ಮಹಾರಾಷ್ಟ್ರ ಸರಕಾರ ರಚನೆಗೆ ಸುಪ್ರಿಂ ಆದೇಶ : ಮೋದಿ, ರಾಜ್ಯಪಾಲರಿಗೆ ಆಗಿರುವ ಕಪಾಳ ಮೋಕ್ಷ – ದಿನೇಶ್ ಗುಂಡೂರಾವ್

ಬೆಳಗಾವಿ‌ ಜಿಲ್ಲೆಯ ಅಥಣಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಹಾರಾಷ್ಟ್ರ ಸರಕಾರ ರಚನೆ ಸಂಬಂಧ ಸುಪ್ರಿಂಕೋರ್ಟ್ ಕೊಟ್ಟ ಆದೇಶ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ ಇದು ಪ್ರಧಾನಿ ಮೋದಿ ಮತ್ತು ಮಹಾರಾಷ್ಟ್ರ ರಾಜ್ಯಪಾಲರಿಗೆ ಆಗಿರುವ ಕಪಾಳ ಮೋಕ್ಷ ಎಂದಿದ್ದಾರೆ. ರಾತ್ರೋರಾತ್ರಿ ಸರಕಾರ ಮಾಡಲು ಅಂತಹ ಅರ್ಜೆಂಟ್ ಏನಿತ್ತು. ಇದರಿಂದ ಬಿಜೆಪಿಗೆ ನೈತಿಕತೆ ಇಲ್ಲ ಅಂತ ಜನರಿಗೆ ಅರ್ಥ ಆಗಿದೆ.

ಮಹಾರಾಷ್ಟ್ರದಂತೆ ಕರ್ನಾಟದಲ್ಲಿಯೂ ಬಿಜೆಪಿ ಸರಕಾರ ಮಾಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬೆಂಬಲ ಕೊಟ್ಟರೆ ಶಾಸಕರಿಗೆ ನೂರು ಕೋಟಿ ಕೊಡುತ್ತಿದ್ದಾರಂತೆ. ಅದನ್ನು ನೋಡಿ ನಮ್ಮ ರಾಜ್ಯದ ಅನರ್ಹ ಶಾಸಕರು ನಮಗೂ ಅಷ್ಟೆ ಕೊಡಿ ಅಂತ ದುಂಬಾಲು ಬಿದಿದ್ದಾರಂತೆ. ಕೇವಕ ರೂ. 20 ಕೋ. ಅಷ್ಟೇ ಕೊಟ್ಟಿದೀರಿ ನಮಗೂ ನೂರು ಕೋಟಿ ಬೇಕು ಅಂತಿದ್ದಾರಂತೆ. ಸ್ಪೀಕರ್, ಕೋರ್ಟ್ ಇವರನ್ನೆಲ್ಲ ಈಗಾಗಲೇ ಅನರ್ಹ ಮಾಡಿ ಆಗಿದೆ. ಈಗ ಜನತಾ ನ್ಯಾಯಾಲಯದಲ್ಲಿಯೂ ಇವರನ್ನು ಅನರ್ಹ ಮಾಡಬೇಕಿದೆ.

ಮಂಡ್ಯದಲ್ಲಿ ಎಷ್ಟು ಕೋಟಿ ಹಣ ಖರ್ಚಾಯಿತು ಗೊತ್ತಾ? ಅದು ದೇವರಿಗನೇ ಗೊತ್ತು ಆದರೆ ಜನ ಅಲ್ಲಿ ಬೇರೆಯೇ ಮಾಡಿದ್ರು. ಎಷ್ಟೇ ಹಣ ಕೊಟ್ಟರು ಜನರ ನಿರ್ಣಯದ ಮುಂದೆ ಯಾವುದೂ ನಡೆಯುವುದಿಲ್ಲ. ಬಿಜೆಪಿಯವರಿಗೆ ಹಣದ ಅಹಂ ಬಂದು ಬಿಟ್ಟಿದೆ. ಚುನಾವಣೆ ಗೆಲ್ಲುವುದಿಲ್ಲ ಅಂತಾ ಗೊತ್ತಾಗಿ ಅರವಿಂದ ಲಿಂಬಾವಳಿ ಇನ್ನಷ್ಟು ಶಾಸಕರನ್ನು ಕರೆ ತರುತ್ತೇವೆ ಅಂತಿದಾರೆ.

ಈಗ ವಿಧಾನಸೌಧ ಖಾಲಿ ಬಿದ್ದಿದೆ. ಸರಕಾರ ಸತ್ತು‌ ಹೋಗಿದೆ. ಮೂರು ತಿಂಗಳನಿಂದ ಯಾರೂ ಕೆಲಸವನ್ನೆ ಮಾಡುತ್ತಿಲ್ಲ. ಸಿಎಂ ಯಡಿಯೂರಪ್ಪ ಯಾರ ಯಾರದೋ‌ ಋಣದಲ್ಲಿ ಇರೋದಾಗಿ ಹೇಳ್ತಾರೆ. ಇದು ಸರಿಯಲ್ಲ. ಒಂದು ರಾಜ್ಯದ ಸಿಎಂ ತನ್ನ ಪ್ರಜೆಗಳ ಋಣದಲ್ಲಿ ಇರಬೇಕು ಎಂದರು.

ಅನರ್ಹರು ಪಕ್ಷ ಬಿಟ್ಟಿದ್ದು ತಾಯಿ ದ್ರೋಹಕ್ಕಿಂತ ದೊಡ್ಡ ನೀಚ ಕೆಲಸ :-

ಅನರ್ಹರು ಪಕ್ಷ ಬಿಟ್ಟು ಹೋಗಿ ತಾಯಿ ದ್ರೋಹಕ್ಕಿಂತ ದೊಡ್ಡ ನೀಚ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೇಳಿದ್ದಾರೆ.

ಅಥಣಿಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅನರ್ಹರು ಪಕ್ಷ ಬಿಟ್ಟು ಹೋಗಿ ತಾಯಿ ದ್ರೋಹಕ್ಕಿಂತ ದೊಡ್ಡ ನೀಚ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ.

ಧರ್ಮ, ದೇವರು, ರಾಷ್ಟ್ರೀಯತೆ ಬಗ್ಗೆ ಮಾತನಾಡುವುದರಲ್ಲಿ ಬಿಜೆಪಿಯದು ಎತ್ತಿದ ಕೈ. ಬಿಜೆಪಿಯಲ್ಲಿ ಇಲ್ಲದೇ ಹೋದ್ರೆ ದೇಶದ್ರೋಹಿ ಅಂತಾ ಪ್ರಚಾರ ಮಾಡುತ್ತಾರೆ. ಆದರೆ, ಬಿಜೆಪಿ ವಿಚಾರಗಳು ಕೇವಲ ಮಾತಿಗಾಗಿ ಮಾತ್ರ ಇವೆ ಎಂದು ವಾಗ್ದಾಳಿ ಮಾಡಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights