ದೇಶದಲ್ಲಿ ಕೊರೊನಾ ಅಟ್ಟಹಾಸ : ಒಂದೇ ದಿನಕ್ಕೆ 2067ಸೋಂಕಿತರು ದೃಢ, 71 ಜನ ಸಾವು!

ಕೊರೊನಾ ಹಾವಳಿಯಿಂದ ಬೇಸತ್ತ ಭಾರತದ ಕೆಲ ರಾಜ್ಯಗಳು ಸಂಕಷ್ಟಕ್ಕೆ ಸಿಲುಕಿದ್ದು, ಸೋಂಕಿತರ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ.

ಹೌದು… ಒಂದೇ ದಿನದಲ್ಲಿ ಭಾರತದಲ್ಲಿ 2067 ಮಂದಿಗೆ ಸೋಂಕು ತಗಲಿದ್ದು, 71 ಮಂದಿ ಸಾವನ್ನಪ್ಪಿದ್ದಾರೆ. ಈ ವರೆಗೆ ಒಟ್ಟು ದೇಶದಲ್ಲಿ 39,980 ಸೋಂಕಿತರ ಸಂಖ್ಯೆ ಇದ್ದು, 1,301 ಮಂದಿ ಸೋಂಕಿಗೆ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.

ಜೊತೆಗೆ ಈವರೆಗೆ ದೇಶದಲ್ಲಿ 10,017 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾು, ದೇಶದಲ್ಲಿ ಗುಣಮುಖರಾಗುತ್ತಿರುವ ಪ್ರಮಾಣ ಶೇ.26.52ಕ್ಕೆ ಏರಿಕೆಯಾಗಿದೆ.

ಇದೂವರೆಗೆ 10 ಲಕ್ಷ ಜನರನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ನಡುವೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಮಹಾರಾಷ್ಟ್ರದಲ್ಲಿ ನಿನ್ನೆ 790 ಹೊಸ ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,296ಕ್ಕೆ ತಲುಪಿದೆ. ಜೊತೆಗೆ ರಾಜ್ಯದಲ್ಲಿ 36 ಜನ ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 521ಕ್ಕೆ ತಲುಪಿದೆ. ಇನ್ನು ಗುಜರಾತ್ ನಲ್ಲಿ 353 ಹೊಸ ಪ್ರಕರಣಗಳೊಂದಿಗೆ, ಒಟ್ಟು ಸೋಂಕಿತರ ಸಂಖ್ಯೆ 5054ಕ್ಕೆ ತಲುಪಿದೆ. ಜೊತೆಗೆ ಒಂದೇ ದಿನ 26 ಜನ ಸಾವನ್ನಪ್ಪುವುದರೊಂದಿಗೆ ಒಟ್ಟಾರೆ ಸಾವಿನ ಸಂಖ್ಯೆ 262ಕ್ಕೆ ತಲುಪಿದೆ. ಇನ್ನು ತಮಿಳುನಾಡಿನಲ್ಲಿ ಶನಿವಾರ 231 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights