ಬ್ಯಾಗ್ ನಲ್ಲಿ ಲಿಂಬೆಹಣ್ಣು, ತೆಂಗಿನ ಚಿಪ್ಪು ಇಟ್ಕೊಂಡು ಶಾಲೆಗೆ ಬಂದ ಮಕ್ಕಳು….

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಇಂಜಿನವಾರಿ ಗ್ರಾಮ ಇಂಜಿನವಾರಿ ಶಾಲೆಯಲ್ಲಿ ಮಕ್ಕಳ ಮೇಲೆ ಕಳೆದ ಒಂದುವರೆ ತಿಂಗಳಿಂದ ಕಲ್ಲು ಬೀಳುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಗೆ ಲೋಕಾಪುರದ ಪವಾಡ ಬಯಲು ಪರಿಣಿತಿದಾರ ವಿಜ್ಞಾನ ಶಿಕ್ಷಕ ರಾಜಶೇಖರ ಮುತ್ತಿನಮಠ ಭೇಟಿ ನೀಡಿದರು.

ಶಾಲಾ ಮಕ್ಕಳಿಗೆ ಪವಾಡ ಹೇಗೆ ನಡೆಯುತ್ತವೆ ಅಂತ ತೋರಿಸಿದರು. ಯಾರೋ ನಿಮ್ಮಲ್ಲಿ ರೀತಿ ಕಲ್ಲು ಬೀಳುತ್ತಿರೋ ಹಾಗೆ ಮಾಡ್ತೀರ್ತಾರೆ. ಪವಾಡ ಬಯಲು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಲ್ಲಿನ ಭಯ ಹೋಗಲಾಡಿಸಿದರು. ಮತ್ತೊಂದೆಡೆ ಶಾಲೆಗೆ ಸಿಸಿಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲಿಸಿದಾಗ ಓರ್ವ ವಿದ್ಯಾರ್ಥಿ ಬ್ಯಾಗ್ ನಲ್ಲಿ ಲಿಂಬೆಹಣ್ಣು, ಮತ್ತೊರ್ವ ವಿದ್ಯಾರ್ಥಿ ಬ್ಯಾಗ್ ನಲ್ಲಿ ತೆಂಗಿನ ಚಿಪ್ಪು ಪತ್ತೆಯಾಗಿದೆ.

ವಿದ್ಯಾರ್ಥಿಗಳ ಮೇಲೆ ಕಲ್ಲು ಬೀಳಬಾರದೆಂದು ಅಪನಂಬಿಕೆಯಿಂದ ಪಾಲಕರು ಮಕ್ಕಳ ಬ್ಯಾಗ್ ನಲ್ಲಿ ಲಿಂಬು, ತೆಂಗಿನ ಚಿಪ್ಪು ಇಟ್ಟಿದ್ದಾರೆ. ನೀವು ಇದನ್ನೇ ಭಾನಾಮತಿ ಇರಬಹುದೆಂದು ನಂಬ್ತೀರಿ ಎಂದು ಭಯ ಹೋಗಲಾಡಿಸಿದ ಪವಾಡ ಬಯಲು ಪರಿಣಿತ,  ಶಿಕ್ಷಣ ಇಲಾಖೆ ಸೂಚನೆ ಮೇರಿಗೆ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಧೈರ್ಯ ಹೇಳಿದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights