ಭಾರತದಲ್ಲಿ ಕೊರೊನಾ ಹರಡಲು ನಮಸ್ತೆ ಟ್ರಂಪ್‌ ಕಾರ್ಯಕ್ರಮವೇ ಕಾರಣವಾ? ಟ್ರಂಪ್‌ ದೇಶಕ್ಕೆ ಕೊರೊನಾ ತಂದ್ರಾ?

ರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಈ ಸೋಂಕು ದೇಶಕ್ಕೆ ವಕ್ಕರಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯೇ ಕಾರಣ ಎಂದು ಆರೋಪಗಳು ಕೇಳಿಬರುತ್ತಿವೆ.

ಫೆಬ್ರವರಿಯಲ್ಲಿ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ  ಕೊರೊನಾ ವೈರಸ್ ನ್ನು ತಂದಿಟ್ಟಿದ್ದಾರೆ ಎಂದು ಶಿವಸೇನೆ ಮತ್ತು ಉತ್ತರ ಪ್ರದೇಶದ ಸುಹೆಲ್ದೇವ್ ಪಕ್ಷ ಆರೋಪಿಸಿವೆ.

ನಮಸ್ತೆ ಟ್ರಂಪ್  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಡೊನಾಲ್ಡ್ ಟ್ರಂಪ್ ಜೊತೆಗೆ  ಅಮೆರಿಕಾದಿಂದ ಆಗಮಿಸಿದ್ದ ಸಾವಿರಾರು ಜನರನ್ನು ತಪಾಸಣೆ ಮಾಡದೆ ಒಳಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಸುಹೆಲ್ದೇವ್ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಬರ್ ಹೇಳಿದ್ದಾರೆ.

ಅಲ್ಲದೆ, ಗುಜರಾತ್​, ಮುಂಬೈ ಹಾಗೂ ದೆಹಲಿಯಲ್ಲಿ ಕೊರೋನಾ ವೈರಸ್​ ಹೆಚ್ಚಲು ನಮಸ್ತೆ ಟ್ರಂಪ್​ ಕಾರ್ಯಕ್ರಮವೇ ಕಾರಣ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಹೇಳಿದೆ. 

“ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನು ಸ್ವಾಗತ ಮಾಡಲು ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸಲಾಗಿತ್ತು. ಟ್ರಂಪ್ ಪ್ರತಿನಿಧಿಗಳು ಮುಂಬೈ, ದೆಹಲಿಗೆ ಕೂಡ ಭೇಟಿ ನೀಡಿದ್ದರು. ಇದು ಕೊರೋನಾ ವೈರಸ್​ ಹರಡಲು ಪ್ರಮುಖ ಕಾರಣ,” ಎಂದು ಶಿವಸೇನೆ ಸಂಸದ ಸಂಜಯ್​ ರಾವತ್​ ದೂರಿದ್ದಾರೆ.

ದೇಶದಲ್ಲಿ ಕೊರೋನಾವೈರಸ್ ಹರಡುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಟ್ರಂಪ್ ಗೆ ಸ್ವಾಗತ ಕೋರಲು ಹಾಗೂ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸುವತ್ತಾ ಬ್ಯುಸಿಯಾಗಿದ್ದರು  ಎಂದು ಎರಡು ಪಕ್ಷಗಳೂ ದೂರಿವೆ.

Namaste Trump Event And Interesting Facts About It

ಇದಕ್ಕೆ ಸಾಕ್ಷಿ ಎಂಬಂತೆ ಗುಜರಾತ್‌ನ ಒಟ್ಟೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಶೇ.50ಕ್ಕೂ ಹೆಚ್ಚು ಸೋಂಕಿತರು ಅಹಮದಾಬಾದ್‌ನಲ್ಲಿಯೇ ಪತ್ತೆಯಾಗಿದ್ದಾರೆ. ಅಲ್ಲದೆ, ದೇಶದಲ್ಲಿರುವ ಸೋಂಕಿತರ ಪ್ರಮಾಣದಲ್ಲಿ ಅತಿ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿಯೇ ಪತ್ತೆಯಾಗಿದ್ದು, ಅನ್ಯ ರಾಜ್ಯಗಳಲ್ಲಿ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ ಬಹುತೇರಕು ಮಹಾರಾಷ್ಟ್ರದ ನಂಟು ಹೊಂದಿದ್ದಾರೆ. ಗುಜರಾತ್‌ನ ಮೂಲಕಗಳ ಪ್ರಕಾರ ಗುಜರಾತ್‌ನಲ್ಲಿ ಸರಿಯಾದ ರೀತಿಯಲ್ಲಿ ಕೊರೊನಾ ಪರೀಕ್ಷೆ ನಡೆಸುತ್ತಿಲ್ಲ. ಬಹಳ ಕಡಿಮೆ ಪರೀಕ್ಷೆಗಳು ನಡೆದಿವೆ. ಸರಿಯಾದ ರೀತಿಯಲ್ಲಿ ಪರೀಕ್ಷೆಗಳು ನಡೆದದ್ದೇ ಆದಲ್ಲಿ, ಗುಜರಾತ್‌ನಲ್ಲಿ ಮಹಾರಾಷ್ಟ್ರಕ್ಕಿಂತಲೂ ಹೆಚ್ಚು ಸೋಂಕಿತರಿರುವ ಸಾಧ್ಯತೆ ಇದೆ ಎಂದು ಗುಜರಾತ್‌ನ ವಕೀಲರೊಬ್ಬರು ತಿಳಿದಿದ್ದಾರೆ.

ಕೇರಳದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಪತ್ತೆಯಾದ ಜನವರಿ 30 ರಿಂದಲೂ ದೇಶದಲ್ಲಿನ ಎಲ್ಲ ಅಂತಾರಾಷ್ಟ್ರೀಯ  ನಿಲ್ದಾಣಗಳನ್ನು ಮುಚ್ಚಿದ್ದರೆ ವೈರಸ್ ಹರಡುವ ಸಾಧ್ಯತೆ ಇರುತ್ತಿರಲಿಲ್ಲ, ಜನವರಿ 15ರಿಂದ ಮಾರ್ಚ್ 23ರವರೆಗೂ ಸುಮಾರು 78 ಲಕ್ಷ ಜನರು ವಿದೇಶದಿಂದ ಬಂದಿದ್ದಾರೆ ಆದರೆ, ಕೇವಲ 26 ಲಕ್ಷ ಜನರು ಮಾತ್ರ ವೈದ್ಯಕೀಯ ಪರೀಕ್ಷೆಗೊಳಗಾಗಿದ್ದಾರೆ ಎಂದು ಪಕ್ಷಗಳು ದೂರಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights