ಮದ್ಯ ಸಿಗುವುದಾಗಿ ನಂಬಿ ಫೂಲಾದ ವ್ಯಸನಿಗಳು : ತಮಾಷೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ..!

ದೇಶದ್ಯಾಂತ ಕೊರೊನಾದಿಂದಾಗಿ ಜನ ಬೆಚ್ಚಿ ಬಿದ್ದಿದ್ದಾರೆ. ಲಾಕ್ ಡೌನ್ ನಿಂದಾಗಿ ಯಾವ ವಸ್ತುಗಳು ಖರೀದಿಗೆ ಸಿಗುತ್ತಿಲ್ಲ. ಇದರಿಂದ ಮದ್ಯ ವ್ಯಸನಿಗಳು ಕೇರಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಇದೆ. ಹೀಗಿರುವಾಗ ಇದೇ ಸಂದರ್ಭವನ್ನು ಬಳಸಿಕೊಂಡ ಕೆಲ ಪುಂಡರು ಸಾಮಾಜಿಕ ಜಾಲತಾಣದಲ್ಲಿ ಇಂದು ಮದ್ಯ ಸಿಗುವುದಾಗಿ ಸಂದೇಶ ರವಾನಿಸಿದ್ದಾರೆ. ಇದನ್ನೇ ನಂಬಿದ ಜನ ಬೀದಿಗಿಳಿದು ಮದ್ಯ ಖರೀದಿಗೆ ಮುಂದಾಗಿದ್ದಾರೆ.

ಹೌದು….  ಏಪ್ರಿಲ್ 1 ರಂದು ಮದ್ಯದಂಗಡಿ ಓಪನ್ ಮಾಡಲಾಗುತ್ತದೆ ಎನ್ನುವ ಸಂದೇಶವನ್ನು ನಂಬಿದ ಜನ ಫೂಲ್ ಆದ ಘಟನೆ ಗದಗದಲ್ಲಿ ನಡೆದಿದೆ. ಏಪ್ರಿಲ್ 1 ರಿಂದ ಎಂಎಸ್‍ಐಎಲ್ ಓಪನ್ ಆಗುತ್ತೆ ಎನ್ನುವ ವದಂತಿಯನ್ನು ನಂಬಿ ನೂರಾರು ಜನ ಮದ್ಯವ್ಯಸನಿಗಳು ಬೆಳ್ಳಂಬೆಳಿಗ್ಗೆ ಎದ್ದು ಅಂಗಡಿ ಮುಂದೆ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಇದರಲ್ಲಿ ಓರ್ವ ಮಹಿಳೆ ಕೂಡ ಕೂಡ ಮದ್ಯ ಖರೀದಿಗೆ ನಿಂತಿದ್ದಳು.

ನೂರಾರು ಜನ ಒಟ್ಟಿಗೆ ಇರುವುದನ್ನ ಗಮನಿಸಿದ ಸ್ಥಳೀಯ ಪೊಲೀಸರು ಆಗಮಿಸುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತ ಜನ ಬಳಿಕ ತಾವು ಫೂಲ್ ಆಗಿದ್ದೇವೆಂದು ತಿಳಿದಿದ್ದಾರೆ. ಈ ಮದ್ಯ ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಇನ್ನೂ 14 ದಿನ ಇದ್ದು, ಈ ಮಧ್ಯೆ ರಸ್ತೆಗಿಳಿಯುವವರಿಗೆ ಡಿಜಿಪಿ ಪ್ರವೀಣ್ ಸೂದ್ ಖಡಕ್ ಎಚ್ಚರಿಕೆ ನಿಡಿದ್ದಾರೆ.

ಇದು ಏಪ್ರಿಲ್ ಫೂಲ್ ಅಲ್ಲ. ದ್ವಿ-ಚಕ್ರ ವಾಹನ, ಕಾರು ಮುಂತಾದ ವಾಹನಗಳು ಏಪ್ರಿಲ್ 14ರವರೆಗೆ ರಸ್ತೆಗೆ ಇಳಿಯುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ನೀವು ಆದೇಶವನ್ನು ಉಲ್ಲಂಘಿಸಿದರೆ ನಿಮ್ಮ ವಾಹನಗಳನ್ನು ಸೀಜ್ ಮಾಡುವುದು ಗ್ಯಾರಂಟಿ ಎಂದು ಟ್ವೀಟ್ ಮಾಡುವ ಮೂಲಕ ಸೂಚನೆ ನೀಡಿದ್ದಾರೆ.

https://twitter.com/Copsview/status/1245203086307520512

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights