ಮೂರು ರಾಜ್ಯಗಳಲ್ಲಿ BJP ಕಿಕ್‌ಔಟ್‌; ಕೇರಳದಲ್ಲಿ ಇದ್ದ ಒಂದು ಸ್ಥಾನವನ್ನು ಕಳೆದುಕೊಂಡ ಕೇಸರಿ ಪಡೆ!

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಭಾಗಶಃ ಮುಗಿಯುತ್ತಾ ಬರುತ್ತಿದೆ. ಕೇರಳದಲ್ಲಿ ಕಳೆದ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಅದನ್ನೂ ಕಳೆದುಕೊಂಡಿದ್ದು, ಶೂನ್ಯಕ್ಕೆ ಕುಸಿದಿದೆ.

ದೇಶದ ಜನರ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸ್ಪಷ್ಟ ಬಹುಮತ ಪಡೆದಿದೆ. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಒಂದು ಕಾಲದ ಆಪ್ತ, ಬಿಜೆಪಿಯ ಅಭ್ಯರ್ಥಿ ಸುವೆಂಧು ಅಧಿಕಾರಿ ವಿರುದ್ದ ನಂದಿಗ್ರಾಮದಲ್ಲಿ ಸೋಲುಂಡಿದ್ದಾರೆ ಎಂದು ಬ್ಯುಸಿನೆಸ್ ಸ್ಟಾಂಡರ್ಸ್ ಪತ್ರಿಕೆ ಸೇರಿದಂತೆ ಬಿಜೆಪಿ ಪ್ರತಿಪಾದಿಸಿದೆ. ಮುಖ್ಯಮಂತ್ರಿ ಮಮತಾ ಅವರು ಫಲಿತಾಂಶದ ವಿರುದ್ದ ನ್ಯಾಯಾಲಯಕ್ಕೆ ತೆರಳಲಿದ್ದಾರೆ ಎಂದು ಕೂಡಾ ಅದು ವರದಿ ಮಾಡಿದೆ.

ಆದರೆ ತೃಣಮೂಲ ಕಾಂಗ್ರೆಸ್, “ನಂದಿಗ್ರಾಮದಲ್ಲಿ ಇನ್ನೂ ಎಣಿಕೆ ಮುಗಿದಿಲ್ಲ” ಎಂದು ಪ್ರತಿಪಾದಿಸಿದೆ.

ರಾಜ್ಯದ ಎಲ್ಲಾ 292 ಕ್ಷೇತ್ರಗಳಲ್ಲಿ ಎಣಿಕೆ ಮುಕ್ತಾಯದ ಹಂತಕ್ಕೆ ತಲುಪಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರದತ್ತ ಮುನ್ನಡೆಯುತ್ತಿದೆ.

ಪಶ್ಚಿಮಬಂಗಾಳ – 292 ಕ್ಷೇತ್ರಗಳು 

TMC ► 166 Wins | ಮುನ್ನಡೆ ► 51
BJP ► Wins 47 | ಮುನ್ನಡೆ ► 25
Cong & Left ►Wins 0 | ಮುನ್ನಡೆ ► 2
ಇತರೆ ► Wins 1 | ಮುನ್ನಡೆ ► 0


ಕೇರಳ – 140 ಕ್ಷೇತ್ರಗಳು

ಕೇರಳದ ರಾಜಕೀಯ ಸಂಪ್ರದಾಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಬದಲಾಯಿಸಿದೆ. ನಾಲ್ಕು ದಶಕಗಳ ನಂತರ ಕೇರಳದಲ್ಲಿ ಸತತವಾಗಿ ಮೈತ್ರಿಕೂಟವೊಂದು ಅಧಿಕಾರ ಹಿಡಿಯಲಿದೆ. ಆದರೆ ಈ ಹಿಂದೆ ಇದ್ದ ಒಂದು ಕ್ಷೇತ್ರವನ್ನು ಕೂಡಾ ಬಿಜೆಪಿ ಕಳೆದುಕೊಂಡಿದೆ.

ಆರಂಭದಲ್ಲಿ ಕೇರಳದ ಪಾಲಕ್ಕಾಡ್, ಕಾಸರಗೋಡ್‌, ನೇಮಂನಲ್ಲಿ ಬಿಜೆಪಿ ಮುನ್ನಡೆಯಲ್ಲಿತ್ತು. ಇದೀಗ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಮುಗ್ಗರಿಸಿದೆ.

ಮುಖ್ಯಮಂತ್ರಿ ಪಿಣರಾಯಿ ಈ ಹಿಂದೆ ಬಿಜೆಪಿಗೆ ಇರುವ ಒಂದು ಕ್ಷೇತ್ರವನ್ನು ಕೂಡಾ ‘ಕ್ಲೋಸ್’ ಮಾಡುವುದಾಗಿ ಹೇಳಿದ್ದರು.

ಸಿಪಿಎಂ ನೇತೃತ್ವದ LDF ► 86 Wins | ಮುನ್ನಡೆ ► 13
ಕಾಂಗ್ರೆಸ್ ನೇತೃತ್ವದ UDF ► 37 Wins | ಮುನ್ನಡೆ ► 4
ಬಿಜೆಪಿ ನೇತೃತ್ವದ NDA► 0 Wins | ಮುನ್ನಡೆ ► 0


ತಮಿಳುನಾಡು- 234 ಕ್ಷೇತ್ರಗಳು

ತಮಿಳುನಾಡಿನಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಮಾಹಿತಿಯಂತೆ ವಿರೋಧ ಪಕ್ಷವಾದ ಡಿಎಂಕೆ ದಶಕಗಳ ನಂತರ ಅಧಿಕಾರ ಹಿಡಿಯುವತ್ತ ಹೊರಟಿದೆ. ಆದರೆ ಡ್ರಾವಿಡನಾಡಿನಲ್ಲಿ ಬಿಜೆಪಿಯು ಮೊದಲ ಬಾರಿಗೆ ಖಾತೆಯನ್ನು ತೆರೆದಿದೆ. 234 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಎಲ್ಲಾ ಕ್ಷೇತ್ರಗಳ ಮತ ಎಣಿಕೆ ಪ್ರಾರಂಭವಾಗಿದೆ.

DMK ಒಕ್ಕೂಟ ► 92 Wins | ಮುನ್ನಡೆ ► 62
AIADMK ಒಕ್ಕೂಟ ► 30 Wins | ಮುನ್ನಡೆ ► 50
(ಬಿಜೆಪಿ 3 ಕ್ಷೇತ್ರಗಳಲ್ಲಿ ಮುನ್ನಡೆ, ಮೊದಲ ಬಾರಿಗೆ ತಮಿಳುನಾಡಿನಲ್ಲಿ ಒಂದು ಕ್ಷೇತ್ರವನ್ನು ಗೆದ್ದುಕೊಂಡಿದೆ)

ಕಮಲ್ ಹಾಸನ್ MNM ► 0 Wins | ಮುನ್ನಡೆ ► 0


ಅಸ್ಸಾಂ – 126 ಕ್ಷೇತ್ರಗಳು

ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಆಡಳಿತ ಪಕ್ಷಗಳ ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿದ್ದರೂ, ಕಾಂಗ್ರೆಸ್ ಚೇತರಿಸಿಕೊಳ್ಳುತ್ತಿದೆ. ಆಡಳಿತರೂಢ ಬಿಜೆಪಿ ನೇತೃತ್ವದ ಮೈತ್ರಿ ಮತ್ತೆಅಧಿಕಾರ ಹಿಡಿಯುವತ್ತ ದಾಪುಗಾಲಿಟ್ಟಿದೆ.

BJP ಮೈತ್ರಿ ► 65 Wins | ಮುನ್ನಡೆ ► 8
ಕಾಂಗ್ರೆಸ್ ಮೈತ್ರಿ ► 38 Wins | ಮುನ್ನಡೆ ► 14
ಇತರೆ ► 0 Wins | ಮುನ್ನಡೆ ► 1


ಪುದುಚೇರಿ – 30 ಕ್ಷೇತ್ರಗಳು

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಆಪರೇಷನ್ ಕಮಲ ಮಾಡಿ ಸರ್ಕಾರ ಕೆಡವಿದ್ದ ಬಿಜೆಪಿಯೆ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ. 30 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಇದುವರೆಗೂ 23 ಕ್ಷೇತ್ರಗಳ ಮತ ಎಣಿಕೆ ಪ್ರಾರಂಭವಾಗಿದೆ.

BJP ಮೈತ್ರಿ ► 10 Wins | ಮುನ್ನಡೆ ► 3
ಕಾಂಗ್ರೆಸ್ ಮೈತ್ರಿ ► 4 Wins | ಮುನ್ನಡೆ ► 2
ಪಕ್ಷೇತರ ► 4 Wins | ಮುನ್ನಡೆ ► 0


ಸುದ್ದಿಯನ್ನು ಅಪ್‌ಡೇಟ್ ಮಾಡಲಾಗುತ್ತದೆ, ರೀಫ್ರೆಶ್‌ ಮಾಡಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights