ಮದ್ಯ ಸಿಗದೇ ಮಾನಸಿಕ ಖಿನ್ನತೆಗೊಳಗಾಗಿ ರಾಜ್ಯದಲ್ಲಿ ಓರ್ವ ಸಾವು, ಮತ್ತೋರ್ವ ಆತ್ಮಹತ್ಯೆ..!
ಕೊರೊನಾ ಸೋಂಕು ಹರಡುವ ಭೀತಿಯಿಂದ ರಾಜ್ಯದಲ್ಲೆಡೆ ಲಾಕ್ ಡೌನ್ ಮಾಡಲಾಗಿದೆ. ಇದರಿಂದಾಗಿ ಮದ್ಯದಂಗಡಿಗಳು ಬಂದ್ ಆಘಿವೆ. ರಾಜ್ಯದಲ್ಲಿ ಮದ್ಯ ಸಿಗದೆ ದಾವಣೆಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಹೌದು… ಮದ್ಯ ಸಿಗದೆ ಮಾನಸಿಕ ಕಿನ್ನತೆಗೆ ಒಳಗಾಗಿದ್ದ ಬಳ್ಳಾರಿಯ ಸಿರುಗುಪ್ಪ ತಾಲೂಕು ತೆಕ್ಕಲಕೋಟೆಯ ನಿವಾಸಿ ಶಶಿಧರ ನಗರದ ಕಮಕ ದುರ್ಗಮ್ಮ ದೇವಸ್ಥಾನದ ಬಳಿ ಸಾವನ್ನಪ್ಪಿದ್ದಾನೆ. ಕೊರೊನಾ ಹರಡುವ ಭೀತಿಯಲ್ಲಿ ಎಲ್ಲೆಡೆ ಮದ್ಯ ಮಾರಾಟ ಬಂದ್ ಸ್ಥಗಿತಗೊಳಿಸಲಾಗಿದೆ. ಈ ಕಾರಣಕ್ಕೆ ಮದ್ಯ ಸಿಗದೇ ಊಟ ಬಿಟ್ಟು ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.

ಇನ್ನೂ ದಾವಣಗೆರೆಯ ವ್ಯಕ್ತಿ ಓರ್ವ ಮದ್ಯ ಸಿಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. ನಗರದ ಭರತ್ ಕಾಲೋನಿಯ ನಿವಾಸಿ ಮೆಕಾನಿಕ್ ಕೆಲಸ ಮಾಡುತ್ತಿದ್ದ 43 ವರ್ಷದ ರವಿಚಂದ್ರ ಎಂಬಾತ ನೇಣಿಗೆ ಶರಣಾಗಿದ್ದಾನೆ, ಕಳೆದ 10 ದಿನಗಳಿಂದ ಪರದಾಡುತ್ತಿದ್ದ ರವಿ ಪ್ರತಿ ನಿತ್ಯ ಮದ್ಯ ಸೇವನೆ ಮಾಡಿಯೇ ಮನೆಗೆ ಬರುತ್ತಿದ್ದ.

ಒಂದು ದಿನ ಮದ್ಯ ಸಿಗದೇ ಹೋದಲ್ಲಿ ಹುಚ್ಚನಂತೆ ವರ್ತಿಸುತ್ತಿದ್ದನು.ಇಂದು ಬೆಳಿಗ್ಗೆ ಎಲ್ಲಾ ಕಡೆಗೆ ಓಡಾಡಿದ್ದಾನೆ ಆದರೂ ಮದ್ಯ ಸಿಗದ ಹಿನ್ನಲೆಯಲ್ಲಿ ನಿರ್ಜನ ಪ್ರದೇಶಕ್ಕೆ ಹೋಗಿ ನೇಣು ಬಿಗಿದುಕೋಮಡು ಪ್ರಾಣ ಬಿಟ್ಟಿದ್ದಾನೆ. ಈತನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, 12 ವರ್ಷದ ಗಂಡು ಮಗ ಇದ್ದಾನೆ. ಈಗ ಕುಟುಂಬದವರು ಬೀದಿಗೆ ಬಂದಿದ್ದಾರೆ.

