ಮಂಡ್ಯದಲ್ಲಿ ಬೀದಿ ನಾಯಿ‌ ಹಾವಳಿ ನಿಯಂತ್ರಣಕ್ಕೆ ಜನರ ಹೊಸ ಪ್ರಯೋಗ…..

ಮಂಡ್ಯ ನಗರದ ಕ್ರಿಶ್ಚಿಯನ್ ಕಾಲೋನಿ, ಸುಭಾಷ್ ನಗರ,ಪೊಲೀಸ್ ಕ್ವಾಟರ್ಸ್, ಮತ್ತು ಗಾಂಧಿನಗರದ ಹಲವು ಬಡಾವಣೆಯಲ್ಲಿ ನೀಲಿ ನೀರಿನ ಬಾಟಲ್ ವೈಚಿತ್ರ ಕಾಣುತ್ತಿದೆ.

ಮಂಡ್ಯದಲ್ಲಿ ಬೀದಿ ನಾಯಿ‌ ಹಾವಳಿ ನಿಯಂತ್ರಣಕ್ಕೆ ಜನರ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಜನರ ಈ ಹೊಸ ಪ್ರಯೋಗಕ್ಕೆ ಮನೆಯ ಬಳಿ ಸುಳಿಯುತ್ತಿಲ್ಲವಂತೆ ಶ್ವಾನಗಳು. ಅಂಥ ಪ್ರಯೋಗ ಏನಪ್ಪ ಅಂತೀರಾ..? ಅದಕ್ಕುತ್ತರು ಇಲ್ಲಿದೆ ನೋಡಿ.

ಅಚ್ಚರಿಯಾದ್ರು ಇದು ಸತ್ಯ, ನಂಬಲೇಬೇಕು ಈ ಮಿಥ್ಯ. ಆ ಬೀದಿಯ ಪ್ರತಿ ಮನೆಯ ಮುಂದೆ ರಾರಾಜಿಸ್ತಿವರ ನೀಲಿ ನೀರು ತುಂಬಿದ ಬಾಟಲಿಗಳು. ಅರೇ ನಾಯಿಗೂ ನೀಲಿ ಬಾಟಲಲ್ ಗೂ ಏನ್ ಸಂಬಂಧ ಅಂದ್ರಾ..?

ನೀಲಿ ನೀರು ತುಂಬಿದ ಬಾಟಲಿ ಇರೋ ಮನೆಯಿಂದ ಶ್ವಾನಗಳು ದೂರ ಹೋಗ್ತಿವೆಯಂತೆ. ಈ ಹೊಸ ಪ್ರಯೋಗದಿಂದ ಆ ಮಂಡ್ಯ ನಗರದ ಆ ಬೀದಿಯಲೆಲ್ಲ ನೀಲಿ ಬಾಟಲಿಗಳು ರಾರಾಜಿಸ್ತಿವಿ. ನಾಯಿಯ ಕಣ್ಣು ನೀಲಿಯಾಗಿರೋ ಕಾರಣಕ್ಕೆ ನೀಲಿ ಬಣ್ಣದ ಬಾಟಲ್ ಕಂಡ್ರೆ ಹೆದರಿ ದೂರ ಹೋಗ್ತಿವೆ ಅಂತಿದ್ದಾರೆ ಸಾರ್ವಜನಿಕರು.

ರಾತ್ರಿಯ ವೇಳೆಯಲ್ಲಿ ಈ ನೀಲಿ ನೀರಿನ ಬಾಟಲ್ ಇರೋ ಮನೆಯಿಂದ ದೂರ ಉಳಿಯುತ್ತಿವೆಯಂತೆ ಶ್ವಾನಗಳು. ಜನರ ಈ ಹೊಸ ಪ್ರಯೋಗ ಬಾಯಿಂದ ಬಾಯಿಗೆ ಹಬ್ಬಿ ಇಡೀ ಕಾಲೋನಿಯ ಮನೆ ಮುಂದೆ ಈ ನೀಲಿ ನೀರು ತುಂಬಿದ ಬಾಟಲಿಗಳು ಕಾಣ ಬರ್ತಿವೆ.

ವಿಶೇಷ ಅಂದ್ರೆ ನಗರಸಭೆ ಪರಿಸರ ಮನೆಯಲ್ಲೂ ನಾಯಿ ನಿಯಂತ್ರಣಕ್ಕೆ ಇದೇ ಪ್ರಯೋಗ ಮಾಡಲಾಗಿದೆ. ಬಡಾವಣೆ ನಿವಾಸಿಗಳು ಈ ಹೊಸ ಪ್ರಯೋಗ ವರ್ಕೌಟ್ ಆಗ್ತಿದೆ ಅಂತಿದ್ದಾರೆ.

ಪೊಲೀಸರ ಮನೆಯ ಮುಂದೆಯೋ ನಾಯಿ ಹಾವಳಿಗೆ ಇದೇ ತಂತ್ರಗಾರಿಕೆ ಬಳಕೆ ಮಾಡಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights