ನಿಮ್ಗೆ ಆಲುಗಡ್ಡೆ ಚಿಪ್ಸ್ ಅಂದ್ರೆ ಇಷ್ಟಾನಾ..? : ಹಾಗಾದ್ರೆ ತಿನ್ನೋ ಮುನ್ನ ಈ ಸ್ಟೋರಿ ನೋಡಿ…

ಆಲುಗಡ್ಡೆ ಚಿಪ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ. ಸಂಜೆ ಟೀ-ಕಾಫಿ ಜೊತೆಗೆ, ಆಚೆ ಹೋದಾಗ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅತೀ ಹೆಚ್ಚು ತಿನ್ನ ಬಯಸುವ ಹಾಗೂ ಎಲ್ಲಾ ಅಂಗಡಿಗಳಲ್ಲಿ ಬಹುಬೇಗ ಸಿಗುವ ಸ್ಯಾಕ್ಸ್ ಇದು. ಆದರೆ ಇದನ್ನ ತಿಂದರೆ ಬಾಯಿ ಸುಟ್ಟೋಗುತ್ತೆ ಅಂದರೆ ನಿಮಗೆ ಹೇಗನಿಸುತ್ತೆ..? ನಿಮಗಿದು ಆಶ್ಚರ್ಯ ಅನಿಸಿದ್ರು ನಿಜಾನೇ..

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ರಸಾಯನ ಮಿಶ್ರಿತ ಟೊಮೆಟೊ ಚಿಪ್ಸ್ ತಿಂದು ಯುವಕನೊಬ್ಬ ನಾಲಿಗೆ ಸುಟ್ಟುಕೊಂಡಿದ್ದಾನೆ. ವಿನೋದ ಹದಗಲ(22) ನಾಲಿಗೆ ಸುಟ್ಟುಕೊಂಡ ಯುವಕ.

ಇಂಡಿ ಪಟ್ಟಣದ ಗೋಲ್ಡನ್ ಸ್ಟಾರ್ ಬೇಕರಿಯಲ್ಲಿ ಪೊಟ್ಯಾಟೋ ಚಿಪ್ಸ್ ಖರೀದಿಸಿದ್ದ ಯುವಕನ ಬಾಯಿ ಸುಟ್ಟುಹೋಗಿದೆ. ಚಿಪ್ಸ್ ತಿಂದ ತಕ್ಷಣವೇ ನಾಲಿಗೆ ಮೇಲೆ ಸುಟ್ಟ ಗಾಯಗಳು ಕಾಣಿಸಿಕೊಂಡಿವೆ. ಇದನ್ನ ಪಾಲಕರೂ ತಿಂದ ಬಳಿಕ ಇದೇ ಅನುಭವವಾಗಿದೆ. ತಕ್ಷಣವೇ ಪಾಲಕರು ಚಿಪ್ಸ್ ಖರೀದಿಸಿದ ಬೇಕರಿಗೆ ಹೋಗಿ ಪರಿಶೀಲಿಸಿದಾಗ  ಚಿಪ್ಸ್ ತಯಾರಿಕೆಯಲ್ಲಿ ಅತಿಯಾದ ಕೆಮಿಕಲ್ ಬಳಿಕೆ ಗಮನಕ್ಕೆ ಬಂದಿದೆ. ಇದರಿಂದ ಯುವಕನ ಬಾಯಿ ಸುಟ್ಟು ಹೋಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಪ್ಸ್ ಖರೀದಿಸಿದ ಗೋಲ್ಡನ್ ಬೇಕರಿ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಾವುದಕ್ಕೂ ನೀವು ನಿಮ್ಮ ಮಕ್ಕಳಿಗೆ ಚಿಪ್ಸ್ ಕೊಡಿಸುವ ಮುನ್ನ ಕೊಂಚ ಎಚ್ಚರವಾಗಿರಿ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights