ಬುದ್ಧಿವಂತ ಬಾಂಬರ್ : ಆದಿತ್ಯರಾವ್ ಬಾಯಿಬಿಟ್ಟ ರೋಚಕ ಸಂಗತಿಗಳು…

ಬಾಂಬರ್ ಆದಿತ್ಯ ರಾವ್ ಬಂಧನ ವಿಚಾರವಾಗಿ ಮಂಗಳೂರು ಕಮಿಷನರ್ ಕಚೇರಿಯಲ್ಲಿ ಕಮಿಷನರ್ ಹರ್ಷ ಸುದ್ದಿಗೋಷ್ಠಿ ನಡೆಸಿ ರೋಚಕ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನಮ್ಮ ಬಳಿ ಇದ್ದ ಸಿಸಿ ಟಿವಿ ಫೂಟೇಜ್ ಪೋಟೋ ತಾಳೆ ಹಾಕಿ ನೋಡಿ ಆದಿತ್ಯರಾವ್ ನನ್ನು ವಶಕ್ಕೆ ಪಡೆಯಲಾಗಿದೆ.

“ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣ ಆರೋಪಿ‌ ಆದಿತ್ಯರಾವ್ ಎಂದು ದಸ್ತಗಿರಿ ಮಾಡಿ, ನಿನ್ನೆ ೯ ಗಂಟೆಗೆ ಮಂಗಳೂರಿಗೆ ಕರೆ ತಂದು ಪ್ರಕರಣ ಕುರಿತು ಪ್ರಶ್ನೆ ಮಾಡಿ ತನಿಖೆ ಮಾಡುತ್ತಿದ್ದೇವೆ. ಮೂಲತ: ಉಡುಪಿಯವನು ಈತ. ೩೭ ವರ್ಷ ವಯಸ್ಸು. ಮೈಸೂರುನಲ್ಲು BE ಮೆಕಾನಿಕಲ್ ಪದವಿ, ಹಾಗೂ MBA ಪದವಿ ಪಡೆದಿದ್ದ. ಈತ ಬ್ಯಾಂಕಿಂಗ್ ಹಾಗೂ ಫೈನಾನ್ಸಿಯಲ್, ಇನ್ಸೂರೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾನೆ.”

” ಆದರೆ ಸುದೀರ್ಘ ಕೆಲಸ ಎಲ್ಲೂ ಮಾಡಿಲ್ಲ. ಈತನಿಗೆ ಇಂಡೋರ್ ಕೆಲಸ ಮಾಡುವ ಆಸಕ್ತಿ ಕಡಿಮೆಯಾಗಿ, ಬೆಂಗಳೂರಿನ ಪೀಣ್ಯದಲ್ಲಿ ಕಂಪನಿಯಲ್ಲಿ ಕೆಲಸ ಮಾಡಿದ್ದಾನೆ. ನಂತರ ಪ್ರತಿಷ್ಠಿತ ಕಂಪನಿಗೆ ಸುಳ್ಳು ದಾಖಲೆ ಸೃಷ್ಟಿಸಿ ಕೆಲಸ ಗಿಟ್ಟಿಸಿದ್ದ. ನಂತರ ಗೊತ್ತಾಗುತ್ತದೆ ಅಂತ ಅಲ್ಲಿಯೂ ಕೆಲಸ ಬಿಟ್ಟಿದ್ದಾನೆ. ಸಮಾಜದಲ್ಲಿ ಅವನಿಗೆ ಸಿಗಬೇಕಾದ ಅವಕಾಶ ದೊರೆಯಲಿಲ್ಲ. ವೈಟ್ ಕಾಲರ್ ಕೆಲಸ ಸರಿಯಾಗಿ ಸಿಗಲಿಲ್ಲ ಅಂತ ನಂತರ ಸೆಕ್ಯುರಿಟಿ ಕೆಲಸ ಮಾಡುತ್ತಾನೆ.”

“SDM ಕಾಲೇಜು ಉಜಿರೆ, ಮೂಡಬಿದಿರೆ MIT ಕಾಲೇಜಿನಲ್ಲೂ ಕೆಲಸ ಮಾಡುತ್ತಾನೆ. ನಂತರ ಬಾರ್ ನಲ್ಲಿ ಊಟ ವಸತಿ ಸಿಗುತ್ತೆ ಅಂತ ಕೆಲಸ ಮಾಡುತ್ತಾನೆ. ನಂತರ ಅನೇಕ‌ ಹೋಟೆಲ್ ನಲ್ಲಿ ಕೆಲಸ ಮಾಡಿದ್ದಾನೆ. ಬೆಂಗಳೂರು ವಿಮಾನ ನಿಲ್ದಾಣ ಸೆಕ್ಯುರಿಟಿ ಕೆಲಸ ಇದೆ ಅಂತ ಅಪ್ಲೈ ಮಾಡುತ್ತಾನೆ. ನಂತರ ಮಣಿಪಾಲ್ ಗೆ ಬಂದು ಲೀಗಲ್ ದಾಖಲೆ ಮಾಡಿ, ಬೆಂಗಳೂರಿಗೆ ಹೋದಾಗ ಬೇರೆಯವನಿಗೆ ಕೆಲಸ ನೀಡಿದ್ದರು. ಇದೇ ಕೋಪದಿಂದ ನಿಲ್ದಾಣದಲ್ಲಿ ಬಾಂಬ್ ಇಡಲು ಯೋಚಿಸಿದ್ದಾನೆ.”

“ನಂತರ ವಿಮಾನ ನಿಲ್ದಾಣದ ಕುರಿತು ಸ್ಟಡಿ ಮಾಡುತ್ತಾನೆ. ನಂತರ 2018ರಲ್ಲಿ ಬೆಂಗಳೂರು ವಿಮಾನ ನಿಲ್ದಾನದ ಅಧಿಕಾರಿಗಳಿಗೆ ೨ ಬಾರಿ ಬೆದರಿಕೆ ಕರೆ ಮಾಡಿದ್ದಾನೆ. ಆನಂತರ ರೈಲ್ವೆ ಇಲಾಖೆಗೂ ಬೆದರಿಕೆ ಕಾಲ್ ಮಾಡಿದ್ದಾನೆ. ಹೀಗೆ ಒಟ್ಟು ೩ ಪ್ರಕರಣ ಇವನ ವಿರುದ್ಧ ದಾಖಲು ಆಗಿತ್ತು. ಪ್ರಕರಣದಲ್ಲಿ ಜೈಲು ವಾಸ ಈತನಿಗೆ ಆಗುತ್ತದೆ.”

” ಚಿಕ್ಕ ಬಳ್ಳಾಪುರ ಜೈಲಿನಲ್ಲಿ ೧ ವರ್ಷ ಜೈಲು ವಾಸ ಅನುಭವಿಸುತ್ತಾನೆ. ನಂತರ ಜೈಲಿನಿಂದ ಹೊರ ಬಂದು, ವಿಮಾನ ನಿಲ್ದಾಣ ಕ್ಕೆ ಏನಾದರೂ ಮಾಡಬೇಕು ಅಂತ ಯೋಚನೆ ಮಾಡಿದ್ದ. ವಿವಿಧ ರೀತಿಯಲ್ಲಿ ಸ್ಟಡಿ ಮಾಡುತ್ತಾನೆ. ಬಾಂಬ್ ತಯಾರಿಕೆ ಕುರಿತು ಅದ್ಯಯನ ಮಾಡುತ್ತಾನೆ. ಆನ್ ಲೈನ್ ಮೂಲಕ ಹೇಗೆ ಬಾಂಬ್ ತಯಾರಿ ಮಾಡಬಹುದು ಎಂದು ತಿಳಿದುಕೊಳ್ಳುತ್ತಾನೆ. ಬೇರೆ ಬೇರೆ ಸ್ಪೋಟಕ ವಸ್ತುಗಳನ್ನು ತರಿಸಿ ಬಾಂಬ್ ತಯಾರಿಸುತ್ತಾನೆ.”

“ಮಂಗಳೂರು ವಿಮಾನ ನಿಲ್ದಾಣ ಗುರಿಯಾಗಿಸಿಕೊಂಡಿದ್ದ ಈತ, ಮಂಗಳೂರು ಕುಡ್ಲ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳತ್ತಾನೆ. ರಜಾ ಸಂದರ್ಭದಲ್ಲಿ ಇದೇ ಬಾಂಬ್ ತಯಾರಿಕೆ ಕೆಲಸ ಮಾಡುತ್ತಾನೆ.ಅದಾದ ಮೇಲೆ ಎಲ್ಲ ತಯಾರು ಆದ ನಂತರ ಕೊನೆಯ ಭಾಗ ಜೋಡಿಸದೇ ಅನುಮಾನ ಬರಬಹುದು ಅಂತ ಕಾರ್ಕಳದಲ್ಲಿ ಹೋಟೆಲ್ ಕೆಲಸಕ್ಕೆ ಸೇರಿಕೊಳ್ಳುತ್ತಾನೆ.ನಂತರ ಮಂಗಳೂರು ಬಂದು ಬಸ್ ಮೂಲಕ ವಿಮಾನ ನಿಲ್ದಾಣ ಜಂಕ್ಷನ್ ತಲುಪಿ, ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಹೋಗಿ ಬಾಂಬ್ ಇಟ್ಟು ಆಟೋ ಮೂಲಕ ಪರಾರಿ ಆಗಿದ್ದಾನೆ. ನಂತರ ಪೊಲೀಸರು ಹಿಡಿಯುತ್ತಾರೆ ಅಂತ ಗೊತ್ತಾಗಿ ಬೆಂಗಳೂರಿಗೆ ಬಸ್ ನಲ್ಲಿ ಹೋಗಿ ಶರಣಾಗಿದ್ದಾನೆ.”

” ಈತ ಟೈಮ್ ಇಟ್ಟು ಸ್ಪೋಟ ಮಾಡುವ ಉದ್ದೇಶ ಹೊಂದಿದ್ದ. ಈತ ಒಬ್ಬ ವ್ಯಕ್ತಿಯೇ ಬಾಂಬ್ ಮಾಡಿದ್ದಾನೆ ಅಂತ ಇಷ್ಟರ ವರೆಗಿನ ತನಿಖೆಯಲ್ಲಿ ತಿಳಿದು ಬಂದಿದೆ. ಈತನ ಮೇಲೆ ಎರಡು ಗಂಭೀರ ಪ್ರಕರಣ ದಾಖಲಿಸಲಾಗಿದೆ. ಇವತ್ತು ವೈದ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ. ಆದಿತ್ಯರಾವ್ ವಿರುದ್ಧ ಮೂರು ಹುಸಿಬಾಂಬ್ ಕರೆ ಮಾಡಿರೋ ಕೇಸ್ ದಾಖಲಾಗಿದೆ.”

“ಜೈಲಿನಲ್ಲಿರುವಾಗ ವಿಮುಖನಾಗಿ ಮತ್ತಷ್ಟು ಕೃತ್ಯ ನಡೆಸಲು ಪ್ಲಾನ್ ಮಾಡಿದ್ದನು. ತಂತ್ರಜ್ಞಾನದ ಬಗ್ಗೆ ಅತೀವ ಜ್ಞಾನ ಹೊಂದಿದ್ದ ಆದಿತ್ಯರಾವ್. ಯೂಟ್ಯೂಬ್ ಮೂಲಕ ಬಾಂಬ್ ತಯಾರಿಕೆ ಬಗ್ಗೆ ಮಾಹಿತಿ ಪಡೆಯುತ್ತಿದ್ದ. ಹಲವಾರು ತಿಂಗಳುಗಳ ಕಾಲ ಬಾಂಬ್ ತಯಾರಿ ಬಗ್ಗೆ ರಿಸರ್ಚ್ ಮಾಡಿದ್ದ. ಕುಡ್ಲ ಹೊಟೇಲ್ ನಲ್ಲಿ ಡಿಸೆಂಬರ್ ನಲ್ಲಿ ಕೆಲಸಕ್ಕೆ ಸೇರಿದ್ದ ಆದಿತ್ಯರಾವ್, ವಾರದ ರಜೆಗಳಲ್ಲಿ ಬಾಂಬ್ ತಯಾರಿಸುತ್ತಿದ್ದ.”

“ಮಂಗಳೂರಿನ ಹೊಟೇಲ್ ಜಾಬ್ ಬಿಟ್ಟು ಕಾರ್ಕಳದಲ್ಲಿರುವ ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಿದ್ದ. ಕಾರ್ಕಳದಿಂದ ಬಜ್ಪೆ ಏರ್ ಪೋರ್ಟ್ ಗೆ ಬಂದಿಳಿದಿದ್ದ. ಸೆಲೂನ್ ಗೂ ಕೂಡಾ ಹೋಗಿ ಬ್ಯಾಗ್ ಇಡಲು ಹೋಗಿದ್ದ , ಮೊದಲೇ ಏರ್ ಪೋರ್ಟ್ ಸುತ್ತಮುತ್ತಲಿನ ಸ್ಥಳದ ಬಗ್ಗೆ ಮಾಹಿತಿ ಪಡೆದಿದ್ದ. ಬೇರೆ ಬೇರೆ ರಿಕ್ಷಾದಲ್ಲಿ ಕೃತ್ಯ ನಡೆಸಲು ಹೋಗಿದ್ದ ಆದಿತ್ಯರಾವ್, ಮಂಗಳೂರಿನಿಂದ ಬೆಂಗಳೂರಿಗೆ ಬಸ್ ಮೂಲಕ ಹೋಗಿದ್ದ. ಆದಿತ್ಯರಾವ್ ವಿರುದ್ಧ ಎರಡು ಗಂಭೀರ ಪ್ರಕರಣಗಳು ದಾಖಲಾಗಿವೆ. ಆದಿತ್ಯರಾವ್ ವಿರುದ್ಧ ಉಗ್ರ ಚಟುವಟಿಕೆ ಸಂಬಂಧಿಸಿ ಬಗ್ಗೆ ಕೇಸ್ ದಾಖಲಾಗಿದೆ. ಕೋರ್ಟ್ ಮುಂದೆ ಹಾಜರು ಪಡಿಸಲಾಗುವುದು. ಕೋರ್ಟ್ ನಲ್ಲಿ ಕಸ್ಟಡಿಗೆ ನೀಡುವಂತೆ ನಾವು ಮನವಿ ಮಾಡುತ್ತೇವೆ ಎಂದು ಕಮಿಷನರ್ ಹರ್ಷ ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights