ಪತಿ ಜೊತೆ ಜಗಳ – ಅಡುಗೆ ಮನೆಯಿಂದ ಚಾಕು ತಂದ ಪತ್ನಿ : ಮುಂದೇನಾಯ್ತು ಗೊತ್ತಾ?

ಮುಂಬೈನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪತ್ನಿಯೊಬ್ಬಳು ಪತಿಯ ಹತ್ಯೆ ಮಾಡಿದ್ದಾಳೆ. ಮೊದಲು ಆತ್ಮಹತ್ಯೆ ಎಂದ ಪತ್ನಿ ನಂತ್ರ ತಪ್ಪೊಪ್ಪಿಕೊಂಡಿದ್ದಾಳೆ.

ಮುಂಬೈನಲ್ಲಿ ತಂದೆ-ತಾಯಿ ಇಬ್ಬರು ಮಕ್ಕಳು ಹಾಗೂ ಪತ್ನಿ ಜೊತೆ ವಾಸವಾಗಿದ್ದ ಸುನೀಲ್ ಹತ್ಯೆ ಬುಧವಾರ ನಡೆದಿದೆ. ಪತಿ-ಪತ್ನಿ ಮಧ್ಯೆ ಗಲಾಟೆ ನಡೆದಿತ್ತಂತೆ. ನಂತ್ರ ಅಡುಗೆ ಮನೆಗೆ ಹೋದ ಪತ್ನಿ ಚಾಕು ತಂದು ಪತಿ ಮೇಲೆ 11 ಬಾರಿ ದಾಳಿ ನಡೆಸಿದ್ದಾಳೆ. ನಂತ್ರ ಪತಿ ಕತ್ತು ಕತ್ತರಿಸಿದ್ದಾಳೆ.

ಇಷ್ಟೆಲ್ಲ ಆದ್ಮೇಲೆ ಲಿವಿಂಗ್ ರೂಮಿನಲ್ಲಿ ಮಲಗಿದ್ದ ಅತ್ತೆ-ಮಾವನಿಗೆ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವ್ಯಕ್ತಿ ಆತ್ಮಹತ್ಯೆಯನ್ನು ಈ ರೀತಿ ಮಾಡಿಕೊಳ್ಳಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಪತ್ನಿ ವಿಚಾರಣೆ ಶುರು ಮಾಡಿದ್ದಾರೆ. ಆಗ ಆರೋಪಿ ಮಹಿಳೆ ಸತ್ಯ ಒಪ್ಪಿಕೊಂಡಿದ್ದಾಳೆ. ಇಬ್ಬರು 2011ರಲ್ಲಿ ಪ್ರೀತಿಸಿ ಮದುವೆಯಾಗಿದ್ದರಂತೆ. ಆದ್ರೆ ಸುನೀಲ್ ವಿವಾಹೇತರ ಸಂಬಂಧ ಹೊಂದಿದ್ದನಂತೆ. ಇದು ಗೊತ್ತಾಗ್ತಿದ್ದಂತೆ ಕೋಪಗೊಂಡ ಪತ್ನಿ ಹತ್ಯೆ ಮಾಡಿದ್ದಾಳೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights