ್ಯವಸ್ತೆಯ ಬದಲಾಗಿ ಸಮಾನತೆ ಮತ್ತು ಸೌಹಾರ್ದತೆಯ ನಿರ್ಮಾಣಕ್ಕಾಗಿ ಸಮಾನ ಶಿಕ್ಷಣದ ಕೂಗು ಇದ್ದರೂ ಇದರ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಇನ್ನು ಶಿಕ್ಷಣಕ್ಕಾಗಿ ಜಿಡಿಪಿಯ ಶೆ.6% ಅಥವಾ ರಾಜ್ಯ ಬಜೆಟ್ ನ ಶೇ. 24 ಅನ್ನು ಮೀಸಲಿಡಬೇಕು ಎಂದು ಶಿಕ್ಷಣ ಅಯೋಗಗಳು, ಶಿಕ್ಷಣ ತಜ್ಞರು ಶಿಫಾರಸು ಮಾಡುತ್ತಿದ್ದಾರಲ್ಲದೆ NEP 202 ಕೂಡ ಹೇಳುತ್ತಿದೆ. ಇವುಗಳಿಗಾಗಿ ಯಾವುದೇ ಸರ್ಕಾರಗಳಾಗಲಿ, ಸಚಿವರಾಗಲಿ ತುರ್ತು ಸಮಿತಿಗಳು ರಚಿಸಿ ವರದಿ ಕೇಳಲಿಲ್ಲ, ಅನುಷ್ಠಾನಕ್ಕೆ ಉತ್ಸುಕುರಾಗುತ್ತಿಲ್ಲ ಎನ್ನುವುದು ಆಶ್ಚರ್ಯವಾಗಿದೆ ಎಂದು ಕೆವಿಎಸ್‌ ಹೇಳಿದೆ.

ಸರ್ಕಾರವು ಆತುರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಕೈ ಬಿಡಬೇಕು ಎಂದು ಆಗ್ರಹಿಸುತ್ತಾ ಈ ಕೆಳಗಿನ ಕೆಲವೊಂದು ಪ್ರಶ್ನೆ ಮತ್ತು ಸಲಹೆಗಳನ್ನು ಸರ್ಕಾರದ ಮುಂದಿಟ್ಟಿದೆ. 

1) ದೇಶದ ಭವಿಷ್ಯವನ್ನೇ ರೂಪಿಸುವ ಉನ್ನತ ಶಿಕ್ಷಣದ ನೀತಿಯನ್ನು ಕೇವಲ ಹತ್ತು ದಿನದಲ್ಲಿ ವರದಿಯನ್ನು ತರಿಸಿಕೊಂಡು ಅನುಷ್ಠಾನ ಮಾಡಲು ಹೇಗೆ ಸಾಧ್ಯ? ಇದನ್ನು ಕನಿಷ್ಠ ನಾಲಕ್ಕು ತಿಂಗಳಿಗಾದರೂ ವಿಸ್ತರಿಸಬೇಕು.

2) ಕೋವಿಡ್ ಸಂದರ್ಭದಲ್ಲಿ ಕಳೆದ ಬಾರಿ ಶೆ.30 ರಷ್ಟು ವಿದ್ಯಾರ್ಥಿಗಳ ಕಲಿಕೆಯೇ ಆಗಿಲ್ಲವೆಂದು ಸರ್ಕಾರವೇ ಹೇಳುತ್ತಿರುವಾಗ ಇದರ ಪರಿಹಾರಕ್ಕೆ ಸರ್ಕಾರ ನಿರ್ಧಾರ ತಗೆದುಕೊಳ್ಳದೆ ಪದವಿಯ ಅವಧಿಯನ್ನು ವಿಸ್ತರಿಸುವ ಕಾರ್ಯ ಸೂಕ್ತವೇ?

3) ರಾಜ್ಯದ ಉನ್ನತ ಶಿಕ್ಷಣದ ಭವಿಷ್ಯ ನಿರ್ಮಾಣದ ನೀತಿಯು ವಿದ್ಯಾರ್ಥಿಗಳ ಸರ್ವಾಂಗಿಕ ಬೆಳವಣಿಗೆಯ ಭಾಗವಾಗಿ ಇರಬೇಕು ಎಂದರೆ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು, ಪಠ್ಯೇತರ ಚಟುವಟಿಕೆಯ ತಜ್ಞರು, ಪೋಷಕರ ಜೊತೆ ಚರ್ಚಿಸಿ ಚಿಂತಿಸಬೇಕಾಗುತ್ತದೆ. ಇದನ್ನು ಮಾಡದೇ ಹತ್ತೇ ದಿನದಲ್ಲಿ ವರದಿ ತರಿಸಿ ಅನುಷ್ಠಾನ ಹೇಗೆ ಮಾಡುವಿರಿ?

4) ಸಮಿತಿಯೊಂದಿಗೆ ನಡೆಯುವ ಚರ್ಚೆ ಮತ್ತು ವರದಿಗಳು ಪಾರದರ್ಶಕವಾಗಿರಿಸಬೇಕು, ಅವುಗಳು ಎಲ್ಲರಿಗೂ ತಲುಪುವಂತೆ ಕಾಲಕಾಲಕ್ಕೆ ಪ್ರಕಟಿಸಬೇಕು.

ಇದನ್ನೂ ಓದಿ: NEP ಕರ್ನಾಟಕದಲ್ಲೇ ಮೊದಲು ಜಾರಿ; ಶಿಕ್ಷಣ ಮಾರಾಟಕ್ಕೆ ಕರ್ನಾಟಕವೇ ಬಲಿಪಶು ಎಂದು ಕೆವಿಎಸ್‌ ವಿರೋಧ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights