ಅಸ್ಸಾಂ ವಿಶ್ವಾಸಗಳಿಸಲು ವಿಫಲವಾದ ಕಾಂಗ್ರೆಸ್‌; ವಿಫಲತೆಗೆ ಇವೆ ಸಾಕಷ್ಟು ಕಾರಣಗಳು!

ಅಸ್ಸಾಂನಲ್ಲಿ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೊದಿರದ ವಿಭಿನ್ನ ಸಿದ್ಧಾಂತಗಳನ್ನು ಹೊಂದಿದ್ದ 10 ವಿರೋಧ ಪಕ್ಷಗಳ ಮಹಾಮೈತ್ರಿಯು ನಿರೀಕ್ಷಿತ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ.

ಬಿಜೆಪಿಯನ್ನು ರಾಜ್ಯದ ಅಧಿಕಾರದಿಂದ ಕಿತ್ತೊಗೆಯಲು ಎರಡು ತಿಂಗಳ ಹಿಂದೆ ರೂಪುಗೊಂಡ ‘ಮಹಾಜೋತ್‌’ ಮೈತ್ರಿಯ ನೇತೃತ್ವವನ್ನು ಕಾಂಗ್ರೆಸ್‌ ವಹಿಸಿಕೊಂಡಿತ್ತು. ಆದರೆ, ಕಾಂಗ್ರೆಸ್‌ ಪಕ್ಷವೇ ರಾಜ್ಯದಲ್ಲಿ ಆಂತರಿಕ ನಾಯಕತ್ವದ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಮಾಜಿ ಸಿಎಂ ತರುಣ್‌ ಗೊಗೊಯ್‌ ಅವರ ಮರಣದ ನಂತರ ಕಾಂಗ್ರೆಸ್‌ ಒಳಗೆಯೇ ಬಣಗಳು ರೂಪುಗೊಂಡಿವೆ.

ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಒಟ್ಟುಗೂಡಿದ್ದರಿಂದ ಬಿಜೆಪಿ ಮತ್ತು ಅಸೋಮ್ ಗಣ ಪರಿಷತ್ (ಎಜಿಪಿ) ವಿರೋಧಿ ಮತಗಳ ವಿಭಜನೆಯನ್ನು ತಡೆಯಿತು. ಇದರಿಂದಾಗಿ 14 ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಭ್ಯರ್ಥಿಗಳು ಪಡೆದಿದ್ದ ಮತಪಾಲಿಗಿಂದಲೂ ಕಾಂಗ್ರೆಸ್‌-ಎಐಯುಡಿಎಫ್‌ ಮತಪಾಲು ಹೆಚ್ಚಾಯಿತು.

ಈ ಮೈತ್ರಿಕೂಟವು ಬರಾಕ್ ಕಣಿವೆಯ ಹೊರತಾಗಿ ಬಹುಸಂಖ್ಯಾತ ಬಂಗಾಳಿಗಳಿರುವ ಮಧ್ಯ ಮತ್ತು ಕೆಳ ಅಸ್ಸಾಂನಲ್ಲಿ ಲಾಭವನ್ನು ಪಡೆದರೆ, ಅಸ್ಸಾಮೀಸ್ ಪ್ರಾಬಲ್ಯದ ರಾಜ್ಯದ ಮೇಲ್ಭಾಗದಲ್ಲಿ ಕಾಂಗ್ರೆಸ್ ಬಗ್ಗೆ ಅಸಮಾಧಾನ ಮೂಡಿದೆ. ಬಾಂಗ್ಲಾದೇಶದಿಂದ ಅಕ್ರಮ ವಲಸೆಯ ಸಮಸ್ಯೆಯನ್ನು ಎದುರಿಸುತ್ತಿರುವ ರಾಜ್ಯವೊಂದರಲ್ಲಿ, ಎಐಯುಡಿಎಫ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ ಅಕ್ರಮ ವಲಸಿಗರನ್ನು ರಕ್ಷಿಸಲು ಮುಂದಾಗಿದೆ ಎಂದು ಅಸ್ಸಾಂನ ಮೇಲ್ಭಾಗದ ಮತದಾರರು ಭಾವಿಸಿದ್ದಾರೆ.

“ಎಐಯುಡಿಎಫ್‌ನೊಂದಿಗಿನ ಮೈತ್ರಿಯು ಅಸ್ಸಾಂನ ಮೇಲ್ಬಾಗದಲ್ಲಿ ನಮ್ಮ ಪ್ರಭಾವವನ್ನು ಹೆಚ್ಚಿಸುತ್ತದೆ” ಎಂದು ಕಾಂಗ್ರೆಸ್ ಒಳಗಿನವರು ಹೇಳಿದ್ದರು.

ಇತರ ಕಾರಣಗಳೆಂದರೆ, ಗೊಗೊಯ್ ಅವರ ಮರಣದ ನಂತರ ಕಾಂಗ್ರೆಸ್‌ಗೆ ನಾಯಕತ್ವದ ನಿರ್ವಾತವಿದೆ, “ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಿಪುನ್ ಬೋರಾ ಅವರ ನಾಯಕತ್ವವನ್ನು ಜನರು ಸ್ವೀಕರಿಸಲಿಲ್ಲ. ನಮಗೆ ಸಿಎಂ ಮುಖವಿಲ್ಲದ ಕಾರಣ ಜನರು ಗೊಂದಲಕ್ಕೊಳಗಾದರು” ಎಂದು ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ಎರಡು ಹೊಸ ಪಕ್ಷಗಳಾದ ರೈಜೋರ್ ದಾಲ್ ಮತ್ತು ಅಸೋಮ್ ಜತಿಯ ಪರಿಷತ್ ಪಕ್ಷಗಳು ಬಿಜೆಪಿ ವಿರೋಧಿ ಮತ್ತು ಎಜಿಪಿ ವಿರೋಧಿ ಮತಗಳನ್ನು ಹಲವಾರು ಸ್ಥಾನಗಳಲ್ಲಿ ವಿಭಜಿಸಲು ಕಾರಣವಾದವು. ಇದರಿಂದಾಗಿ ಕಾಂಗ್ರೆಸ್ ಮೇಲೆ ಪರಿಣಾಮ ಬೀರಿತು. ಸಿಎಎ ವಿರೋಧಿ ಭಾವನೆಗಳನ್ನು ಕಾಂಗ್ರೆಸ್ ಅತಿಯಾಗಿ ಅಂದಾಜು ಮಾಡಿತು ಅಥವಾ ತಪ್ಪಾಗಿ ಲೆಕ್ಕಾಚಾರ ಹಾಕಿತು. ಕಾಂಗ್ರೆಸ್‌ ಆಕ್ರಮಣಕಾರಿಯಾಗಿ ಪ್ರಚಾರ ಮಾಡುತ್ತಿದ್ದರೂ, ಸಿಎಎ ವಿರೋಧಿ ಚಳವಳಿಯ ಹಲವಾರು ನಾಯಕರು ಬಿಜೆಪಿಗೆ ಸೇರಿದರು.

ಇದನ್ನೂ ಓದಿ: ಮೂರು ರಾಜ್ಯಗಳಲ್ಲಿ BJP ಕಿಕ್‌ಔಟ್‌; ಕೇರಳದಲ್ಲಿ ಇದ್ದ ಒಂದು ಸ್ಥಾನವನ್ನು ಕಳೆದುಕೊಂಡ ಕೇಸರಿ ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights