ಫ್ಯಾಕ್ಟ್‌ಚೆಕ್ : ಶ್ರೀರಾಮನ ಚಿತ್ರಕ್ಕೆ ಮೊಟ್ಟೆ ಎಸೆದದ್ದು ಮುಸ್ಲಿಂ ಮಹಿಳೆಯಲ್ಲ! ಮತ್ತ್ಯಾರು?

ಮುಸ್ಲಿಂ ಮಹಿಳೆಯೊಬ್ಬರು ಬ್ಯಾನರ್‌ವೊಂದರಲ್ಲಿ ಇದ್ದ ಶ್ರೀರಾಮನ ಚಿತ್ರದ ಮೇಲೆ ಮೊಟ್ಟೆ ಎಸೆಯುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗತ್ತಿದೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ (ಔರಂಗಾಬಾದ್) ಈ ಘಟನೆ ನಡೆದಿದೆ. ದರ್ಗಾ ರಸ್ತೆಯ ಮಧ್ಯದ ಚೌಕವೊಂದರಲ್ಲಿ ಹಾಕಲಾಗಿರುವ ಶ್ರೀರಾಮನ ಬ್ಯಾನರ್ ಬಳಿಗೆ ತೆರಳುವ ಮಹಿಳೆ ಮೊಟ್ಟೆ ಎಸೆದು ವಾಪಸಾಗುತ್ತಾಳೆ. ಈ ವಿಡಿಯೊವನ್ನು ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಬಳಕೆದಾರರು, ‘ಈ ಮುಸ್ಲಿಂ ಮಹಿಳೆಗೆ ಶ್ರೀರಾಮನನ್ನು ಕಂಡರೆ ಏಕಿಷ್ಟು ಕೋಪ? ಇಷ್ಟೊಂದು ವಿಷ ತುಂಬಿಕೊಂಡಿದ್ದಾದರೂ ಹೇಗೆ’? ಎಂದು ಬರೆದುಕೊಂಡಿದ್ದಾರೆ. ಇದೇ ಪ್ರತಿಪಾದನೆಯೊಂದಿಗೆ ಹಲವರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಪ್ರಕಟಣೆಯನ್ನು ಆಲ್ಟ್ ನ್ಯೂಸ್ ಪ್ದೆರಕಟಿಸಿದೆ. ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯನ್ನು 38 ವರ್ಷದ ಶಿಲ್ಪಾ ರಾಮರಾವ್ ಗರುಡ್ ಅಲಿಯಾಸ್ ಶೈಲಜಾ ಉದವತ್ ಎಂದು ಉಲ್ಲೇಖಿಸಿದೆ.

ಬ್ಯಾನರ್ ಮೇಲೆ ಮೊಟ್ಟೆ ಎಸೆದ ಮಹಿಳೆ ಶಿಲ್ಪಾ ರಾಮರಾಜ್‌ ಗರುಡ್ ಅಲಿಯಾಸ್ ಶೈಲಜಾ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾಳೆ ಎಂದು ಸಂಭಾಜಿ ನಗರ ಪೊಲೀಸ್ ಆಯುಕ್ತ ಮನೋಜ್ ಲೋಹಿಯಾ ಅವರು ಹೇಳಿದ್ದಾರೆ ಎಂದು ‘ಆಲ್ಟ್‌ನ್ಯೂಸ್‌’ ವೆಬ್‌ಸೈಟ್ ಫ್ಯಾಕ್ಟ್‌ ಚೆಕ್ ಪ್ರಕಟಿಸಿದೆ. ಮಹಿಳೆಯನ್ನು ಬಂಧಿಸಿ, ಆಕೆಯ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ, ಆಕೆ ಅಂಚೆಕಚೇರಿಯಲ್ಲಿ ಉದ್ಯೋಗದಲ್ಲಿದ್ದಾಳೆ. ಕೌಟುಂಬಿಕ ವ್ಯಾಜ್ಯದ ಕಾರಣಕ್ಕೆ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾಳೆ ಎಂದು ಠಾಣೆಯ ಟ್ವಿಟರ್ ಖಾತೆಯಲ್ಲಿ ವಿವರಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಹಿಳೆಯು ಮಾನಸಿಕವಾಗಿ ಅಸ್ವಸ್ಥಳಾಗಿದ್ದು, ಮುಸ್ಲಿಂ ಸಮುದಾಯಕ್ಕೆ ಸೇರಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಕೆಲವು ಕಿಡಿಗೇಡಿಗಳು ಕೋಮು ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ಈ ರೀತಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಐಸಿಸ್ ಉಗ್ರರಿಂದ ಅಪಹರಿಸಲ್ಪಟ್ಟ ಹಿಂದೂ ಹೆಣ್ಣು ಮಕ್ಕಳನ್ನು ಮಹಿಳಾ ಸೈನಿಕರು ರಕ್ಷಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights