ನಾಳೆ ರಾಜ್ಯಕ್ಕೆ ಶಾ ಭೇಟಿ : ಆಗಿಲ್ಲದವರು ಈಗ್ಯಾಕೆ ಅನ್ನೋ ಗುಸು… ಗುಸು…

ಜನವರಿ 18ನೇ ತಾರೀಕು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ಮೊದಲೇ ಅಂದರೆ ಫೆಬ್ರವರಿ 17ನೇ ತಾರೀಕು ವಿಧಾನಸಭಾ ಜಂಟಿ ಅಧಿವೇಶನ ನಡೆಯಲಿದೆ.

ನಾಳೆ ಮಧ್ಯಾಹ್ನ 12.15ಕ್ಕೆ ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ನಂತರ ನೇರ ತೆರಳಿ ಬೆಂಗಳೂರಿನ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಸಂಜೆ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಸೇರಿದಂತೆ ಪ್ರಮುಖ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿರುವ ಪೌರತ್ವ ಕಾಯ್ದೆ ಕುರಿತಾದ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ನೀವು ಒಂದು ಮಾತು ಕೇಳಿರಬಹುದು. “ಕಷ್ಟಕ್ಕೆ ಕರಿಬೇಡ್ರಿ ಊಟಕ್ಕೆ ಮರಿಬೇಡ್ರಿ…” ಈ ಮಾತನ್ನ ಹಿರಿಯರು ಆಗಾಗ ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ನಾವ್ಯಾಕೆ ಈ ಮಾತನ್ನ ನೆನಪು ಮಾಡಿಕೊಂಡ್ವಿ ಗೊತ್ತಾ..?

ದಿನ ನಿತ್ಯ ನಾವು ಮಾದ್ಯಮದಲ್ಲಿ ನೋಡ್ತಾನೇ ಇರುತ್ತೇವೆ. ಈಗಲೂ ಜನಕ್ಕೆ ಪ್ರವಾಹದ ವಾಸಿಯಾಗದೇ ಅಡ್ಡಪರಿಣಾಮ ಉಂಟು ಮಾಡಿ ಸಮಸ್ಯೆಯುನ್ನ ಉಲ್ಬಣಗೊಳಿಸುತ್ತಲೇ ಇದೆ. ಪ್ರವಾಹದಿಂದ ರಾಜ್ಯದಲ್ಲಿ 38,405 ಕೋಟಿ ರೂ. ಹಾನಿಯಾಗಿದೆ.

2017-18ನೇ ಸಾಲಿನಲ್ಲಿ ರಾಜ್ಯದ ಗಡಿ ತಾಲೂಕು ಪಾವಗಡದಲ್ಲಿ ರಾಜ್ಯದಲ್ಲೇ ಅತೀಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.  2018-19ನೇ ಸಾಲಿನಲ್ಲಿ ಸಿರಾದಲ್ಲಿ ಅತೀಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದಾಖಲಾಗಿವೆ.

ಗ್ರಾಹಕರಿಗೆ ಹಣದುಬ್ಬರದ ಬಿಸಿ ತಟ್ಟುತಲ್ಲೇ ಇದೆ.  ಹೀಗೆ ಹೋಳ್ತಾ ಹೋದರೆ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಆದರೆ ನಮ್ಮ ಜನಪ್ರತಿನಿಧಿಗಳು ಇಂಥ ಸ್ಥಳಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಬದಲಿಗೆ ಹೆಚ್ಚಾಗಿ ಸಚಿವ ಸ್ಥಾನಕ್ಕಾಗಿ ತೊಡೆ ತಟ್ಟಿ ನಿಂತಿದ್ದಾರೆ. ತಾ ಮುಂದು ನೀ ಮುಂದು ಅಂತಾ ಪೈಪೋಟಿಗೆ ಇಳಿದಿದ್ದಾರೆ. ಇದನ್ನ ಬಗೆ ಹರಿಸಲು ನಮ್ಮ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಪ್ರಸ್ತಾಪವಾಗಲಿದೆ. ಜನರ ಕಷ್ಟಕ್ಕೆ ಆಗದವರು ರಾಜ್ಯದಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳಲು ಮಾತ್ರ ಸಕ್ರಿಯವಾಗಿರುತ್ತಾರೆ ಎನ್ನುವ ಮಾತುಗಳು ಸದ್ದಿಲ್ಲದೇ ಗುಲ್ಲೆದ್ದಿವೆ.

ಇದೇ ಸಂತೋಷಕ್ಕಾಗ ಜನ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನ ಜನ ಬಹುಮತಕೊಟ್ಟ ಗೆಲ್ಲಿಸಿದ್ದು…? ಗೆಲುವು ಸಾಧಿಸಿದ ಬಳಿಕ ಜನರ ಕಡೆಗೆ ರಾಜಕಾರಣಿಗಳು ನೋಡುವುದೇ ಇಲ್ವಾ..? ಯಾಕಿಷ್ಟು ನಿರಾಸೆ ಭಾವ ತೋರ್ತಾರೆ ಜನಪ್ರತಿನಿಧಿಗಳು..? ಈ ಅಸಡ್ಡೆಗೆ ನೋಟು ಕೊಟ್ಟು ಓಟು ಕೊಂಡರಾ ಅನ್ನೋ ಅನುಮಾನವೇ ಉತ್ತರ ಅನ್ನಿಸಿಬಿಡುತ್ತೆ..

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights