ಮಂಗಳೂರಿನಂತೆ ಕೋಲಾರದಲ್ಲಿ ಕಲ್ಲು ತೂರಾಟಕ್ಕೆ ಪ್ಲಾನ್ : ಬಯಲಾದ ಭಯಾನಕ ಸಂಚು

ಕೋಲಾರದಲ್ಲಿ ಕಲ್ಲು ತೂರಾಟ ನಡೆಸಿ ಕೋಮುಗಲಭೆ ಸೃಷ್ಟಿಸಲು ನಡೆದಿತ್ತಾ ಪ್ಲಾನ್ ? ಅನ್ನೋ ವಿಚಾರ ಪೊಲೀಸ್ ಕಾರ್ಯಚರಣೆಯ ಬಳಿಕ ಬೆಳಕಿಗೆ ಬಂದಿದೆ.

ಹೌದು… ಮಂಗಳೂರು ರೀತಿ ಕೋಲಾರದಲ್ಲಿ ಕಲ್ಲು ತೂರಲು ಯತ್ನಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  ಕೋಲಾರದಲ್ಲಿ ಕೋಮು ಗಲಭೆಗೆ ಜಲ್ಲಿ ಕಲ್ಲು ಶೇಖರಿಸಿಟ್ಟಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಕೋಲಾರ ನಗರಠಾಣೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಬಳಿಕ ಈ ಸತ್ಯ ಬೆಳಕಿಗೆ ಬಂದಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವ ಸಭೆಯ ದಿನ ಕಲ್ಲು ತೂರಾಟ ನಡೆಸಲು ಕೋಲಾರ ನಗರದ ಶಫೀದ್ ಮತ್ತು ಜಾವಿದ್ ಬಂಧಿತ ದುಷ್ಕರ್ಮಿಗಳಿಂದ ಕಲ್ಲು ಶೇಖರಣೆ ಮಾಡಲಾಗಿತ್ತು.

ಕೋಲಾರದಲ್ಲಿ ಜ.4 ರಂದು ಬಿಜೆಪಿ, ಭಾರತೀಯ ಹಿತರಕ್ಷಣಾ ವೇದಿಕೆ ಸಿಎಎ ಜಾಗೃತಿ ಸಭೆ ಹಮ್ಮಿಕೊಂಡಿತ್ತು. ಇದೇ ವೇಳೆ ಕಲ್ಲು ತೂರಾಟ ನಡೆಸಿ ಕೋಮು ಗಲಭೆ ಎಬ್ಬಿಸಲು ಸಂಚು ರೂಪಿಸಲಾಗಿತ್ತು. ಜ.3 ರಂದು ರೈಲ್ವೆ ಹಳಿಗಳ ಬಳಿ ಐವರು ಚೀಲಗಳಲ್ಲಿ ಶೇಖರಣೆ ಮಾಡಿ ಗಾಡಿಗಳಿಗೆ ತುಂಬಿಸುತ್ತಿದ್ದರು. ಬಂಧಿತರಿಂದ ಪಲ್ಸರ್ ಗಾಡಿ, ಗೋಣಿ ಚೀಲಗಳು ವಶಕ್ಕೆ ಪಡೆಯಲಾಗಿದೆ.

ಪರಾರಿಯಾಗಿರುವ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕ್ಲಾಕ್ ಟವರ್ ಪ್ರದೇಶಕ್ಕೆ ಬಿಜೆಪಿ ಬೆಂಬಲಿಗರು ಅಂದು ನುಗ್ಗಲು ಯತ್ನಿಸಿದಾಗ ಲಾಠಿ ಚಾರ್ಜ್ ಆಗಿತ್ತು.  ಕೋಲಾರ ಸಂಸದ ಮುನಿಸ್ವಾಮಿ ಸೇರಿ 18 ಮಂದಿ ವಿರುದ್ದ ಪ್ರಕರಣ ಕೂಡಾ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights