ನವಿಲುತೀರ್ಥ ಡ್ಯಾಮ್ ಹೊರಹರಿವು 20 ಸಾವಿರ ಕ್ಯೂಸೆಕ್ಸ : ಆಲಮಟ್ಟಿ 1ಲಕ್ಷ 20 ಸಾವಿರಕ್ಕೆ ಜಿಗಿತ!

ಮಲಪ್ರಭೆಯಲ್ಲಿ ಹರಿದ ನೀರು ಒಮ್ಮೆಲೇ ಹೆಚ್ಚಾಗಿದ್ದರಿಂದ ಗಾಬರಿಯಾಗಿರುವ ನದಿ ತೀರದ ಜನತೆಗೆ ಸೋಮವಾರ ಸಂಜೆ ಒಳ್ಳೆಯ ಸುದ್ದಿ. ಸವದತ್ತಿ ತಾಲೂಕಿನ ನವಿಲುತೀರ್ಥ ಡ್ಯಾಮಿನಿಂದ ಸೋಮವಾರ ಬೆಳಗಿನ ಜಾವ ಬಿಡುಗಡೆ ಮಾಡಲಾದ 35 ಸಾವಿರ ಕ್ಯೂಸೆಕ್ಸ ನೀರು ರಾಮದುರ್ಗ,ಬದಾಮಿ,ನರಗುಂದ ಮತ್ತು ರೋಣ ತಾಲೂಕಿನ ಗ್ರಾಮಗಳಿಗೆ ಮಂಗಳವಾರ ಮಧ್ಯಾನ್ಹ ತಲುಪಲಿದೆ.

ಸೋಮವಾರ ಸಂಜೆ ರಾಮದುರ್ಗ ತಾಲೂಕಿನ ಗೊಣಗನೂರು, ತೊರಗಲ್ಲ, ಹಾಲೊಳ್ಳಿ, ಸುನ್ನಾಳ, ರಂಕಲಕೊಪ್ಪ, ಕಿಲಬನೂರು, ಹಲಗತ್ತಿ, ಕೊಳಚಿ, ಸುರೇಬಾನ, ಅವರಾದಿ, ಸಂಗಳ, ವಾಸನ, ಬದಾಮಿ ತಾಲೂಕಿನ ಖ್ಯಾಡ,ಹೊಳೆಆಲೂರು. ಅಮರಗೋಳ, ಗೋವನಕೊಪ್ಪ, ನರಗುಂದ ತಾಲೂಕಿನ ಕೊಣ್ಣೂರು, ಮೆಣಸಗಿ ಗ್ರಾಮಗಳಿಗೆ ತಲುಪಿದಾಗ ಬಗ್ಗೆ ಫೋನ್ ಕರೆಗಳು ಬರುತ್ತಿವೆ.

ಬೈಲಹೊಂಗಲ ಮತ್ತು ಕಿತ್ತೂರು ಸುತ್ತಮುತ್ತಲೂ ಮಳೆ ಕಡಿಮೆಯಾಗಿದ್ದರಿಂದ ನವಿಲುತೀರ್ಥದ ಒಳಹರಿವಿನಲ್ಲೂ ಕಡಿಮೆಯಾಗಿದೆ.ಆದ್ದರಿಂದ ಸೋಮವಾರ ಸಂಜೆ ಹೊರಹರಿವನ್ನು 20 ಸಾವಿರಕ್ಕೆ ಇಳಿಸಲಾಗಿದೆ. ಹೊರಹರಿವು ಕಡಿಮೆಯಾಗಿದ್ದರ ಪರಿಣಾಮವಾಗಬೇಕಾದರೆ ಮಂಗಳವಾರ ರಾತ್ರಿ ಅಥವಾ ಬುಧವಾರ ಮಧ್ಯಾನ್ಹ ಆಗುವ ಸಾಧ್ಯತೆಯಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಅಧಿಕ ಮಳೆಯ ಪರಿಣಾಮವಾಗಿ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದ್ದು ಇದೂ ಸಹ ಬದಾಮಿ ಮತ್ತು ನರಗುಂದ ತಾಲೂಕುಗಳ ಗ್ರಾಮಗಳ ಮೇಲೆ ದುಷ್ಪರಿಣಾಮ ಮಾಡುತ್ತಿದೆ.

ಆಲಮಟ್ಟಿ ಜಲಾಶಯದ ಒಳಹರಿವು ಸೋಮವಾರ ಸಂಜೆ 5.30 ಕ್ಕೆ 1 ಲಕ್ಷ 60 ಸಾವಿರ ಮತ್ತು ಹೊರಹರಿವು 1 ಲಕ್ಷ 20 ಸಾವಿರ ಕ್ಯೂಸೆಕ್ಸ ತಲುಪಿದೆ. ಬೆಳಗಾವಿ,ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೃಷ್ಣೆಯಲ್ಲಿ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights