ಮೈತ್ರಿ ಸರ್ಕಾರ ಇದ್ದಿದ್ದರೆ ತಬ್ಲಿಘಿಗಳ ಜೊತೆ ಕರ್ನಾಟಕ ತಬ್ಬಲಿ ಆಗ್ತಾಯಿತ್ತು- ಹೆಚ್ ವಿಶ್ವನಾಥ್

ಮೈತ್ರಿ ಸರ್ಕಾರ ಇದ್ದಿದ್ದರೆ ತಬ್ಲಿಘಿಗಳ ಜೊತೆ ಕರ್ನಾಟಕ ತಬ್ಬಲಿ ಆಗ್ತಾಯಿತ್ತು ಎಂದು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಮಾಜಿ ಸಚಿವ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಮಾಜಿ ಸಚಿವ ಜಮೀರ್ ಅಹಮದ್ ಅವರನ್ನು ಕಾಂಗ್ರೆಸ್ ಪಕ್ಷವೇ ಹೊರ ಹಾಕಬೇಕು. ಇವತ್ತಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಇದ್ದಿದ್ದರೆ ಕರ್ನಾಟಕ ಮತ್ತೊಂದು ಅಮೆರಿಕಾ ಆಗುತ್ತಿತ್ತು. ಸಾಲು ಸಾಲು ಸಾವುಗಳು ಆಗುತ್ತಿದ್ದವು. ಕುಮಾರಸ್ವಾಮಿ, ಸಿದ್ದರಾಮಯ್ಯ ಟ್ರಂಪ್‍ಗಳಾಗುತ್ತಿದ್ದರು. ತಬ್ಲಿಘಿಗಳ ಪರವಾಗಿ ಇವರೆಲ್ಲ ನಿಂತು ಕರ್ನಾಟಕವನ್ನು ತಬ್ಬಲಿ ಮಾಡುತ್ತಿದ್ದರು. ಕರ್ನಾಟಕದಲ್ಲಿ ಮುಸ್ಲಿಮರ ಓಲೈಕೆಗೆ ನಿಂತು ಇಡೀ ರಾಜ್ಯದಲ್ಲಿ ಸೋಂಕು ತಾಂಡವಾಡುವಂತೆ ಮಾಡುತ್ತಿದ್ದರು ಎಂದು ಆರೋಪಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಜಮೀರ್ ಸಹ ಮಂತ್ರಿಯಾಗಿರುತ್ತಿದ್ದರು. ಅವರನ್ನು ತಡೆಯಲು ಆಗುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿದ್ದವರೆಲ್ಲ ಉಡಾಫೆ ಜನ. ಸಿದ್ದರಾಮಯ್ಯ ಕೊರೊನಾ ಅಂದರೆ ನಂಗೇ ಗೊತ್ತಿಲ್ವಾ ಅಂತಿದ್ರು. ಇನ್ನು ಕುಮಾರಸ್ವಾಮಿಯವರು ಬ್ರದರ್ ಕೊರೊನಾ ಮೊನ್ನೆ ಸಿಕ್ಕಿದ್ರು ನಡೆಯಿರಿ ಅನ್ನೋರು ಎಂದು ಸಿದ್ದರಾಮಯ್ಯ, ಕುಮಾರಸ್ವಾಮಿ ಶೈಲಿಯಲ್ಲೇ ಎಚ್.ವಿಶ್ವನಾಥ್ ಹೇಳಿದ್ದಾರೆ.

ಮಹಾಮಾರಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯ ಅವಧಿಯಲ್ಲಿ 50 ಮಂದಿ ಸಾವನ್ನಪ್ಪಿದ್ದು, ದೇಶದ ವಿವಿಧ ಭಾಗಗಳಲ್ಲಿ 1545 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 19,984ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾಗಿರುವ ಮಹಾರಾಷ್ಟ್ರದಲ್ಲಿ ಮಂಗಳವಾರ ಒಂದೇ ದಿನ 552 ಹೊಸ ಪ್ರಕರಣಗಳು ದೃಢಪಟ್ಟಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 5218ಕ್ಕೆ ಏರಿಕೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights