ಇದ್ದಕ್ಕಿದ್ದಂತೆ ತಳ್ಳಿದಂತೆ ಫಾಸ್ಟ್ ಆದ ಬೈಕ್! : ವಿಡಿಯೋ ಕಂಡು ಬೆಚ್ಚಿಬಿದ್ದ ನೆಟ್ಟಿಗರು

ಈ ವಿಡಿಯೋನೊಮ್ಮೆ ನೋಡಿ… ಮತ್ತೊಮ್ಮೆ ಸರಿಯಾಗಿ ನೋಡಿ. ನೀವು ಸರಿಯಾಗಿ ನೋಡಿಲ್ಲ ಅಂದ್ರೆ ಇನ್ನೊಮ್ಮೆ ನೋಡಿ. ಯಾಕಂದ್ರೆ ಇಲ್ಲಿ ನಡೆದ ಅಪಘಾತದಲ್ಲಿ ಚಮತ್ಕಾರವೊಂದು ನಡೆದಿದೆ.

ಅದೇನಂತ ಸೂಕ್ಷ್ಮವಾಗಿ ನೋಡಿದರೆ ನಿಮಗೆ ಅರ್ಥ ಆಗಿರಬಹುದೆನೋ. ಆದರೂ ನಾವೊಂದು ಬಾರಿ ಹೇಳಿಬಿಡ್ತಿವಿ ಕೇಳಿ. ಈ ವಿಡಿಯೋದಲ್ಲಿ ಹಿಂಬದಿ ದ್ವಿಚಕ್ರ ವಾಹನ ಸವಾರ ಮುಂಬದಿಯಲ್ಲಿನ ದ್ವಿಚಕ್ರದಲ್ಲಿ ಚಲಿಸುತ್ತಿದ್ದ ವ್ಯಕ್ತಿಯ ಮೇಲೆ ಹರಿಸಿದ್ದಾನೆ. ಇಲ್ಲಿ ಹಿಂಬದಿ ಸವಾರ ಫಾಸ್ಟ್ ಆಗಿ ಬಂದಿದ್ದು ನಿಜ. ಆದರೆ ದೃಶ್ಯದಲ್ಲಿ ಹಿಂಬದಿ ಸವಾರನ ಬೈಕ್ ಒಂದು ರೇಂಜ್ ನಲ್ಲಿ ಫಾಸ್ಟ್ ಆಗಿತ್ತು. ಆದರೆ ಇದ್ದಕ್ಕಿದ್ದಂತೆ ಫಾಸ್ಟ್ ಆಗಿದ್ದು ಗಮನಕ್ಕೆ ಬರುತ್ತದೆ.

ಈ ದೃಶ್ಯ ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಹಿಂಬದಿ ಸವಾರನ ಬೈಕ್ ಕೊಂಚ ನಿಧಾನವಾಗಿ ಚಲಿಸುತ್ತಿತ್ತು, ಆದರೆ ಇದ್ದಕ್ಕಿದ್ದಂತೆ ಫಾಸ್ಟ್ ಆಗಿ ಮುಂಬದಿ ಸವಾರನ ಮೇಲೆ ಹರಿದಿದೆ. ಇದು ನೋಡುಗರನ್ನ ಬೆಚ್ಚಿ ಬೀಳಿಸಿದೆ.

ಅಷ್ಟಕ್ಕೂ ಈ ದೃಶ್ಯ ನಡೆದಿದ್ದು ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ. ಎರಡು ಬೈಕ್ ಗಳ ನಡುವಿನ ಭೀಕರ ಅಪಘಾತದ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಒಂದು ಬೈಕ್ ಡಿಕ್ಕಿಯ ರಭಸಕ್ಕೆ ದೂರ ಹಾರಿಬಿದ್ದ ಇನ್ನೊಂದು ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಡಿ. 18 ರಂದು ಈ ಅಪಘಾತ ನಡೆದಿದ್ದು. ತಡವಾಗಿ ಬೆಳಕಿಬೆ ಬಂದಿದೆ. ಹಿಂದಿನಿಂದ ಬಂದ ಬೈಕ್ ಡಿಕ್ಕಿಯಾಗಿ 50 ಅಡಿಯಷ್ಟು ದೂರ ಹಾರಿಬಿದ್ದ ಮತ್ತೊಬ್ಬ ಬೈಕ್ ಸವಾರ ಸಂಗಾಪುರ ನಿವಾಸಿ ನಿಂಗಪ್ಪ ಜಾನೋಜಿ(50) ಆಸ್ಪತ್ರೆಯಲ್ಲಿ ಡಿ. 19ರಂದು ಸಾವನ್ನಪ್ಪಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಇದೀಗ ವಿಡಿಯೋ ವೈರಲ್ ಆಗಿದ್ದು, ವಿಜಯಪುರ ಜಿಲ್ಲೆಯ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights