ಮರಾಠಿ ಭಾಷೆಗೆ ರಿ-ಮೇಕ್‌ ಆಗುತ್ತಿದೆ ಕನ್ನಡದ ರಾಮಾ ರಾಮಾ ರೇ

 ಸತ್ಯ ಪ್ರಕಾಶ್ ನಿರ್ದೇಶನದ ಜನಪ್ರಿಯ ಸಿನಿಮಾ ರಾಮಾ ರಾಮಾ ರೇ ತೆಲುಗು ಸೇರಿದಂತೆ ಬೇರೆ ಭಾಷೆಗಳಿಗೆ ರೀಮೇಕ್ ಆಗಿತ್ತು. ತನ್ನ ರಿಮೇಕಿಂಗ್‌ ಯಾನವನ್ನ ಮುಂದುರೆಸಿರುವ ಸಿನಿಮಾ ಮರಾಠಿ ಭಾಷೆಯಲ್ಲೂ ರೀಮೇಕ್ ಆಗಲು ಸಜ್ಜಾಗಿದೆ.

ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ “ಸತ್ಯ ಪಿಕ್ಚರ್ಸ್” Youtube ಚಾನಲ್ ನಲ್ಲಿ ಪ್ರದರ್ಶನಗೊಂಡಿದ್ದ ರಾಮಾ ರಾಮಾ ರೇ ಚಿತ್ರಕ್ಕೆ ಒಂದು ತಿಂಗಳಲ್ಲೇ 10 ಲಕ್ಷಕ್ಕೂ ಹೆಚ್ಚು ಮಂದಿ (1 ಮಿಲಿಯನ್) ವೀಕ್ಷಿಸಿದ್ದು ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ.

ಜನ ಮೆಚ್ಚುಗೆಗೆ ಪಾತ್ರವಾಗಿರುವ ಸಿನಿಮಾವನ್ನು ಮರಾಠಿ ಸಿನಿಮಾ ನಿರ್ಮಾಣ ಸಂಸ್ಥೆಯೊಂದು  ಮರಾಠಿ ಭಾಷೆಯಲ್ಲಿ ರಿಮೇಕ್ ಮಾಡಲು ಮುಂದಾಗಿದೆ. “ಸತ್ಯ ಪಿಕ್ಚರ್ಸ್” ಸಹಯೋಗದೊಂದಿಗೆ ಚಿತ್ರ ನಿರ್ಮಾಣ ಕಾರ್ಯವು ಪ್ರಾರಂಭವಾಗಲಿದೆ.

ಲಾಕ್ ಡೌನ್ ಮುಗಿದ ನಂತರ ಮುಂದಿನ ಕೆಲಸಗಳು ಶುರುವಾಗಲಿದೆ ಎಂದು ಚಿತ್ರ ನಿರ್ದೇಶಕ ಸತ್ಯಪ್ರಕಾಶ್ ಹೇಳಿದ್ದಾರೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ ಈ ಚಿತ್ರದ ರಿಮೇಕ್‌ ಹಕ್ಕುಗಳನ್ನು ಪಡೆದುಕೊಂಡು, ತೆಲುಗಿನಲ್ಲಿ ‘ಆಟಗಾಧಾರ ಶಿವ’ ಹೆಸರಿನಲ್ಲಿ ನಿರ್ಮಾಣ ಮಾಡಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights