ಬಾಂಬರ್ ಆದಿತ್ಯರಾವ್ ಬಾಂಬ್ ತಯಾರಿಸಿದ್ದು ಹೇಗೆ..? ಈ ಬಗ್ಗೆ ಸಹೋದರ ಹೇಳಿದ್ದೇನು?

ಮಂಗಳೂರು ವಿಮಾನ ನಿಲ್ದಾಣದಲ್ಲಿ ನೆನ್ನೆ ಪತ್ತೆಯಾದಾಗಿನಿಂದ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಲೇ ಇವೆ. ಬಾಂಬರ್ ಆದಿತ್ಯರಾವ್ ಸಿಕ್ಕ ಬಳಿಕೆ ಈ ಬಗ್ಗೆ ಭಾರೀ ಕುತೂಹಲಗಳು ಹೆಚ್ಚಾಗತೊಡಗಿದ್ದು ಒಂದೊಂದಾಗಿ ವಿಚಾರಗಳು ಬೆಳಕಿಗೆ ಬರುತ್ತಿವೆ.

ನೋಡೋಕೆ ಒಂದು ರೀತಿ ಕಂಡರೂ ಬಾಂಬರ್ ಆದಿತ್ಯರಾವ್ ಮಹಾನ್ ಬುದ್ದಿವಂತ. ಈತ ಮಂಗಳೂರು ಏರ್‌ಪೋರ್ಟ್‌ನಲ್ಲಿಟ್ಟ ಬಾಂಬ್‍ನ್ನು ಯೂಟ್ಯೂಬ್ ನೋಡೇ ತಯಾರಿಸಿದ್ದು.  ಕಳೆದ ಒಂದು ವರ್ಷದಿಂದ ಯೂಟ್ಯೂಬ್ ನೋಡಿಕೊಂಡೇ ಬಾಂಬ್ ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದ ಈತ ಬಾಂಬ್ ತಯಾರಿಸಲು ಬೇಕಾದ ಕಚ್ಚಾವಸ್ತುಗಳನ್ನು ಆನ್‍ಲೈನ್ ಮೂಲಕ ತರಿಸಿಕೊಳ್ಳುತ್ತಿದ್ದ.

ಮನೆಯಲ್ಲಿ ಬಾಂಬ್ ತಯಾರಿಸಿದರೆ ಅಕ್ಕಪಕ್ಕದವರಿಗೆ ಅನುಮಾನ ಬರಬಹುದು ಎಂದು ಈತ ಮಂಗಳೂರಿನ ಖಾಸಗಿ ಹೋಟೆಲ್‍ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.

ರೆಸ್ಟೋರೆಂಟ್ ಬಿಲ್ಲಿಂಗ್ ಸೆಕ್ಷನ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆದಿತ್ಯ ರಾವ್ ಹೋಟೆಲ್‍ನ ರೂಮ್‍ವೊಂದರಲ್ಲೇ ಬಾಂಬ್ ತಯಾರಿಸಿದ್ದ. ಬಾಂಬ್ ತಯಾರಿಸಿದ ನಂತರ ಕಳೆದ ಜ.13ರಂದು ಕೆಲಸ ಬಿಟ್ಟು ತಾನು ತಯಾರಿಸಿದ್ದ ಬಾಂಬ್‍ನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಯಾರಿಗೂ ತಿಳಿಯದಂತೆ ಇಟ್ಟು ತಲೆಮರೆಸಿಕೊಂಡಿದ್ದ.  ಬಾಂಬರ್ ಪತ್ತೆಗೆ ಮುಂದಾದ ಪೊಲೀಸರು ಮಂಗಳೂರಿನ ರೆಸ್ಟೋರೆಂಟ್‍ಗೆ ಭೇಟಿ ನೀಡಿದಾಗ ಅಲ್ಲಿ ಬಾಂಬ್ ತಯಾರಿಕೆಗೆ ಬಳಸಿರುವ ಬಿಳಿ ಪೌಡರ್ ಪತ್ತೆಯಾಗಿದೆ.

ಈ ಬಗ್ಗೆ ಪ್ರಶ್ನಿಸಿದರೆ ಆದಿತ್ಯನ ಸಹೋದರ ಹೇಳಿದ್ದು ಹೀಗೆ..

ಆದಿತ್ಯನಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಆತನ ತಪ್ಪುಗಳಿಗೆ ನಾವು ಜವಾಬ್ದಾರರಲ್ಲ. ನಾವು ಅವನ ಕೃತ್ಯಕ್ಕೆ ಸಪೋರ್ಟ್ ಕೂಡ ಮಾಡುವುದಿಲ್ಲ. ನಮ್ಮ ಅನ್ನಕ್ಕಾಗಿ ನಾವು ದುಡಿಯುತ್ತಿದ್ದೇವೆ. ಆತ ನನ್ನ ಅಣ್ಣ ಹೌದು.. ಆದ್ರೇ ಆತನೊಂದಿಗೆ ಈ ಹಿಂದೆ ಇಂತಹ ಕೃತ್ಯ ಎಸಗಿದ ನಂತ್ರ ಮಾತನಾಡುತ್ತಿಲ್ಲ ಎಂಬುದಾಗಿ ಆದಿತ್ಯ ರಾವ್ ಸಹೋದರ ಅಕ್ಷತ್ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯ ರಾವ್ ತಮ್ಮ ಅಕ್ಷತ್, ನಾವು ನಮ್ಮ ಅನ್ನಕ್ಕಾಗಿ ದುಡಿಯುತ್ತಿದ್ದೇವೆ. ಆತನಿಗೆ ಎಷ್ಟೇ ಬುದ್ಧಿ ಹೇಳಿದರೂ ಬದಲಾಗಲಿಲ್ಲ. ಇದೇ ವಿಚಾರದಲ್ಲಿ ಅಪ್ಪ ತುಂಬಾ ಸಾರಿ ಅವನನ್ನು ಬದಲಾಯಿಸಲು ಪ್ರಯತ್ನ ಪಟ್ಟರು ಆದ್ರೇ ಬದಲಾಗಲಿಲ್ಲ. ಹೀಗಾಗಿ ಅವನ ಸಂಪರ್ಕದಲ್ಲಿಯೇ ನಾವು ಇಲ್ಲ ಎಂದು ತಿಳಿಸಿದರು.

ಆತನು ನಾನು ಹೈಸ್ಕೂಲ್ ವರೆಗೆ ಜೊತೆಗೆ ಬೆಳೆದೆವು. ಕಾಲೇಜು ಸಮಯದಲ್ಲಿ ಆತ ಹಾಸ್ಟೆಲ್ ಗೆ ಸೇರಿದ. ಆನಂತ್ರ ಆತನ ಸಂಪರ್ಕ ನನ್ನೊಂದಿಗೆ ಕಡಿಮೆ ಆಯಿತು. ಕಳೆದ ಬಾರಿ ಬಾಂಬ್ ಬೆದರಿಕೆ ಕರೆಯ ನಂತ್ರ ಬುದ್ದಿ ಹೇಳಲಾಗಿತ್ತು. ಆದ್ರೇ ತಿದ್ದಿಕೊಳ್ಳಲಿಲ್ಲ. ನಾನು ಅವನೊಂದಿಗೆ ಸಂಪರ್ಕ ಬಿಟ್ಟೆವು. ಮನೆಯಲ್ಲಿ ಅಮ್ಮ ತೀರಿಕೊಂಡಾಗಲೂ ತಿಳಿಸಿದ್ರೂ ಬರಲಿಲ್ಲ. ನಾನೇ ಅಮ್ಮನ ತಿಥಿಕಾರ್ಯ ಮಾಡಿದೆ ಎಂದರು.

2019 ಫೆಬ್ರವರಿ ಕೊನೇ, ನಮ್ಮ ಕುಟುಂಬದ ನಾನಾಗಲೀ, ನಮ್ಮ ತಂದೆಯಾಗಲೀ ಆತನ ಸಂಪರ್ಕದಲ್ಲಿ ಇಲ್ಲ. ಆತ ಜೈಲಿಗೆ ಹೋದಾಗಲೂ ಬೇಲ್ ಗೆ ನಾವು ಸಹಕರಿಸಿಲ್ಲ. ಅವನಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸರಿಗೆ ತಿಳಿಸಿದ್ದೇವೆ. ಪೊಲೀಸರ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಅವನ ಯಾವುದೇ ಕೃತ್ಯಕ್ಕೂ ನಾವು ಸಪೋರ್ಟ್ ಮಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights