ಬುಟ್ಟಬೊಮ್ಮ ಹಾಡಿಗೆ ಫಿದಾ ಆದ ಬಾಲಿವುಡ್ ನಟಿ ದಿಶಾ ಪಠಾಣಿ, ಸ್ಟೆಪ್ ಹಾಕಿದ ಶಿಲ್ಪಾ ಶೆಟ್ಟಿ…

ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದ್ದ ‘ಅಲಾ ವೈಕುಂಠಪುರಂಲೋ’ ಚಿತ್ರದ ಬುಟ್ಟಬೊಮ್ಮ ಹಾಡನ್ನು ಯುವಕರು ಗುನುಗುಡುತ್ತಲೇ ಇರುತ್ತಾರೆ. ಈ ಹಾಡಿಗೆ ಜನ ಫಿದಾ ಆಗಿದ್ದು ಟಾಲಿವುಟ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಡ್ಯಾನ್ಸ್ ಯಿಂದ. ಸದ್ಯ ಈ ಸ್ಟಾರ್ ನಟನಿಗೆ ಬಾಲಿವುಡ್ ತಾರೆಯರು ಫಿದಾ ಆಗಿದ್ದಾರೆ.

ಹೌದು… ಟಾಲಿವುಡ್ ಸ್ಟಾರ್ ನಟ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಡ್ಯಾನ್ಸ್‌ ಅಂಥದ್ದು. ಅವರ ಡ್ಯಾನ್ಸ್ ನೋಡ್ತಾಯಿದ್ರೆ ಜನ ಹುಚ್ಚೆದ್ದು ಕುಣಿಯುತ್ತಾರೆ. ವಯಸ್ಸಿನ ಹುಡುಗಿಯರು ನಿದ್ದೆಗೆಟ್ಟು ಬಿಡ್ತಾರೆ. ಅಂಥ ಫೇಮಸ್ ನಟನ ನಟನೆಗೆ ಡ್ಯಾನ್ಸ್ ಬಾಲಿವುಡ್ ನಟಿ ದಿಶಾ ಪಠಾಣಿ ಮನಸೋತಿದ್ದಾರೆ. ಬುಟ್ಟಬೊಮ್ಮ ಸಾಂಗಿಗೆ ಸೂಪರ್ ದೂಪರ್ ಸ್ಟೆಪ್ಸ್ ಹಾಕಿದ ಅಲ್ಲು ಅರ್ಜುನ್ ನ್ನು ದಿಶಾ ಮೆಚ್ಚಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ದಿಶಾ, ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಲು ನಿಮಗೆ ಹೇಗೆ ಸಾಧ್ಯವಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಲ್ಲು ನನಗೆ ಸಂಗೀತ ಅಂದ್ರೆ ಇಷ್ಟ. ಉತ್ತಮ ಸಂಗೀತ ನನಗೆ ಡ್ಯಾನ್ಸ್ ಮಾಡಿಸುತ್ತದೆ ಎಂದಿದ್ದಾರೆ. ಅಷ್ಟು ಮಾತ್ರವಲ್ಲ ಇತ್ತೀಚಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ಸಹ ಅಲ್ಲು ಡ್ಯಾನ್ಸ್ ಬಗ್ಗೆ ಹಾಡಿಹೊಗಳಿದ್ದರು.

ಇನ್ನೂ ಬುಟ್ಟಬೊಮ್ಮ ಸಾಂಗ್ ಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಟಿಕಾ ಟಾಕ್ ಮೂಲಕ ನೃತ್ಯ ಮಾಡಿ ಅಪ್ ಲೋಡ್ ಮಾಡಿದ್ದಾರೆ. ಆ ಮೂಲಕ ಹಾಡಿಗೆ ಅಲ್ಲೂ ಡ್ಯಾನ್ಸ್ ಗೆ ಮೆಚ್ಚುಗೆ ವ್ಯಕ್ತಪಡಿಡಿದ್ದಾರೆ.

https://www.instagram.com/shilpashetty_team/?utm_source=ig_embed

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights