ನೋಡಿ ಸ್ವಾಮಿ ನಮ್ ಹೇರ್ ಸ್ಟೈಲ್ ಇರೋದೇ ಹೀಗೆ.. : ಪೂರ್ವ ಆಫ್ರಿಕದಲ್ಲೂ ಕೊರೊನಾ ಹೇರ್ ಸ್ಟೈಲ್!

ದೇಶದಾದ್ಯಂತ ಕೊರೊನಾ ಅಟ್ಟಹಾಸಕ್ಕೆ ಜನ ಭಯ ಭೀತರಾದರೆ ಇತ್ತ ಪೂರ್ವ ಆಫ್ರಿಕದಲ್ಲಿ ಜನ ಕೊರೊನಾ ರೂಪವನ್ನು ಹೇರ್ ಸ್ಟೈಲ್ ಮಾಡಿಕೊಂಡು ಮಿಂಚುತ್ತಿದ್ದಾರೆ.

ಪೂರ್ವ ಆಫ್ರಿಕದಲ್ಲಿ ಈ ಹೇರ್ ಸ್ಟೈಲ್ ವಧುಗಳಿಗೆಇಷ್ಟವಾಗಿದೆಯಂತೆ. ಮತ್ತೊಂದು ವಿಚಾರ ಅಂದರೆ ಲಾಕ್ ಡೌನ್ ನಿಂದಾಗಿ ಹೇರ್ ಕಟ್ಟಿಂಗ್ ಗೆ ಹಣವಿಲ್ಲದೇ ಮಕ್ಕಳ ತಾಂಯಂದಿರು ಈ ರೀತಿ ಕೋವಿಡ್ ಆಕಾರದಲ್ಲಿ ಬಾಚಿ ಕಟ್ಟುತ್ತಿದ್ದಾರೆ.  ಅದೇ ಈಗ ಅಲ್ಲಿ ಹೊಸ ಸ್ಟೈಲ್‌ ಆಗಿದೆ. ಆ ಬಳಿಕ ಕೆಲವು ಕ್ಷೌರಿಕರು ಕೂಡ ಈ ಹೇರ್‌ಸ್ಟೈಲ್‌ ಮಾಡಲಾರಂಭಿಸಿದ್ದಾರೆ.

ಆಫ್ರಿಕದಲ್ಲಿ ಟ್ರೆಂಡ್ ಆಗುತ್ತಿದೆ ಕೋವಿಡ್ ಹೇರ್‌ಸ್ಟೈಲ್‌

ಕೆಲವರು ಈ ಮೂಲಕವೂ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಅಂದಹಾಗೆ ಇದು ಆಫ್ರೀಕಾದ ಹಳೆಯ ಹೇರ್ ಸ್ಟೈಲ್. ಇತ್ತೀಚಿನ ವರ್ಷಗಳಲ್ಲಿ ಭಾರತ, ಚೀನಾ ಹಾಗೂ ಬ್ರೆಜಿಲ್ ನಿಂದ ಚೌಲಿ ಕೂದಲು ಆಫ್ರೀಕಕ್ಕೆ ಆಮದಾಗುವುದು ಹೆಚ್ಚಾಗಿತ್ತು. ಇದರಿಂದಾಗಿ ಜನರ ಹೇರ್ ಸ್ಟೈಲ್ ಗಳು ಬದಲಾಗಿ ಹಳೇಯ ರೀತಿ ಜನರಿಗೆ ಮರೆತು ಹೋಗಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಈ ಓಲ್ದ್ ಮಾದರಿ ಮತ್ತೆ ಹೊಸ ಕೊರೊನಾ ವೈರಸ್ ಸ್ಟೈಲ್ ಆಗಿ ಕಾಣಿಸಿಕೊಂಡಿದೆ.

ವಿಶೇಷ ಅಂದರೆ ಆಂಟೆನಾದಂತೆ ಕಾಣುವ ಈ ಸ್ಟೈಲ್ ನ್ನ ನೈರೋಬಿಯದ ಒಬ್ಬ ಹುಡುಗಿಯೊಬ್ಬಳಿಗೆ ಮಾಡಿದ್ದಾನೆ. ಅದರ ಬಳಿಕ ಈ ಮಾದರಿ ಇಲ್ಲಿನ ಮಂದಿಗೆ ತುಂಬಾನೇ ಇಷ್ಟವಾಗಿದ್ದು, ಬಹುತೇಕ ಇದೆ ಕಟಿಂಗ್ ಮಾಡಿ ಅಂತಿದ್ದಾರಂತೆ.

ಕೊರೊನಾ ಹೆರ್ ಸ್ಟೈಲ್ ನ ಕೆಲ ಫೋಟೋಗಳು ಇಲ್ಲಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights