“ಪಾಕ್ ಪರ‌ ಜಯಘೋಷ ಕೂಗಿದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಿ”- ಪ್ರತಿಭಟನಾಕಾರರ ಒತ್ತಾಯ

ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಪ್ರಕರಣ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗನಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ್ ಪರ ಬೆಂಗಳೂರನಲ್ಲಿ ಘೋಷಣೆ ಕೂಗಿರುವದು ದುರದೃಷ್ಟಕರ. ಅದು ಫ್ರೀಡಂ ಪಾರ್ಕ್ ನಂತಹ ಪವಿತ್ರ ಸ್ಥಳದಲ್ಲಿ ಇಂತಹ ಘಟನೆ ನಡಿಬಾರದಿತ್ತು ಎಂದರು. ಇನ್ನು ಅಮೂಲ್ಯಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಅಂತಾರೆ, ಹಾಗಾದ್ರೆ ಅವಳ ಕೈನಲ್ಲಿ ಮೈಕ್ ಹೇಗೆ ಬಂತು..ಅಂತಾ ಪ್ರಶ್ನಿಸಿದರು.? ಕೆಲವು ದೇಶದ್ರೋಹ ಸಂಘಟನೆಗಳ ಜೊತೆಗೆ ಯುವ ಜನಾಂಗ ಕೈ ಜೊಡಿಸುತ್ತಿರುವದು ಬಹಳ ವಿಷಾದನೀಯ. ಒಂದು ಲೋ ವರ್ಗದ ಜನರು ಯಾವುದಾದರೂ ಆಮಿಷಕ್ಕೆ ಒಳಗಾಗಿ ಹೀಗೆ ಮಾಡ್ತಾಯಿದ್ದಾರೆ ಎನ್ನುವುದನ್ನ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಾಗಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದೇಶ ದ್ರೋಹದ ಕಾನೂನು ಅಡಿಯಲ್ಲಿ ಅವಳ ಮೇಲೆ ಕ್ರಮ ಕೈಗೊಳುತ್ತೆವೆ. ದೇಶ ಪ್ರೇಮದ ಬಗೆ ಯಾವುದೇ ರಾಜೀ ಇಲ್ಲಾ, ಕಠಿಣ ಕ್ರಮ ಕೈಗೊಳ್ಳುತ್ತೆವೆ ಎಂದರು. ಇನ್ನು ಮಹಾದಾಯಿ ಬಗ್ಗೆ ಸುಪ್ರೀಂ ಕೋರ್ಟ್ ಗೆಜೆಟ್ ನೋಟಿಫಿಕೆಷನ್ ಬಗ್ಗೆ ಮಾತನಾಡಿ, ಈ ಯೋಜನೆ ಬಗ್ಗೆ ಕೇಂದ್ರದ ನಾಯಕರಿಗೆ ಸಾಕಷ್ಟು ಮನವರಿಕೆ ಮಾಡಿದ್ದೇವೆ. ಗೋವಾ ಹಾಗೂ ಮಹಾರಾಷ್ಟ್ರ ಮನವೊಲಿಸಲು ಕೇಂದ್ರ ಗೃಹ ಸಚಿವರು ಸಫಲರಾಗಿದ್ದಾರೆ. ೧೩.೪೬ ಟಿಎಂಸಿ ನೀರು ಸದ್ಬಳಕೆಗೆ ಕ್ರಮಕೈಗೊಳುತ್ತೆವೆ. ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಜೆಟ್‌ನಲ್ಲಿ ಯೋಜನೆ ಜಾರಿಗೆ ಸಂಪನ್ಮೂಲ ಮಿಸಲಿಡಲು ಸಿಎಂಗೆ ಮನವಿ ಮಾಡುತ್ತೇವೆ. ಕೇಂದ್ರಕ್ಕೆ ಒತ್ತಡ ಹೇರುವ ಅವಶ್ಯಕತೆ ಇಲ್ಲಾ, ತಾನಾಗಿಯೇ ಕೇಂದ್ರ ನೋಟಿಪಿಕೆಷನ್ ಹೊರಡಿಸುತ್ತದೆ ಎಂದು ಸಚಿವ ಸಿ.ಸಿ ಪಾಟೀಲ್ ಭರವಸೆ ನಿಡಿದರು.

ಮಂಡ್ಯ :-

ಇನ್ನೂ ಮಂಡ್ಯದ ಭಾರತೀನಗರದಲ್ಲಿ ಅಮೂಲ್ಯ ಹೇಳಿಕೆ ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಮಂಡ್ಯ ಮನ್ಮುಲ್ ನಿರ್ದೇಶಕ ಎಸ್ಪಿ ನೇತೃತ್ವದಲ್ಲಿ ಮದ್ದೂರು ತಾಲೂಕಿನ ಮದ್ದೂರು ಮಳವಳ್ಳಿ ರಸ್ತೆ ಮದ್ಯೆ ಪ್ರಗತಿಪರ‌ಸಂಘಟನೆಗಳಿಂದ ಅಮೂಲ್ಯ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.  ದೇಶದ್ರೋಹಿ ಅಮೂಲ್ಯಗೆ ಗಲ್ಲುಶಿಕ್ಷಗೆ ಆಗ್ರಹಿಸಿರೋ ಪ್ರತಿಭಟನಾಕಾರರು, ಆ ದೇಶ ದ್ರೋಹಿ ಹಿಂದಿರೋ ಸಂಘಟನೆ ಮತ್ತು‌ ಪ್ರೇರೇಪಣೆ ನೀಡೋರನ್ನು ಪತ್ತೆ ಹಚ್ಚಲು ಒತ್ತಾಯ ಮಾಡಿದ್ದಾರೆ.

ಹುಬ್ಬಳ್ಳಿ :- 
ಪಾಕಿಸ್ತಾನದ ಪರ‌ ಜಯಘೋಷ ಕೂಗಿದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಾದ ಆಮೀರ್, ತಾಲಿಬ್, ಬಾಷಿತ್ ಮತ್ತು ಅಮೂಲ್ಯ ಲಿಯೋನಿ, ಅರ್ದ್ರಾ ವಿರುದ್ಧ ಘೋಷಣೆ ಕೂಗಿ,  ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಿರುವವರನ್ನು ಬಂಧಿಸಿ ಗಡಿಪಾರು ಮಾಡಲು ತಹಶೀಲ್ದಾರ್ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ‌ ಮಾಡಿದ್ದಾರೆ.

ಗದಗ :-

ಗದಗನಲ್ಲಿ ಮಾಜಿ ಸಚಿವ ಎಚ್.ಕೆ ಪಾಟೀಲ್ ಅಮೂಲ್ಯ ಪಾಕ್ ಪರ ಘೋಷಣೆ ವಿಚಾರಕ್ಕೆ ಆಕ್ರೋಶಗೊಂಡಿದ್ದಾರೆ.  ದೇಶದ್ರೋಹ ಬಗ್ಗೆ ಮಾತುನಾಡುವವರೆಲ್ಲಾ ದೇಶದ್ರೋಹಿಗಳು. ಯಾರು ರಾಷ್ಟ್ರಭೀಮಾನ ಬಗ್ಗೆ ಕಳಂಕದ ಮಾತುಗಳನ್ನು ಆಡುತ್ತಾರೋ ಅವರು ಯೋಗ್ಯವಾದ ಶಿಕ್ಷೆಗೆ ಅರ್ಹರು. ದೇಶ ದ್ರೋಹಿಗಳನ್ನ ಯಾರು ಕೂಡಾ ಕ್ಷಮಿಸಬಾರದು. ಯಾರೆ ಯಾಗಿರಲಿ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕು ಎಂದು ಗದಗನಲ್ಲಿ ಮಾಜಿ ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ.

ವಿಜಯಪುರ :-

ವಿಜಯಪುರದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಸಿಎಎ ವಿರೋಧಿ ಹೋರಾಟಗಳಲ್ಲಿ ದೇಶ ವಿರೋಧಿ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ. ಫೆ.24 ರಂದು ವಿಜಯಪುರದಲ್ಲಿ ಸಂವಿಧಾನ ಉಳಿಸಿ ಕಾರ್ಯಕ್ರಮ ಇದ್ದು, ಇಂಥ ಕಾರ್ಯಕ್ರಮಗಳಲ್ಲಿ ದೇಶ ವಿರೋಧಿ ಹೇಳಿಕೆ ನೀಡದಂತೆ ಕಡಿವಾಣ ಹಾಕಬೇಕು. ಇಂಥ ಕಾರ್ಯಕ್ರಮಗಳಲ್ಲಿ ದೇಶ ವಿರೋಧಿ ಕೃತ್ಯ ನಡೆದರೆ ಸಂಘಟಕರನ್ನೇ ಹೊಣೆ ಮಾಡಲು ಆಗ್ರಹಿಸಲಾಗಿದೆ. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಲಾಗಿದೆ.

ಮೈಸೂರು :-

ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ, ಆದ್ರಾ ಳನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಮೈಸೂರಿನ ಗನ್ ಹೌಸ್ ಬಳಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಯಿತು. ಅಮೂಲ್ಯ ಆದ್ರಾ ಭಾಷಣಗಳಿಗೆ ಎಲ್ಲೂ ಅವಕಾಶ ಕೊಡಬಾರದು. ಇದರ ಹಿಂದೆ ಇರುವ ಸಂಘಟನೆಗಳ ವಿರುದ್ದ ಕ್ರಮಕ್ಕೆ ರಾಜ್ಯ ಸರ್ಕಾರವನ್ನು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights