150 ದೇಶಗಳಿಗೆ ಕೋವಿಡ್‌ ನೆರವು ನೀಡಿದ್ದೇವೆ ಎಂದು ಸುಳ್ಳು ಹೇಳಿದ್ದ ಮೋದಿ: RTIನಿಂದ ಬಹಿರಂಗ!

ಕೊರೊನಾ ಹಿನ್ನೆಲೆಯಲ್ಲಿ  150 ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ನೆರವನ್ನು ಭಾರತ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ವಿಶ್ವಸಂಸ್ಥೆಯ ವೇದಿಕೆಯೊಂದರಲ್ಲಿ ತಿಳಿಸಿದ್ದರು. ಆದರೆ, ಭಾರತವು 81 ದೇಶಗಳಿಗೆ ಮಾತ್ರ ನೆರವು ನೀಡಿದೆ ಎಂದು ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಮೂಲಹ ಬಹಿರಂಗವಾಗಿದೆ.

ಜುಲೈ ಮಧ್ಯದ ವಾರದಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಪ್ರಧಾನಿ ಮೋದಿ, ಭಾರತವು 150 ದೇಶಗಳಿಗೆ ನೆರವು ನೀಡಿದೆ ಎಂದು ಹೇಳಿಕೊಂಡಿದ್ದರು. ಆದರೆ, ಆಗಸ್ಟ್ ಮೊದಲ ವಾರದ ವರೆಗೂ ಭಾರತವು  81 ದೇಶಗಳಿಗೆ, ₹97.73 ಕೋಟಿಯಷ್ಟು ನೆರವು ನೀಡಿದೆ ಎಂದು ಕೇಂದ್ರ ಸರ್ಕಾರವೇ ಆರ್‌ಟಿಐಗೆ ಉತ್ತರಿಸಿದೆ.

ಜುಲೈ 17 ರಂದು ನಡೆದ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಅಧಿವೇಶನದ ಉನ್ನತ ಮಟ್ಟದ ಸಮಾರಂಭದಲ್ಲಿ ಪ್ರಧಾನಿ ಮಾಡಿದ್ದ ಭಾಷಣಕ್ಕೂ, ಈಗ ಸರ್ಕಾರವೇ ನೀಡಿರುವ ಅಂಕಿ ಅಂಶಗಳಿಗೂ ವ್ಯತ್ಯಾಸಗಳು ಕಂಡು ಬಂದಿದೆ.

‘ಭಾರತವು 150 ದೇಶಗಳಿಗೆ ನೆರವು ನೀಡಿದೆ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ವಿದೇಶಾಂಗ ಇಲಾಖೆ ನೀಡಿದ ಇತ್ತೀಚಿನ ಮಾಹಿತಿ ಪ್ರಕಾರ 81 ದೇಶಗಳಿಗೆ ನೆರವು ಸೀಮಿತವಾಗಿದೆ. ಭಾರತದಿಂದ ನೆರವು ಪಡೆದ ಉಳಿದ ದೇಶಗಳು ಯಾವುವು ಎಂಬುದು ತಿಳಿಯುತ್ತಿಲ್ಲ’ ಎಂದು ಆರ್‌ಟಿಐ ಕಾರ್ಯಕರ್ತ ವೆಂಕಟೇಶ್‌ ನಾಯಕ್‌ ಅವರು ತಿಳಿಸಿರುವುದಾಗಿ’ಡೆಕ್ಕನ್‌ ಹೆರಾಲ್ಡ್‌’ ವರದಿ ಮಾಡಿದೆ.


ಇದನ್ನೂ ಓದಿ: ಆರೋಗ್ಯ ಸೇತು ಆ್ಯಪ್ ಸೃಷ್ಠಿಸಿದವರೇ ಗೊತ್ತಿಲ್ಲ ಎಂದ ಕೇಂದ್ರ ಸರ್ಕಾರ: ಮೋದಿ ಸರ್ಕಾರಕ್ಕೆ ನೋಟಿಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights