ಪ್ರಾದೇಶಿಕ ಮೈತ್ರಿ ಪಕ್ಷದಿಂದಲೇ ಬಿಜೆಪಿಗೆ ದೊಡ್ಡ ಶಾಕ್ :  ಜಾರ್ಖಂಡ್‍ನಲ್ಲಿ ಬಿಜೆಪಿ-ಎಜೆಎಸ್‌ಯು ಮೈತ್ರಿ ಅಂತ್ಯ?

ಮಹಾರಾಷ್ಟರದಲ್ಲಿ ಬಿಜೆಪಿ-ಶಿವಸೇನೆ ನಡುವೆ ಫಲಿತಾಂಶದ ನಂತರ ಬಿರುಕುಂಟಾಗಿರುವ ಬೆನ್ನಲ್ಲೇ ಚುನಾವಣೆ ಹೊಸ್ತಿಲಲ್ಲಿರುವ ಜಾರ್ಖಂಡ್ ರಾಜ್ಯದಲ್ಲೂ ಇದೇ ಪರಿಸ್ಥತಿ ಎದುರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಚುನಾವಣೆಗೂ ಮುನ್ನವೇ ಬಿಜೆಪಿಗೆ ತನ್ನ ಪ್ರಾದೇಶಿಕ ಮೈತ್ರಿ ಪಕ್ಷದಿಂದ ದೊಡ್ಡ ಶಾಕ್ ಎದುರಾಗಿದೆ.

ಜಾರ್ಖಂಡ್‍ನಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾದ ಎಜೆಎಸ್‌ಯು ರಾಜ್ಯ ವಿಧಾನಸಭೆ ಚುನಾವಣೆಗೆ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧವೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಬೆಳವಣಿಗೆಯಂದಾಗಿ ಬಿಜೆಪಿ-ಎಜೆಎಸ್ ಯು ನಡುವಲ್ಲಿ ಎಲ್ಲವೂ ಸರಿಯಿಲ್ಲ  ಎಂದು ವಿಶ್ಲೇಷಿಸಲಾಗುತ್ತಿದೆ, ಜಾರ್ಖಂಡ್ ನಲ್ಲಿ ಬಿಜೆಪಿ-ಎಸ್ ಜೆಎಸ್ ಯು ನಡುವಿನ ಮೈತ್ರಿ ಅಂತ್ಯಗೊಳ್ಳುವುದು ಸನ್ನಿಹಿತವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಕುತೂಹಲಕಾರಿ ಸಂಗತಿ ಎಂದರೆ ರಾಜ್ಯ ಬಿಜೆಪಿ ಅಧ್ಯಕ್ಷ ಲಕ್ಷ್ಮಣ್‍ ಗಿಲುವಾ ಕಣಕ್ಕಿಳಿದಿರುವ ಚಕರ್‌ಧರಪುರ ಕ್ಷೇತ್ರದಲ್ಲೇ ಎಜೆಎಸ್‍ಯು ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights