ಪೊಲೀಸ್ ಪೇದೆಗೆ ಸೋಂಕು; ನೂರಕ್ಕೂ ಹೆಚ್ಚು ಪೊಲೀಸರು ಕ್ವಾರಂಟೈನ್

ಪೊಲೀಸ್ ಪೇದೆಯೊಬ್ಬರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿರುವುದರಿಂದಾಗಿ ಹಾಸನದ ಎರಡು ಏರಿಯಾಗಳನ್ನು ಸೀಲ್’ಡೌನ್ ಮಾಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಪೊಲೀಸ್ ಪೇದೆ ಹಾಗೂ ಅರಳಿಕಟ್ಟೆ ಪಕ್ಕದ ರಸ್ತೆಯ ನಿವಾಸಿ ಸೇರಿದಂತೆ ಈ ವರೆಗೂ ಹಾಸನದಲ್ಲಿ 14 ಕೊರೋನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ.

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನದ ಉತ್ತರ ಬಡಾವಣೆ ಹಾಗೂ ಇಂದಿರಾನಗರವನ್ನು ಸೀಲ್’ಡೌನ್ ಮಾಡಲಾಗಿದೆ.

ಕೊರೋನಾ ದೃಢಪಟ್ಟಿರುವ ಪೊಲೀಸ್ ಪೇದೆ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿ ಹಾಸನಕ್ಕೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೆ ಜಿಲ್ಲೆಯ ಪೊಲೀಸ್ ತರಬೇತಿ ಶಾಲೆಗೂ ಇವರು ಭೇಟಿ ನೀಡಿದ್ದು, ಇದೀಗ ನೂರಕ್ಕೂ ಹೆಚ್ಚು ಪೊಲೀಸರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿಗಳು ಎರಡು ಏರಿಯಾಗಳನ್ನು ಕಂಟೈನ್’ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದಾರೆ. ಇಂದಿನಿಂದ 28 ದಿನಗಳ ಕಾಲ ಈ ರಸ್ತೆಗಳನ್ನು ಸೀಲ್’ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತವೇ ಪೂರೈಕೆ ಮಾಡಲಿದ್ದು, ಜನರು ಬಹಳ ಎಚ್ಚರದಿಂದ ಇರಬೇಕೆಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights