ಮೂರು ಕರುಗಳಿಗೆ ಜನ್ಮ ನೀಡಿದ ಹಸು : ರಾಮ, ಲಕ್ಷ್ಮಣ, ಸೀತೆ ಎಂದು ಹೆಸರಿಟ್ಟ ರೈತ

ದೇಸಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನಂದಿಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಂಗಪ್ಪ ಎಂಬುವರ ದೇಸಿ ತಳಿಯ ಹಸುವಿಗೆ ಲಕ್ಷ್ಮಿ ಎಂದು ಹೆಸರಿಟ್ಟಿದ್ರು. ನಿನ್ನೆ ಕರು ಹಾಕಿದ ಲಕ್ಷ್ಮಿ ಎರಡು ಗಂಡು, ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಆದ್ದರಿಂದ ರಂಗಪ್ಪ ಕರುಗಳಿಗೆ ರಾಮ, ಲಕ್ಷ್ಮಣ, ಸೀತೆ ಎಂದು ಹೆಸರಿಟ್ಟಿದ್ದಾರೆ.

ಸಾಮಾನ್ಯವಾಗಿ ಹಸು ಒಂದೇ ಕರು ಹಾಕೋದು. ತೀರಾ ಅಪರೂಪ ಎಂಬಂತೆ ಎರಡು ಕರು ಹಾಕಬಹುದು. ಆದ್ರೆ, ಮೂರು ಕರುಗಳನ್ನ ಹಾಕೋದು ತುಂಬಾ ವಿರಳ. ಆದ್ದರಿಂದ ರಂಗಪ್ಪ ಹಸು ಹಾಗೂ ಕರುಗಳಿಗೆ ಪೂಜೆ ಮಾಡಿ ಮನೆಗೆ ಲಕ್ಷ್ಮಿ ಬಂದಂತೆ ಎಂದು ಭಾವಿಸಿದ್ದಾರೆ. ಹಸುವೊಂದು ಮೂರು ಕರು ಹಾಕಿದೆ ಎಂಬ ವಿಷಯ ಹರಡುತ್ತಿದ್ದಂತೆ ಅಕ್ಕಪಕ್ಕದ ಊರಿನವರು ಬಂದು ಕರುಗಳನ್ನ ನೋಡಿ ಹೋಗ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights