ಮಕ್ಕಳು ಕಾಲೇಜ್ ಹೋಗಿದ್ದಾರೆ ಅನ್ನೋ ಪಾಲಕರು ಇಲ್ಲೊಮ್ಮೆ ನೋಡಿ…!

ಮಕ್ಕಳು ಕಾಲೇಜ್ ಹೋಗಿದ್ದಾರೆ ಅನ್ನೋ ಪಾಲಕರು ಇಲ್ಲೊಮ್ಮೆ ನೋಡಿ. ಯಾಕೆಂದ್ರೆ ಕೆಲ ಮಕ್ಕಳು ಕಾಲೇಜ್ ಗೆ ಚಕ್ಕರ್ ಹಾಕಿ ಪ್ರೇಯಸಿಯೊಂದಿಗೆ ಪಾರ್ಕ್, ಹೋಟೆಲ್, ಟ್ರಿಪ್ ಅಂತ ಸುತ್ತಾಡ್ತಿದ್ರು ಇರಬಹುದು.

ಎಲ್ಲಾ ತಂದೆ-ತಾಯಿ ನಮ್ಮ ಮಕ್ಕಳು ತಪ್ಪು ಮಾಡೋದಿಲ್ಲ. ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ ಅಂತಲೇ ಅವರನ್ನ ಕಾಲೇಜಿಗೆ ಕಳುಹಿಸಿಕೊಡ್ತಾರೆ. ಆದರೆ ಕೆಲ ಪಾಲಕರಿಗೇನು ಗೊತ್ತಿರುತ್ತೆ ತಮ್ಮ ಮಕ್ಕಳು ತಮಗೆ ಮೋಸ ಮಾಡೋದಿರಲಿ ಮಟಮಟಮಧ್ಯಾನವೇ ಮೈ ಮರಿತು ಪ್ರೇಯಸಿ ಜೊತೆಗೆ ತಿಪ್ ಮಾಡಿಕೊಂಡು ಕುಳಿತಿರುತ್ತಾರೆ ಅಂತ.

ಹೌದು.. ದಾವಣಗೆರೆಯಲ್ಲೊಂದು ಇಂಥದ್ದೇ ಘಟನೆ ನಡೆದಿದೆ.  ಮಟಮಟ ಮಧ್ಯಾಹ್ನವೇ ವಿದ್ಯಾರ್ಥಿಗಳು ಲಿಪ್ ಲಾಕ್ ಮಾಡಿದ ದೃಶ್ಯ ಕಂಡುಬಂದಿದೆ. ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಪಿಯುಸಿ ಓದುವ ವಿದ್ಯಾರ್ಥಿಗಳಿಬ್ಬರು ಯಾರ ಭಯವಿಲ್ಲದೆ ಲಿಪ್ ಲಾಕ್ ಮಾಡಿ ಚೆಲ್ಲಾಟವಾಡುತ್ತಿದ್ದಾರೆ.

ಅಲ್ಲದೇ ವಿದ್ಯಾರ್ಥಿಗಳು ಕಾಲೇಜಿನ ಸಮವಸ್ತ್ರದಲ್ಲೇ ಕುಳಿತು ಲಿಪ್ ಲಾಕ್ ಮಾಡಿದ್ದಾರೆ. ಸದ್ಯ ವಿದ್ಯಾರ್ಥಿಗಳಿಬ್ಬರ ಲಿಪ್ ಲಾಕ್ ಮಾಡುವ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋ ನೋಡಿದ ಸಾರ್ವಜನಿಕರು ವಿದ್ಯಾರ್ಥಿಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೆಲ್ಲ ತಡೆಗಟ್ಟಬೇಕಾದ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ನಡುವೆ ದಾವಣಗೆರೆಯ ಹಲವು ಪಾರ್ಕ್ ಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights