ಪೇಜಾವರ ಶ್ರೀಗಳ ಅಂತಮ ದರ್ಶನಕ್ಕೆ ಹರಿದು ಬಂತು ಜನಸಾಗರ

ಬೃಂದಾವನಸ್ಥರಾದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳರ ಉತ್ತರಾಯಣ ದರ್ಶನಕ್ಕೆ ಉಡುಪಿಯತ್ತ ಜನಸಾಗರವೇ ಹರಿದು ಬಂತು. ಇಂದು ಬೆಳಗ್ಗೆ ಶ್ರೀಗಳ ಅಂತಿಮ ದರ್ಶನಕ್ಕೆ ನಾಡಿನಿಂದಷ್ಟೇ ಅಲ್ಲ ದೇಶದ ವಿವಿಧ ಭಾಗಗಳಿಂದಲೂ ಜನಸಾಮಾನ್ಯರಿಂದ ಹಿಡಿದು ಗಣ್ಯಾತಿಗಣ್ಯರು ಧಾವಿಸಿ ಬಂದರು. ಉಡುಪಿಯ ಪೇಜಾವರ ಮಠದ ಅಧೋಕ್ಷಜ ಮಠದಲ್ಲಿ ಜನ ಸಾಲುಗಟ್ಟಿ ನಿಂತಿದ್ದರು.

ಅಂತಿಮ ದರ್ಶನಕ್ಕೆ ಬಂದ ಭಕರಲ್ಲಿ ದುಃಖ ಮಡುಗಟ್ಟಿತ್ತು. ಎಲ್ಲರಲ್ಲೂ ಒಂದು ರೀತಿಯ ಅನಾಥ ಪ್ರಜ್ಞೆ ಎದ್ದು ಕಾಣುತ್ತಿತ್ತು. ಪೇಜಾವರ ಮಠದಲ್ಲಿ ಸುಶ್ರಾವ್ಯವಾಗಿದ್ದ ಕೃಷ್ಣನ ಕೊಳಲಿನ ಶೃತಿ ಅದೃಶ್ಯವಾದಂತಿತ್ತು. ಉಡುಪಿಯಲ್ಲಿ ನಿರವ ಮೌನ ಆವರಿಸಿತ್ತು. ವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು, ಉತ್ತರ ಕನ್ನಡ ಸೇರಿ ಮಲೆನಾಡು ಭಾಗದ ಜನ ಇಂದು ಬೆಳಗ್ಗೆಯಿಂದ ಮಠದತ್ತ ಧಾವಿಸಿ ಬಂದರು.

ಅಜ್ಜರಕಾಡು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಸಮರ್ಪಕವಾದ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ನೂಕುನುಗ್ಗಲಾಗಲಿಲ್ಲ. ದುಖಃದ ನಡುವೆಯೂ ಭಕ್ತಗಣ ಶಿಸ್ತು ಸಂಯಮ ಕಾಪಾಡಿಕೊಂಡಿತ್ತು. ಜಾತಿಬೇಧ, ಧರ್ಮಾತೀತವಾಗಿ ಜನ ಆಗಮಿಸಿದ್ದರು. ಶ್ರೀಗಳಿಗಾಗಿ ಮಸೀದಿಗಳಲ್ಲಿ ನಮಾಜ್, ಚರ್ಚ್‍ಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಾಡಿನಾದ್ಯಂತ ವಿವಿಧ ಮಠಾಧೀಶರು ಉಡುಪಿಗೆ ತೆರಳಿ ದರ್ಶನ ಪಡೆದಿದ್ದಲ್ಲದೆ, ಅಲ್ಲಿಂದ ಅಂತಿಮ ಕ್ರಿಯಾವಿಧಿಗಳು ನಡೆಯುವ ಬೆಂಗಳೂರಿನ ವಿದ್ಯಾಪೀಠಕ್ಕೂ ಆಗಮಿಸಿದರು.

ಬೆಂಗಳೂರಿನಲ್ಲೂ ಜನಸಾಗರ:
ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೂ ಪ್ರಯಾಣಿಸುವ ಹಾದಿಯುದ್ದಕ್ಕೂ ಜನಸಾಗರವೇ ಶ್ರೀಗಳ ಅಂತಿಮ ದರ್ಶನಕ್ಕೆ ನೆರೆದಿತ್ತು. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗಣ್ಯರು, ಲಕ್ಷಾಂತರ ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದರು. ಅಲ್ಲಿಂದ ವಿದ್ಯಾಪೀಠ ವೃತ್ತದಲ್ಲಿರುವ ಪೂರ್ಣಪ್ರಜ್ಞಾ ಮಠದ ಬೃಂದಾವನದವರೆಗೂ ಮೆರವಣಿಗೆಯಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಮೆರವಣಿಗೆಯುದ್ದಕ್ಕೂ ಸಾವಿರಾರು ಜನ ಸಾಗಿದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights