ತೆರೆಯಲಿದೆ ಶಬರಿಮಲೆ ಬಾಗಿಲು: ಕೊರೊನಾ ನೆಗೆಟಿವ್‌ ಸರ್ಟಿಫಿಕೇಟ್‌ ಇದ್ದರೆ ಮಾತ್ರ ಅಯ್ಯಪ್ಪನ ದರ್ಶನ..

ಕೊರೊನಾ ಭೀತಿಯಿಂದ ದೇವಸ್ಥಾನಗಳಲ್ಲಿ ಜನಜಂಗುಳಿ ನಿಷೇಧಿಸಲಾಗಿದೆ. ಆದ್ರೆ ಪವಿತ್ರ ಶಬರಿಮಲೆಯ ಯಾತ್ರೆ ಈ ಬಾರಿ ಸಮಸ್ಯೆ ಇಲ್ಲದೆ ನಡೆಯಲಿದೆ. ಕೇರಳದ ಶಬರಿಮಲೆ ದೇವಸ್ಥಾನ ನವೆಂಬರ್​ 16ರಂದು ಬಾಗಿಲು ತೆರೆಯಲಿದ್ದು, ದೇವರ ದರ್ಶನ ಮಾಡಬೇಕಾದರೆ ಕೊರೊನಾ ಪರೀಕ್ಷೆಯ ನೆಗಟಿವ್​ ವರದಿ ಅತ್ಯಗತ್ಯ ಎಂದು ದೇವಸ್ಥಾನದ ಆಡಳಿತ ಮಂಡಲಿ ತಿಳಿಸಿದೆ.

ನವೆಂಬರ್ 16 ರಿಂದ ಎರಡು ತಿಂಗಳು ಕಾಲ ವಾರ್ಷಿಕ ಪೂಜೆ ಹಿನ್ನೆಲೆ ದೇವಾಲಯದ ಬಾಗಿಲು ತೆರೆಯಲಾಗುತ್ತೆ. ಈ ಹಿನ್ನೆಲೆ ಭಕ್ತರಿಗೂ ದೇವಾಲಯ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತೆ. ಆದರೆ ಈ ಬಾರಿ ದೇವರ ದರ್ಶನ ಅಥವಾ ದೇವಾಲಯ ಪ್ರವೇಶಕ್ಕೆ ಕೊರೊನಾ ನೆಗೆಟಿವ್‌ ಸರ್ಟಿಫಿಕೇಟ್‌ ಅಗತ್ಯ.

– ಕಡಕಂಪಳ್ಳಿ ಸುರೇಂದ್ರನ್‌, ಕೇರಳ ದೇವಸ್ವಂ ಸಚಿವ

ಶಬರಿಮಲೆ ದೇಗುಲದ ಒಳಗೆ ವರ್ಚುವಲ್​ ಕ್ಯೂ ವ್ಯವಸ್ಥೆ ಮಾಡಲಾಗುತ್ತದೆ. ಕೊರೊನಾ ಗೈಡ್​ಲೈನ್ಸ್​ ಪ್ರಕಾರ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.  ಕೊರೊನಾ ಹಿನ್ನೆಯಲ್ಲಿ ಭಕ್ತರು ಕೊರೊನಾ ಟೆಸ್ಟ್​ ಮಾಡಿಸಿ,ಅದರ ನೆಗೆಟಿವ್​ ವರದಿಯಲ್ಲಿ ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಸನ್ನಿದಾನದಲ್ಲಿ ಯಾವುದೇ ನೂಕು ನುಗ್ಗಲು ಇಲ್ಲದಂತೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಬರಿಮಲೆ ಆಡಳಿತ ಮಂಡಳಿ ತಿಳಿಸಿದೆ.


ಇದನ್ನೂ ಓದಿಉತ್ತರ ಪ್ರದೇಶದ ದೇವಸ್ಥಾನದ ಅರ್ಚಕನನ್ನು ಮುಸ್ಲೀಮರು ಕೊಂದಿದ್ದಾರಾ?!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights