ಸಿನಿಮೀಯ ರೀತಿಯಲ್ಲಿ ಮಗುವನ್ನು ಕ್ಯಾಚ್ ಹಿಡಿದು ರಕ್ಷಿಸಿದ ಆಟಗಾರ : ವಿಡಿಯೋ ವೈರಲ್
ಫೋನಿಕ್ಸ್ ಅಪಾರ್ಟಮೆಂಟ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಾಲ್ಕನಿಯಲ್ಲಿ ಎಸೆದ ಮಗುವನ್ನು ಸಿನಿಮೀಯ ರೀತಿಯಲ್ಲಿ ಕ್ಯಾಚ್ ಹಿಡಿದ ಮಾಜಿ ಫುಡ್ ಬಾಲ್ ಆಟಗಾರನ ಸಾಹಸಕ್ಕೆ ನೆಟ್ಟಿಗರು ತಲೆ ಬಾಗಿದ್ದಾರೆ.
ಸ್ನೇಹಿತರ ಅಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುವಾಗ ಫಿಲಿಪ್ ಬ್ಲಾಂಕ್ಸ್ ಕಿರುಚಾಟಗಳನ್ನು ಕೇಳಿ ಹೊರ ಬಂದಿದ್ದಾರೆ. ಮೂರನೇ ಅಂತಸ್ತಿನ ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಾಲ್ಕನಿಯಲ್ಲಿ ಮಹಿಳೆಯೊಬ್ಬಳು ಮಗುವನ್ನು ಕೈಯಲ್ಲಿ ಹಿಡಿದು ನಿಂತಿದ್ದಾಳೆ. ಆ ಮಗುವನ್ನು ಎಸೆಯಲು ಜನ ಕಿರುಚುತ್ತಿರುವುದನ್ನ ಕೇಳಿ ಹೊರಬಂದ ಮಾಜಿ ಫುಟ್‌ಬಾಲ್ ಆಟಗಾರ ಫಿಲಿಪ್ ಬ್ಲಾಂಕ್ಸ್ ಮಗುವನ್ನು ಕ್ಯಾಚ್ ಹಿಡಿದು ರಕ್ಷಿಸಿದ್ದಾರೆ.
28ನೇ ವಯಸ್ಸಿನಲ್ಲಿ ಫುಟ್ಬಾಲ್ ನಲ್ಲಿ ಆಸಕ್ತಿ ಹೊಂದಿದ್ದ ಫಿಲಿಪ್ ಸಾಹಸಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಡಿಸಿದ್ದಾರೆ.
WATCH: When a 3-year-old boy was dropped from the third story of a burning building in Arizona, a former football player dove to catch him. That man was Phillip Blanks, a retired U.S. Marine, who saved the boy just before he hit the ground. pic.twitter.com/Hnq51iNu0E
— CBS News (@CBSNews) July 9, 2020
ನೆರೆಹೊರೆಯವರು ಈಗಾಗಲೇ 8 ವರ್ಷದ ಬಾಲಕಿಯನ್ನು ಜ್ವಾಲೆಯಿಂದ ರಕ್ಷಿಸಿದ್ದರು. ಜನ ಮತ್ತೊಬ್ಬ ಬಾಲಕನನ್ನು ರಕ್ಷಿಸುವ ಪ್ರಯತ್ನದಲ್ಲಿದ್ದರು. ಆಗ ಫಿಲಿಪ್ ರಕ್ಷಣೆಗೆ ಮುಂದಾಗಿದ್ದಾರೆ. ಇಬ್ಬರ ಮಕ್ಕಳ ರಕ್ಷಣೆ ಬಳಿಕ ತಾಯಿ ರಾಚೆಲ್ ಲಾಂಗ್ (30) ಅವರನ್ನು ಮಾತ್ರ ಬದುಕಿಸಲು ಸಾಧ್ಯವಾಗಲಿಲ್ಲ.
ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ಮಗು ತನ್ನ ತೋಳುಗಳಲ್ಲಿ ಬೀಳುತ್ತಿದ್ದಂತೆ ಬ್ಲಾಂಕ್ಸ್ ಡೈವಿಂಗ್ ಕ್ಯಾಚ್ ಮಾಡುತ್ತಾರೆ. ಹುಡುಗನ ಕಾಲು ಸ್ವಲ್ಪ ಗಾಯಗೊಂಡಿದೆ ಎಂದು ತಿಳಿದು ಬಂದಿದ್ದು ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
“ನಾನು ಫುಟ್‌ಬಾಲ್ ಹಿಡಿಯುವುದು ಹೇಗೆಂದು ಕಲಿತಿದ್ದೇನೆ. ಹಾಗಾಗಿ ಬಾಲಕನನ್ನು ಕ್ಯಾಚ್ ಹಿಡಿದು ರಕ್ಷಿಸಲು ಸಹಾಯವಾಯಿತು ” ಎಂದು ಫಿಲಿಪ್ ಈ ಬಗ್ಗೆ ವಿವರಿಸಿದರು.
“ನಾನು ನನ್ನನ್ನು ನಾಯಕನಾಗಿ ನೋಡುವುದಿಲ್ಲ. ನನ್ನ ಕೆಲಸವನ್ನು ಮಾಡಲು ತರಬೇತಿ ಪಡೆದ ವ್ಯಕ್ತಿಗೆ ಜನರನ್ನು ರಕ್ಷಿಸಲು ತರಬೇತಿ ನೀಡಲಾಗುತ್ತದೆ. ನಾನು ಮಕ್ಕಳ ಜೀವನದಲ್ಲಿ ಭಾಗಿಯಾಗಲು ಪ್ರಾಮಾಣಿಕವಾಗಿ ಬಯಸುತ್ತೇನೆ. ಏಕೆಂದರೆ ಅವರಿಗೆ ಆಘಾತಕಾರಿ ಅನುಭವವಿದೆ ಎಂದು ನನಗೆ ತಿಳಿದಿದೆ. ” ಎಂದು ಫಿಲಿಪ್ ಹೇಳಿದರು.

