ಪ್ರವಾಹ ಪೀಡಿತ ಗ್ರಾಮಗಳ ಪುನವ೯ಸತಿಗೆ ಜೈನ ಮುನಿಯಿಂದ ತೀವ್ರ ವಿರೋಧ…!

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಐತಿಹಾಸಿಕ ಭದ್ರಗಿರಿ ಬೆಟ್ಟದಲ್ಲಿ ಹಳಿಂಗಳಿ,ತಮದಡ್ಡಿ ಗ್ರಾಮಗಳ ಪುನವ೯ಸತಿಗೆ ಕಂದಾಯ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಇದಕ್ಕೆ ಜೈನಮುನಿ ಕುಲಭೂಷಣ್ ಮಹಾರಾಜರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹೌದು..  ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿಯಲ್ಲಿರೋ ತೇರದಾಳ ಶಾಸಕ ಸಿದ್ದು ಸವದಿ ಗೃಹ ಕಾರ್ಯಾಲಯಕ್ಕೆ ಜೈನಮುನಿ ದಿಢೀರ್ ಭೇಟಿ ನೀಡಿದ್ದಾರೆ.

ಕೃಷ್ಣಾ ನದಿ ಪ್ರವಾಹ ಪೀಡಿತ ಹಳಿಂಗಳಿ,ತಮದಡ್ಡಿ ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಲು ಕಂದಾಯ ಅಧಿಕಾರಿಗಳು ಮುಂದಾಗಿದ್ದು, ಇದಕ್ಕೆ  ಭದ್ರಗಿರಿ ಬೆಟ್ಟದ ಜಾಗ ಹೊರತುಪಡಿಸಿ ಬೇರೆಡೆ ಪುನರ್ವಸತಿ ಕಲ್ಪಿಸಿ ಎಂದು ಕುಲಭೂಷಣ್ ಮಹಾರಾಜ ಆಗ್ರಹಿಸಿದ್ದಾರೆ.

ಕುಲಭೂಷಣ್ ಮಹಾರಾಜರ ಮನವೊಲಿಸಲು ಮುಂದಾದ ಶಾಸಕ ಸಿದ್ದು ಸವದಿ ಮಾತಿಗೊಪ್ಪದ ಜೈನ ಮುನಿ ಹಾಗೊಂದು ವೇಳೆ ನನ್ನ ಮಾತು ಮೀರಿದರೆ ಹಳಿಂಗಳಿ ಭದ್ರಗಿರಿ ಬೆಟ್ಟದ ಕುಲ ಭೂಷಣ್ ಮಹಾರಾಜರಿಂದ ಆಮರಣಾಂತ ಉಪವಾಸದ ಎಚ್ಚರಿಕೆ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights