ಬಜೆಟ್ ಸ್ಪೆಶಲ್ : ಕರ್ನಾಟಕ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ: ಬಿ ಎಸ್ ವೈ

ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯೆಡಿಯೂರಪ್ಪನವರು ತಮ್ಮ ಏಳನೇ ಆಯವ್ಯಯವನ್ನು ಇಂದು ಮಂಡಿಸುತ್ತಿದ್ದು, 15ನೇ ಹಣಕಾಸು ಆಯೋಗ, ರಾಜ್ಯದ ತೆರಿಗೆ ಪಾಲಿನಲ್ಲಿ ಕಡಿತಗೊಳಿಸಿರುವುದನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದು ಇದರಿಂದ ಕರ್ನಾಟಕ ಹಿಂದೆಂದೂ ಕಂಡಿರದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದಾಗಿ ಹೇಳಿದ್ದಾರೆ.

15ನೇ ಹಣಕಾಸು ಆಯೋಗದ ವರದಿಯಂತೆ ರಾಜ್ಯಕ್ಕೆ ಬರಬೇಕಿರುವ ಪಾಲಿನಲ್ಲಿ ಸುಮಾರು 2215ಕೋಟಿ ರೂ ಕಡಿತಗೊಂಡಿದ್ದು, ಇದಕ್ಕಾಗಿ ಮುಂದಿನ ವರ್ಷದಿಂದ, 2025ರವರೆಗೆ ಈ ಅನುದಾನವನ್ನು ಸರಿಪಡಿಸಲು ಪರಿಷ್ಕೃತ ಪತ್ರವನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

14ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ಸಿಗಬೇಕಾದ ಅನುದಾನದಲ್ಲಿ ಕಡಿತಗೊಂಡಿತ್ತು. ಆದರೆ ಕೇಂದ್ರ ತೆರಿಗೆಗಳ ಪಾಲಿನಲ್ಲಿ 4.713% ಮೀಸಲಿಟ್ಟಿತ್ತು. ಈಗ 15ನೇ ಹಣಕಾಸು ಆಯೋಗದಲ್ಲಿ ಇದನ್ನು ಇನ್ನೂ 1.07%  ಕಡಿತಗೊಳಿಸಿದ್ದು, 3.646% ಗೆ ಮೀಸಲಿಟ್ಟಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights